ದೆಹಲಿ: ಎರಡು ಅಥವಾ ಅದಕ್ಕಿಂತ ಹೆಚ್ಚು ಸಕ್ರಿಯ ಔಷಧ ಸಂಯೋಜನೆಯನ್ನು ಒಳಗೊಂಡಿರುವ 14 ಕಾಕ್‌ಟೈಲ್ ಅಥವಾ ಸ್ಥಿರ-ಡೋಸ್ ಸಂಯೋಜನೆಯ(ಎಫ್‌ಡಿಸಿ) ಔಷಧಿಗಳ ತಯಾರಿಕೆ, ಮಾರಾಟ ಮತ್ತು ವಿತರಣೆಯನ್ನು ಸರ್ಕಾರ ನಿಷೇಧಿಸಿದೆ.
ಏನಿದು ಕಾಕ್ಟೈಲ್ ಔಷಧಿ?
ಸ್ಥಿರ-ಡೋಸ್ ಸಂಯೋಜನೆಗಳು(FDCs) ಎಂದರೆ ಮಾತ್ರೆಯೊಂದರಲ್ಲಿ ಒಂದಕ್ಕಿಂತ ಹೆಚ್ಚು ಔಷಧಗಳನ್ನು ತರ್ಕಬದ್ಧವಾಗಿ ಸಂಯೋಜಿಸುವ ಔಷಧಿಗಳಾಗಿವೆ ಮತ್ತು ಇವುಗಳನ್ನು ಕಾಕ್ಟೈಲ್ ಔಷಧಿಗಳೆಂದೂ ಉಲ್ಲೇಖಿಸಲಾಗುತ್ತದೆ.
ಏಕೆ ಬ್ಯಾನ್ ?
ತಜ್ಞರ ಸಮಿತಿಯು, ಬ್ಯಾನ್ ಮಾಡಿರುವ ಎಫ್‌ಡಿಸಿಗಳು ತರ್ಕಬದ್ಧ ಸಂಯೋಜನೆಯನ್ನು ಹೊಂದಿಲ್ಲ.ಇವು ಮನುಷ್ಯರಿಗೆ ಅಪಾಯವನ್ನು ತಂದೊಡ್ಡಬಹುದು. ಸಾರ್ವಜನಿಕ ಹಿತಾಸಕ್ತಿಗಾಗಿ ಈ FDC ಗಳ ತಯಾರಿಕೆ, ಮಾರಾಟ ಅಥವಾ ವಿತರಣೆಯನ್ನು ನಿಷೇಧಿಸುವುದು ಅವಶ್ಯಕವಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.
3 ಕೋಟಿ ಪ್ಯಾಕೇಜ್ ಗಿಟ್ಟಿಸಿದ ಎಲ್‌ಪಿಯು ಪದವೀಧರ!
ನೆಗಡಿ, ಕೆಮ್ಮು, ಉಸಿರಾಟದ ಸೋಂಕುಗಳಿಗೆ ಚಿಕಿತ್ಸೆ ನೀಡಲು ಮುಖ್ಯವಾಗಿ ಬಳಸಲಾಗುವ 14 ಫಿಕ್ಸೆಡ್ ಡೋಸ್ ಔಷಧಿಗಳನ್ನು ನಿಷೇಧಿಸುವುದರ ಜತೆಗೆ ಸುಮಾರು 10 ಫಿಕ್ಸೆಡ್ ಡೋಸ್ ಕಾಂಬಿನೇಷನ್ ಕೆಮ್ಮಿನ ಸಿರಪ್‌ಗಳನ್ನು ಸರ್ಕಾರ ನಿಷೇಧಿಸಿದೆ.