ನವದೆಹಲಿ : ಜಗತ್ತು 21ನೇ ಶತಮಾನದಲ್ಲಿದ್ದು, ವ್ಯಾಪಾರ, ತಂತ್ರಜ್ಞಾನ, ಪ್ರಗತಿ ಉತ್ತುಂಗದಲ್ಲಿದೆ. ಆದರೆ ಈ ಸಮಯದಲ್ಲಿಯೂ, ಯಾರಾದರೂ ಆಹಾರ ಮತ್ತು ಚಿಕಿತ್ಸೆಯಿಲ್ಲದೆ ಸಾವನ್ನಪ್ಪಿದರೆ, ಅದು ಆ ದೇಶಕ್ಕೆ ಮತ್ತು ಜಗತ್ತಿಗೆ ನಾಚಿಕೆಗೇಡಿನ ವಿಷಯವಾಗಿದೆ.
ಅಂತಹ ಒಂದು ನೈಜ ಘಟನೆಯನ್ನ ನಾವಿಂದು ಹೇಳಲಿದ್ದೇವೆ. ನಿಮ್ಮ ಕಣ್ಣುಗಳಲ್ಲಿ ಕಣ್ಣೀರು ಬರುತ್ತೆ, ನಿಮ್ಮ ನಿಮ್ಮ ಹೃದಯವು ನಡುಗುತ್ತದೆ. ಸುಡಾನ್’ನ ಅನಾಥಾಶ್ರಮವೊಂದರಲ್ಲಿ ಈ ಘಟನೆ ನಡೆದಿದ್ದು, ಆಹಾರ ಮತ್ತು ಚಿಕಿತ್ಸೆಯಿಲ್ಲದೆ 71 ಮಕ್ಕಳು ಸಾವನ್ನಪ್ಪಿದ್ದಾರೆ. ಹಸಿವು ಮತ್ತು ರೋಗದಿಂದ ಈ ಮಕ್ಕಳ ಸಾವು ಇಡೀ ಜಗತ್ತನ್ನು ಬೆಚ್ಚಿಬೀಳಿಸಿದೆ.
ವರದಿಯ ಪ್ರಕಾರ, ಏಪ್ರಿಲ್ನಿಂದ ಸುಡಾನ್ನಲ್ಲಿ ಹಸಿವು ಮತ್ತು ಕಾಯಿಲೆಯಿಂದ 71 ಮಕ್ಕಳು ಸಾವನ್ನಪ್ಪಿದ್ದಾರೆ. ಘಟನೆಯ ನಂತರ ಕನಿಷ್ಠ 300 ಮಕ್ಕಳನ್ನ ಅನಾಥಾಶ್ರಮದಿಂದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಸುಡಾನ್’ನ ಅಲ್-ಮಕುಮಾ ಅನಾಥಾಶ್ರಮದಲ್ಲಿ ಕಳೆದ ತಿಂಗಳು ಸೇನೆ ಮತ್ತು ಅರೆಸೈನಿಕ ರಾಪಿಡ್ ಸಪೋರ್ಟ್ ಫೋರ್ಸ್ ನಡುವೆ ನಡೆದ ಭೀಕರ ಹೋರಾಟದ ನಡುವೆ ಮಕ್ಕಳ ಸಾವು ಬೆಳಕಿಗೆ ಬಂದಿದೆ.
ಖಾರ್ಟೂಮ್’ನ ಅಲ್ ಮಕುಮಾ ಅನಾಥಾಶ್ರಮದಿಂದ ಕನಿಷ್ಠ 300 ಮಕ್ಕಳನ್ನು ಸ್ಥಳಾಂತರಿಸಲಾಗಿದೆ ಎಂದು ಯುನಿಸೆಫ್ ವಕ್ತಾರ ರಿಕಾರ್ಡೊ ಪಿರೆಸ್ ತಿಳಿಸಿದ್ದಾರೆ. ಸುಡಾನ್’ನ ಸಾಮಾಜಿಕ ಅಭಿವೃದ್ಧಿ ಸಚಿವಾಲಯವು ಮಕ್ಕಳ ಜವಾಬ್ದಾರಿಯನ್ನ ವಹಿಸಿಕೊಂಡಿದ್ದರೆ, ಯುನಿಸೆಫ್ ವೈದ್ಯಕೀಯ ನೆರವು, ಆಹಾರ, ಬೋಧನಾ ಚಟುವಟಿಕೆಗಳು ಮತ್ತು ಕ್ರೀಡೆಗಳ ಜವಾಬ್ದಾರಿಯನ್ನ ವಹಿಸಿಕೊಂಡಿದೆ ಎಂದು ಅವರು ಇಮೇಲ್’ನಲ್ಲಿ ಅಸೋಸಿಯೇಟೆಡ್ ಪ್ರೆಸ್’ಗೆ ತಿಳಿಸಿದ್ದಾರೆ.