Facebook Twitter Instagram
    Monday, June 8
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮಂಗಳೂರು: ರಾಡ್ ನಿಂದ ಚುಚ್ಚಿ ಯುವಕನ ಬರ್ಬರ‌ ಹತ್ಯೆ
    ಇತ್ತೀಚಿನ ಸುದ್ದಿ

    ಮಂಗಳೂರು: ರಾಡ್ ನಿಂದ ಚುಚ್ಚಿ ಯುವಕನ ಬರ್ಬರ‌ ಹತ್ಯೆ

    June 5, 2023
    Share

    ಮಂಗಳೂರು; ರಾಡ್ ನಿಂದ ಚುಚ್ಚಿ ಯುವಕನನ್ನು ಬರ್ಬರ‌ವಾಗಿ ಹತ್ಯೆ ಮಾಡಿರುವ ಘಟನೆ ಮಂಗಳೂರಿನ ಕೂಳೂರು ರಾಯಿಕಟ್ಟೆಯಲ್ಲಿ ನಡೆದಿದೆ. ಪಶ್ಚಿಮ‌ ಬಂಗಾಳದ ನಿವಾಸಿ ಬಿಕಾಸ್ ಗುನಿಯಾ(22) ಮೃತ ದುರ್ದೈವಿ. ವಾಸುದೇವ ಗುನಿಯಾ(33) ಕೊಲೆ ಮಾಡಿದಾತ. ಈತನನ್ನು ಕಾವೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ‌ ರಾಡ್‌ನಿಂದ ಎದೆಗೆ ಚುಚ್ಚಿ ಕೊಲೆಗೈದಿದ್ದಾನೆ ಎನ್ನಲಾಗಿದೆ. ಕೊಲೆ‌ಯಾದವರು & ಕೊಲೆ ಆರೋಪಿ ಇಬ್ಬರು ಕೂಡ ಬಂಗಾಳದವರು. ಇಬ್ಬರು ಕೂಡ ಕುಳೂರಿನಲ್ಲಿ ಗಾರೆ ಕೆಲಸ ಮಾಡಿ ಕೊಂಡಿದ್ದರು. ಆರೋಪಿ ವಾಸುದೇವ ಗುನಿಯಾನಿಗೆ ಮೃತ ಬಿಕಾಸ್ ಗುನಿಯಾ ಊರಿನ ಯುವತಿಯ ಜೊತೆ ಮದುವೆಯಾಗಿತ್ತು. ಆತನ ಪತ್ನಿ ಜೊತೆ ಬಿಕಾಸ್ ಗೆ ಅಕ್ರಮ‌ ಸಂಬಂಧ ಇದೆ ಎಂದು ಶಂಕಿಸಿ ಭಾನುವಾರ ಮಧ್ಯಾಹ್ನ ವಾಸುದೇವ ಗುನಿಯಾ ಪಾನಮತ್ತನಾಗಿ ಅಕ್ರಮ ಸಂಬಂಧದ ಬಗ್ಗೆ ಗಲಾಟೆ ಮಾಡಿ ಬಿಕಾಸ್‌ನ ಎದೆಗೆ ರಾಡ್ ನಿಂದ ಚುಚ್ಚಿದ್ದಾನೆ ಎನ್ನಲಾಗಿದೆ.‌ ಇದರಿಂದ ಗಂಭೀರ ಗಾಯಗೊಂಡ ಬಿಕಾಸ್ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆರೋಪಿಯನ್ನು ಬಂಧಿಸಿ ಪೊಲೀಸರು ಮುಂದಿನ ಕ್ರಮವನ್ನು ಕೈಗೊಳ್ಳಲಿದ್ದಾರೆ.

    Post Views: 260

    Related Posts

    ಹುಲಿಕಲ್ ಘಾಟ್‌ನಲ್ಲಿ ಖಾಸಗಿ ಬಸ್‌ಗೆ ಬೆಂಕಿ; 17 ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರು

    June 7, 2026

    ಆನ್‌ಲೈನ್ ಗೇಮ್ ವ್ಯಸನದ ಭೀಕರ ಅಂತ್ಯ: ತಂದೆ-ಅಕ್ಕನನ್ನೇ ಚಾಕುವಿನಿಂದ ಕೊಂದ ಪುತ್ರ

    June 7, 2026

    ಸಾಕು ಪ್ರಾಣಿಯೇ ಜೀವದಾತ! ಬೆಕ್ಕಿನ ಕಾರಣದಿಂದ ಭೀಕರ ದುರಂತದಿಂದ ಪಾರಾದ ಕುಟುಂಬ

    June 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.