Facebook Twitter Instagram
    Sunday, September 6
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಅಂತಾರಾಷ್ಟ್ರೀಯ»ಇಂದು ಬೆಳಗ್ಗೆ 11ಕ್ಕೆ ಪ್ರಧಾನಿ ಮೋದಿಯವರ ‘ಮನ್ ಕಿ ಬಾತ್’ 100ನೇ ಸಂಚಿಕೆ ವಿಶ್ವದಾದ್ಯಂತ ಪ್ರಸಾರ
    ಅಂತಾರಾಷ್ಟ್ರೀಯ

    ಇಂದು ಬೆಳಗ್ಗೆ 11ಕ್ಕೆ ಪ್ರಧಾನಿ ಮೋದಿಯವರ ‘ಮನ್ ಕಿ ಬಾತ್’ 100ನೇ ಸಂಚಿಕೆ ವಿಶ್ವದಾದ್ಯಂತ ಪ್ರಸಾರ

    April 30, 2023
    Share

    ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರ ಪ್ರಸಿದ್ಧ ‘ಮನ್‌ ಕೀ ಬಾತ್‌’ನ 100ನೇ ಕಂತಿನ ವಿಶೇಷ ಭಾಷಣ ಭಾನುವಾರ ಬೆಳಿಗ್ಗೆ 11 ಗಂಟೆಗೆ ಆಕಾಶವಾಣಿಯಲ್ಲಿ ಪ್ರಸಾರವಾಗಲಿದೆ. 2014ರಲ್ಲಿ ಮೋದಿ ಪ್ರಧಾನಿಯಾದ ಬಳಿಕ ಆರಂಭಿಸಿದ ಈ ರೇಡಿಯೋ ಭಾಷಣದ ಶತಕದ ಸಂಭ್ರಮವನ್ನು ಭರ್ಜರಿ ಯಶಸ್ವಿಗೊಳಿಸಲು ಬಿಜೆಪಿ ಸಕಲ ಸಿದ್ಧತೆ ಮಾಡಿಕೊಂಡಿದ್ದು, ದೇಶಾದ್ಯಂತ 4 ಲಕ್ಷ ಸ್ಥಳಗಳಲ್ಲಿ ಜನರಿಗೆ ಭಾಷಣ ಕೇಳಿಸಲು ಸನ್ನದ್ಧವಾಗಿದೆ. ಜೊತೆಗೆ ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲೂ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

    ಪ್ರತಿ ತಿಂಗಳ ಕೊನೆಯ ಭಾನುವಾರ ಪ್ರಧಾನಿ ಮೋದಿ ‘ಮನ್‌ ಕೀ ಬಾತ್‌’ ಹೆಸರಿನಲ್ಲಿ ರೇಡಿಯೋ ಭಾಷಣ ಮಾಡುತ್ತಾ ಬಂದಿದ್ದಾರೆ. ಪ್ರತಿ ಭಾಷಣದಲ್ಲೂ ಒಂದೊಂದು ವಿಷಯವನ್ನು ಅವರು ಆಯ್ದುಕೊಳ್ಳುತ್ತಾರೆ. ಜೊತೆಗೆ ದೇಶದ ಮೂಲೆಮೂಲೆಯಿಂದ ಅಪರೂಪದ ಸಾಧಕರನ್ನು ಹುಡುಕಿ ಅವರ ಜೊತೆ ಭಾಷಣದ ನಡುವೆ ಮಾತನಾಡುತ್ತಾರೆ. ಇದು ಇಂದು ಅತ್ಯಂತ ಜನಪ್ರಿಯ ರೇಡಿಯೋ ಭಾಷಣವಾಗಿ ಹೊರಹೊಮ್ಮಿದ್ದು, ಇದೀಗ 100ನೇ ಭಾಷಣದ ಮೈಲುಗಲ್ಲನ್ನು ‘ಐತಿಹಾಸಿಕ’ ರೀತಿಯಲ್ಲಿ ಯಶಸ್ವಿಯಾಗಿಸಲು ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ.

    ಮನ್‌ ಕೀ ಬಾತ್‌ 100ನೇ ಕಂತನ್ನು ದೇಶದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಕನಿಷ್ಠ 100 ಕಡೆ ಜನರಿಗೆ ಕೇಳಿಸಲು ಬಿಜೆಪಿ ವ್ಯವಸ್ಥೆ ಮಾಡಿದೆ. ಒಟ್ಟಾರೆ 4 ಲಕ್ಷ ಬೂತ್‌ಗಳಲ್ಲಿ ಶ್ರವಣ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ದೇಶದ ಎಲ್ಲಾ ರಾಜಭವನ ಹಾಗೂ ಬಿಜೆಪಿ ಮುಖ್ಯಮಂತ್ರಿಗಳ ಮನೆಯಲ್ಲಿ ಆಹ್ವಾನಿತ ಗಣ್ಯರಿಗೆ ಭಾಷಣ ಕೇಳಿಸಲು ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಕಳೆದ 99 ಎಪಿಸೋಡ್‌ಗಳಲ್ಲಿ ಮೋದಿ ಮಾತನಾಡಿದ 500ರ ಪೈಕಿ 105 ಜನರನ್ನು ದೆಹಲಿಗೆ ಆಹ್ವಾನಿಸಲಾಗಿದೆ.

    ಎಲ್ಲಾ ರಾಜ್ಯಗಳಿಂದ ಪದ್ಮ ಪ್ರಶಸ್ತಿ ಪುರಸ್ಕೃತರನ್ನು ರಾಜಭವನಕ್ಕೆ ಆಹ್ವಾನಿಸಲಾಗಿದ್ದು, ಅವರು ರಾಜ್ಯಪಾಲರ ಜೊತೆ ಕುಳಿತು ಭಾಷಣ ಆಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
    ‘ಎಲ್ಲಾ ಬಿಜೆಪಿ ಶಾಸಕರು ಹಾಗೂ ಸಂಸದರಿಗೂ ತಮ್ಮ ಕ್ಷೇತ್ರಗಳಲ್ಲಿ ಸಾಕಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಮನ್‌ ಕೀ ಬಾತ್‌ ಭಾಷಣವನ್ನು ಜನರಿಗೆ ಕೇಳಿಸಲು ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ನಡ್ಡಾ ಹಾಗೂ ಪಕ್ಷದ ಹಿರಿಯ ನಾಯಕರು ಈ ಕುರಿತು ಎಲ್ಲೆಡೆ ವಿಡಿಯೋ ಕಾನ್ಫರೆನ್ಸ್‌ಗಳನ್ನು ನಡೆಸಲಿದ್ದಾರೆ. ಹಿಂದೆಂದೂ ಕೇಳರಿಯದ ರೀತಿಯಲ್ಲಿ 4 ಲಕ್ಷ ಸ್ಥಳಗಳಲ್ಲಿ ಭಾಷಣ ಆಲಿಸಲು ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಸಾಕಷ್ಟು ಸಂಘಟನೆಗಳು ಕೂಡ ಭಾಷಣವನ್ನು ಸಾರ್ವಜನಿಕ ಸ್ಥಳಗಳಲ್ಲಿ ಸಾಮೂಹಿಕವಾಗಿ ಕೇಳಿಸಲು ಮುಂದೆ ಬಂದಿವೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಷ್ಯಂತ್‌ ಗೌತಮ್‌ ತಿಳಿಸಿದ್ದಾರೆ.

    ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ದೇಶದ ಎಲ್ಲಾ ಜನರನ್ನು ನೇರವಾಗಿ ತಲುಪಲು ಕಂಡುಕೊಂಡ ಸುಲಭ ಮಾರ್ಗವಾದ ‘ಮನ್‌ ಕೀ ಬಾತ್‌’ ಭಾಷಣ ಇಂದು ಭಾರತವಷ್ಟೇ ಅಲ್ಲ ಬೇರೆ ಬೇರೆ ದೇಶಗಳಲ್ಲೂ ಭಾರತೀಯರ ವಲಯದಲ್ಲಿ ಅತ್ಯಂತ ಜನಪ್ರಿಯವಾಗಿದೆ.

    – 23 ಕೋಟಿ ಜನ: ಇಷ್ಟು ಸರಾಸರಿ ಜನ ಪ್ರತಿ ಮನ್‌ ಕೀ ಬಾತ್‌ ಭಾಷಣವನ್ನು ಆಲಿಸುತ್ತಾರೆ
    – 23 ಭಾಷೆ: ಇಷ್ಟು ಭಾರತೀಯ ಭಾಷೆಗಳಲ್ಲಿ ಮನ್‌ ಕೀ ಬಾತ್‌ ಪ್ರಸಾರವಾಗುತ್ತದೆ
    – 29 ಉಪಭಾಷೆ: ಇಷ್ಟು ಭಾರತೀಯ ಉಪಭಾಷೆಗಳಲ್ಲಿ ಮನ್‌ ಕೀ ಬಾತ್‌ ಬಿತ್ತರಿಸಲಾಗುತ್ತದೆ
    – 11 ವಿದೇಶಿ ಭಾಷೆ: ಇಷ್ಟು ವಿದೇಶಿ ಭಾಷೆಗಳಲ್ಲೂ ಮನ್‌ ಕೀ ಬಾತ್‌ ಪ್ರಸಾರವಾಗುತ್ತದೆ
    – 500 ಸಾಧಕರು: ವಿವಿಧ ಕ್ಷೇತ್ರದ ಇಷ್ಟು ಸಾಧಕರ ಜೊತೆ ಮೋದಿ ಈವರೆಗೆ ಮಾತನಾಡಿದ್ದಾರೆ
    – 19-34 ವರ್ಷ: ಮನ್‌ ಕೀ ಬಾತ್‌ನ ಶ್ರೋತೃಗಳಲ್ಲಿ 72% ಜನ ಈ ವಯೋಮಾನದವರು

    Post Views: 297

    Related Posts

    CID ಪೊಲೀಸರಿಂದ IAS ಅಧಿಕಾರಿ ಗ್ಯಾನೇಂದ್ರ ಕುಮಾರ್ ಅರೆಸ್ಟ್

    August 30, 2026

    ರಾಜ್ಯದಲ್ಲಿ ‘ಪೊಲೀಸ್ ರಾಜ್ ವ್ಯವಸ್ಥೆ’ ಕೊನೆಗೊಳ್ಳಬೇಕು, ಇಲ್ಲವಾದರೆ ನ್ಯಾಯಾಲಯವೇ ಕಠಿಣ ಕ್ರಮ: ಹೈಕೋರ್ಟ್ ಎಚ್ಚರಿಕೆ

    August 28, 2026

    ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ದಿನದ 24 ಗಂಟೆಯೂ ಸುಸ್ಥಿತಿಯಲ್ಲಿರಬೇಕು- ಹೈಕೋರ್ಟ್ ಖಡಕ್ ಆದೇಶ

    August 22, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಪುತ್ತೂರು: ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ವಿದ್ಯಾರ್ಥಿ ಮೃತ್ಯು

    September 6, 2026

    ಪುತ್ತೂರು: ಪೊಲೀಸ್ ಸಿಬ್ಬಂದಿಗೆ ಹಲ್ಲೆ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ: ಮೂವರ ವಿರುದ್ಧ ಪ್ರಕರಣ

    September 6, 2026

    ಕಂಬಳ ಅಭಿವೃದ್ಧಿಗೆ ₹5 ಕೋಟಿ ವಿಶೇಷ ಅನುದಾನ: ಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    September 5, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.