ಬಿಹಾರ:ಭಾನುವಾರದಂದು ಬಿಹಾರದ ಭಾಗಲ್ಪುರದಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದಿದೆ.ವೈರಲ್ ವಿಡಿಯೋಗಳು ಸೇತುವೆಯ ಎರಡು ಭಾಗಗಳು ಒಂದರ ನಂತರ ಒಂದರಂತೆ ಕುಸಿಯುತ್ತಿರುವುದನ್ನು ತೋರಿಸಿದೆ. ಇಲ್ಲಿಯವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎನ್ನಲಾಗಿದೆ.
ಬಿಹಾರ ರಾಜ್ಯದ ಖಗರಿಯಾದ ಆಗುವನಿ ಸುಲ್ತಾನ್ ಗಂಜ್ ನ ಗಂಗಾ ಸೇತುವೆಯನ್ನು 1,717 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.
ಭಾನುವಾರ ಸಂಜೆ 6 ಗಂಟೆ ಸುಮಾರಿಗೆ ಈ ಕುಸಿತ ಸಂಭವಿಸಿದೆ. ಬಿಹಾರ ಸಿಎಂ ನಿತೀಶ್ ಕುಮಾರ್ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ ಮತ್ತು ಕುಸಿತಕ್ಕೆ ಕಾರಣರಾದವರನ್ನು ಗುರುತಿಸುವಂತೆ ಹೇಳಿದ್ದಾರೆ.
ವರದಿಗಳ ಪ್ರಕಾರ, ಸೇತುವೆಯ ಕನಿಷ್ಠ 3 ಅಡಿ ಭಾಗವು ನದಿಗೆ ಕುಸಿದಿದೆ. 2022 ರ ಏಪ್ರಿಲ್‌ನಲ್ಲಿ ಚಂಡಮಾರುತದಿಂದಾಗಿ ಸೇತುವೆಯು ಸ್ವಲ್ಪ ಹಾನಿಗೊಳಗಾಗಿತ್ತು.
ಸೇತುವೆ ಕುಸಿತದ ಬಗ್ಗೆ ನಿತೀಶ್ ಕುಮಾರ್ ಅವರನ್ನು ಬಿಜೆಪಿ ನಿಂದಿಸಿದೆ.ಸೇತುವೆ ಕುಸಿತದ ಬಗ್ಗೆ ಬಿಹಾರ ಸಿಎಂ ನಿತೀಶ್ ಕುಮಾರ್ ವಿರುದ್ಧ ಭಾರತೀಯ ಜನತಾ ಪಕ್ಷ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ಕ್ರಮವಾಗಿ ಸಿಎಂ ಮತ್ತು ಉಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆಯೇ ಎಂದು ಬಿಜೆಪಿ ನಾಯಕ ಅಮಿತ್ ಮಾಳವಿಯಾ ಪ್ರಶ್ನಿಸಿದ್ದಾರೆ.
2020ಕ್ಕೆ ಪೂರ್ಣಗೊಳ್ಳಬೇಕಿದ್ದ ಈ ಸೇತುವೆಯನ್ನು 2015ರಲ್ಲಿ ನಿತೀಶ್ ಕುಮಾರ್ ಉದ್ಘಾಟಿಸಿದ್ದರು. ಈ ಸೇತುವೆ ಎರಡನೇ ಬಾರಿಗೆ ಕುಸಿದಿದೆ. ಈ ಘಟನೆಯನ್ನು ಗಮನದಲ್ಲಿಟ್ಟುಕೊಂಡು ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ತಕ್ಷಣ ರಾಜೀನಾಮೆ ನೀಡುತ್ತಾರೆಯೇ? ಎಂದು ಪ್ರಶ್ನಿಸಿದ್ದಾರೆ.