Facebook Twitter Instagram
    Saturday, June 13
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ರಾಜ್ಯ ಸುದ್ದಿ»ನೂತನ ಸಚಿವರಿಗೆ ಖಾತೆ ಹಂಚಿಕೆ, ಅಧಿಕೃತ ಘೋಷಣೆ ಬಾಕಿ: ಯಾರಿಗೆ ಯಾವ ಖಾತೆ ಹಂಚಿಕೆ? ಇಲ್ಲಿದೆ ಪಟ್ಟಿ
    ರಾಜ್ಯ ಸುದ್ದಿ

    ನೂತನ ಸಚಿವರಿಗೆ ಖಾತೆ ಹಂಚಿಕೆ, ಅಧಿಕೃತ ಘೋಷಣೆ ಬಾಕಿ: ಯಾರಿಗೆ ಯಾವ ಖಾತೆ ಹಂಚಿಕೆ? ಇಲ್ಲಿದೆ ಪಟ್ಟಿ

    May 27, 2023
    Share

    ಬೆಂಗಳೂರು: ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾದಂದೆ ಸಿಎಂ ಆಗಿ ಸಿದ್ಧರಾಮಯ್ಯ, ಡಿಸಿಎಂ ಆಗಿ ಡಿ.ಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದ್ದರು. ಅವರೊಂದಿಗೆ 8 ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಈ ಬೆನ್ನಲ್ಲೇ ಇಂದು 24 ಮಂದಿ ಶಾಸಕರು ಸಚಿವರಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದಾರೆ.

    ಈಗ ಸಚಿವರ ಪ್ರಮಾಣವಚನ ಕಾರ್ಯದ ಬೆನ್ನಲ್ಲೇ ಸಚಿವ ಸಂಪುಟ ಹಂಚಿಕೆಯೂ ಚುರುಕು ಪಡೆದಿದೆ.

    ಕಾಂಗ್ರೆಸ್ ಉನ್ನತ ಮೂಲಗಳ ಮಾಹಿತಿಯಂತೆ ಡಿಸಿಎಂ ಡಿ.ಕೆ ಶಿವಕುಮಾರ್ ಗೆ ಬೆಂಗಳೂರು ಅಭಿವೃದ್ಧಿ ಮತ್ತು ಜಲಸಂಪನ್ಮೂಲ ಖಾತೆ ನೀಡಲಾಗುತ್ತಿದೆ. ಡಾ.ಜಿ ಪರಮೇಶ್ವರ್ ಗೆ ಗೃಹಖಾತೆ, ಎಂ.ಬಿ ಪಾಟೀಲ್ ಗೆ ಬೃಹತ್ ಕೈಗಾರಿಕೆ, ಹಿರಿಯ ಸಚಿವ ಹೆಚ್ ಕೆ ಪಾಟೀಲ್ ಗೆ ಕಾನೂನು ಮತ್ತು ಸಂಸದೀಯ ಖಾತೆ ಹಂಚಿಕೆಯಾಗುವ ಸಾಧ್ಯತೆ ಇದೆ.

    ಈಗಾಗಲೇ ಸಚಿವರಿಗೆ ಖಾತೆ ಹಂಚಿಕೆಯ ಬಗ್ಗೆ ಕಾಂಗ್ರೆಸ್ ಹೈಕಮಾಡ್ ಸಿಎಂ ಸಿದ್ಧರಾಮಯ್ಯ ಜೊತೆಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಇಂದು ಸಂಜೆಯೇ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದಂತ ಪಟ್ಟಿಯನ್ನು ರಾಜ್ಯಪಾಲರಿಗೆ ಸಿಎಂ ಕಚೇರಿಯಿಂದ ರವಾನಿಸಲಾಗುತ್ತಿದೆ ಎನ್ನಲಾಗಿದೆ. ಆ ಅದಿಕೃತ ಪಟ್ಟಿಯನ್ನು ಸಿಎಂ ಸಿದ್ದರಾಮಯ್ಯ ಬಿಡುಗಡೆ ಮಾಡಬೇಕಿದೆ. ಹಾಗಾದ್ರೆ ಯಾರಿಗೆ ಯಾವ ಖಾತೆ ಹಂಚಿಕೆ ಎನ್ನುವ ಸಂಭವನೀಯ ಪಟ್ಟಿ ಮುಂದಿದೆ ಓದಿ.

    ಹೀಗಿದೆ ಸಂಭವನೀಯ ಖಾತೆ ಹಂಚಿಕೆ ಪಟ್ಟಿ

    • ಮುಖ್ಯಮಂತ್ರಿ ಸಿದ್ಧರಾಮಯ್ಯ – ವಾರ್ತಾ ಇಲಾಖೆ, ಹಣಕಾಸು, ಆಡಳಿತ ಸುಧಾರಣೆ ಹಾಗೂ ಹಂಚಿಕೆ ಮಾಡದಿರುವಂತ ಇತರೆ ಖಾತೆಗಳು
    • ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ – ಬೆಂಗಳೂರು ಅಭಿವೃದ್ಧಿ ಮತ್ತು ಜಲಸಂಪನ್ಮೂಲ ಖಾತೆ
    • ಡಾ.ಜಿ.ಪರಮೇಶ್ವರ್ – ಗೃಹ ಖಾತೆ
    • ಕೆ.ಹೆಚ್ ಮುನಿಯಪ್ಪ – ಆಹಾರ ಮತ್ತು ನಾಗರೀಕ ಪೂರೈಕೆ ಖಾತೆ
    • ಎಂ.ಬಿ ಪಾಟೀಲ್ – ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆ
    • ಜಮೀರ್ ಅಹ್ಮದ್ ಖಾನ್ – ವಕ್ಫ್ ಮತ್ತು ವಸತಿ ಖಾತೆ
    • ಕೆ.ಜೆ ಜಾರ್ಜ್ – ಇಂಧನ ಖಾತೆ
    • ರಾಮಲಿಂಗಾರೆಡ್ಡಿ – ಸಾರಿಗೆ ಇಲಾಖೆ
    • ಪ್ರಿಯಾಂಕ್ ಖರ್ಗೆ – ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ, ಬಿಟಿ ಖಾತೆ
    • ಸತೀಶ್ ಜಾರಕಿಹೊಳಿ – ಲೋಕೋಪಯೋಗಿ ಖಾತೆ
    • ಹೆಚ್ ಕೆ ಪಾಟೀಲ್ – ಕಾನೂನು ಮತ್ತು ಸಂಸದೀಯ ವ್ಯವಾಹರಗಳ ಖಾತೆ
    • ಚೆಲುವರಾಯಸ್ವಾಮಿ – ಕೃಷಿ ಖಾತೆ
    • ಕೆ.ವೆಂಕಟೇಶ್ – ಪಶುಸಂಗೋಪನೆ ಮತ್ತು ರೇಷ್ಮೆ ಖಾತೆ
    • ಕೃಷ್ಣ ಭೈರೇಗೌಡ – ಕಂದಾಯ ಖಾತೆ
    • ಡಾ.ಹೆಚ್.ಸಿ ಮಹದೇವಪ್ಪ – ಸಮಾಜ ಕಲ್ಯಾಣ ಇಲಾಖೆ
    • ಕೆ.ಎನ್ ರಾಜಣ್ಣ – ಸಹಕಾರ ಇಲಾಖೆ
    • ಈಶ್ವರ್ ಖಂಡ್ರೆ – ಅರಣ್ಯ ಖಾತೆ
    • ದಿನೇಶ್ ಗುಂಡೂರಾವ್ – ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ
    • ಶಿವಾನಂದ ಪಾಟೀಲ್ – ಜವಳಿ ಮತ್ತು ಸಕ್ಕರೆ ಸಚಿವರ ಖಾತೆ
    • ಶರಣ ಬಸಪ್ಪ ದರ್ಶನಾಪೂರ- ಸಣ್ಣ ಕೈಗಾರಿಕೆ ಖಾತೆ
    • ಆರ್ ಬಿ ತಿಮ್ಮಾಪುರ- ಅಬಕಾರಿ ಮತ್ತು ಮುಜರಾಯಿ ಖಾತೆ
    • ಎಸ್ ಎಸ್ ಮಲ್ಲಿಕಾರ್ಜುನ – ಗಣಿಗಾರಿಕೆ ಮತ್ತು ತೋಟಗಾರಿಕೆ ಖಾತೆ
    • ಶಿವರಾಜ ತಂಡರಗಿ – ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ
    • ಮಂಕಾಳೆ ವೈದ್ಯ- ಮೀನುಗಾರಿಕೆ ಖಾತೆ
    • ಡಾ.ಶರಣ ಪ್ರಕಾಶ್ ಪಾಟೀಲ್ – ಉನ್ನತ ಶಿಕ್ಷಣ ಇಲಾಖೆ
    • ಲಕ್ಷ್ಮೀ ಹೆಬ್ಬಾಳ್ಕರ್ – ಮಹಿಳಾ ಮತ್ತು ಮಕ್ಕಳ ಕಲ್ಯಾಣ
    • ರಹೀಂ ಖಾನ್ – ಪೌರಾಡಳಿತ ಇಲಾಖೆ
    • ಸಂತೋಷ್ ಲಾಡ್ – ಕಾರ್ಮಿಕ ಖಾತೆ
    • ಡಿ.ಸುಧಾಕರ್ – ಯೋಜನೆ ಮತ್ತು ಸಾಂಖಿಕ ಇಲಾಖೆ
    • ಭೈರತಿ ಸುರೇಶ್ – ನಗರಾಭೀವೃದ್ಧಿ ಖಾತೆ
    • ಬೋಸರಾಜ್ – ಸಣ್ಣ ನೀರಾವರಿ ಖಾತೆ
    • ಮಧು ಬಂಗಾರಪ್ಪ – ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾಲೆ
    • ಡಾ.ಎಂ.ಪಿ ಸುಧಾಕರ್ – ವೈದ್ಯಕೀಯ ಶಿಕ್ಷಣ ಖಾತೆ
    • ಬಿ.ನಾಗೇಂದ್ರ – ಯುವಜನ ಸೇವೆ ಮತ್ತು ಕ್ರೀಢಾ ಇಲಾಖೆ
    Post Views: 212

    Related Posts

    ಸಿಎಂ ಆದ ಬಳಿಕ ಮೊದಲ ಬಾರಿ ಕರ್ನಾಟಕಕ್ಕೆ ವಿಜಯ್: ಮಂಗಳೂರಿನಲ್ಲಿ ಅಭಿಮಾನಿಗಳ ಅದ್ಧೂರಿ ಸ್ವಾಗತ

    June 12, 2026

    ಐಸ್‌ಕ್ರೀಂ ವಿಚಾರಕ್ಕೆ 5 ವರ್ಷದ ಮಗಳ ಕೊಲೆ: ತಲೆಮರೆಸಿಕೊಂಡಿದ್ದ ತಾಯಿ ಪ್ರಿಯಾಂಕಾ ಅರೆಸ್ಟ್

    June 12, 2026

    ಕೊಲ್ಲೂರಿಗೆ ತಮಿಳುನಾಡು ಸಿಎಂ ವಿಜಯ್ ಭೇಟಿ: ಭಕ್ತರಿಗೆ ಪೊಲೀಸ್ ಇಲಾಖೆ ಮಹತ್ವದ ಸೂಚನೆ

    June 12, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಬಜಪೆ: ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ನಿರಂತರ ಅತ್ಯಾಚಾರ- ಪೋಕ್ಸೋ ಪ್ರಕರಣ ದಾಖಲು

    June 13, 2026

    ಬಂಟ್ವಾಳ : ಅಸ್ವಸ್ಥಗೊಂಡ ವ್ಯಕ್ತಿಯ ಜೀವ ಉಳಿಸಿದ ನೈಟ್ ಬೀಟ್ ಸಿಬ್ಬಂದಿ – ವ್ಯಾಪಕ ಶ್ಲಾಘನೆ

    June 13, 2026

    ಬೆಳ್ತಂಗಡಿ: ವಿವಾಹಿತ ಮಹಿಳೆಯ ಅತ್ಯಾಚಾರ ಪ್ರಕರಣ; ಅಂಚೆ ವಿತರಕ ಸುರೇಶ್ ಬಂಧನ

    June 12, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.