ಬೆಂಗಳೂರು : ರಾಜ್ಯ ಸರ್ಕಾರದಿಂದ ( Karnataka Government ) ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಸಲುವಾಗಿ 14 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ( IAS Officer Transfer ) ಮಾಡಿ ಆದೇಶ ಹೊರಡಿಸಿದೆ. ಈ ಮೂಲಕ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಿದೆ.
ಈ ಕುರಿತಂತೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಐಎಎಸ್ ಅಧಿಕಾರಿ ಜಾವೇದ್ ಅಖ್ತರ್ ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೆಡಿಕಲ್ ಎಜುಕೇಷನ್ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯ ಹೊಣೆಗಾರಿಕೆ ವಹಿಸಿದೆ.
ಇನ್ನೂ ಬಿಸಿ ಸತೀಶ ಅವರನ್ನು ಕೊಡಗು ಜಿಲ್ಲಾಧಿಕಾರಿಯಿಂದ ವರ್ಗಾವಣೆ ಮಾಡಿ, ಸುವರ್ಣ ಆರೋಗ್ಯ ಟ್ರಸ್ ಇಡಿಯಾಗಿ ನೇಮಿಸಿದೆ. ಹುದ್ದೆಯ ನಿರೀಕ್ಷೆಯಲ್ಲಿದ್ದಂತ ಡಾ.ಗೋಪಾಲ್ ಕೃಷ್ಣ ಅವರನ್ನು ಕರ್ನಾಟಕ ಮುನಿಸಿಪಲ್ ಡಾಡಾ ಸೊಸೈಟಿಯ ಜೆಡಿ ಹುದ್ದೆಗೆ ನೇಮಕ ಮಾಡಿದೆ.
ಡಾ.ಶಿವಶಂಕರ್ ನ್ ಅವರನ್ನು ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ ಲಿಮಿಟೆಟ್ ನ ಎಂಡಿ ಸ್ಥಾನದಿಂದ ವರ್ಗಾವಣೆ ಮಾಡಿ, ಬೆಂಗಳೂರು ಗ್ರಾಮಾಂತರ ಡಿಸಿಯಾಗಿ ನೇಮಕ ಮಾಡಿದೆ. ಅಕ್ರಮ ಪಾಷ ಅವರನ್ನು ಲೇಬರ್ ಕಮೀಷನರ್ ಸ್ಥಾನದಿಂದ ವರ್ಗಾವಣೆಗೊಳಿಸಿ, ಕೋಲಾರದ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿದೆ.
ಹುದ್ದೆಯ ನಿರೀಕ್ಷೆಯಲ್ಲಿದ್ದಂತ ಗುಂಗು ಬಾಯ್ ರಮೇಶ್ ಮನಕರ್ ಅವರನ್ನು ರಾಜ್ಯ ಮಾಹಿತಿ ಹಕ್ಕು ಆಯೋಗದ ಕಮೀಷನರ್ ಆಗಿ ನೇಮಕ ಮಾಡಿದೆ. ಲತಾ ಆರ್ ಅವರನ್ನು ಬೆಂಗಳೂರು ಗ್ರಾಮಾಂತರ ಡಿಸಿ ಹುದ್ದೆಯಿಂದ ವರ್ಗಾವಣೆ ಮಾಡಿ, ಕರ್ನಾಟಕ ವುಮೆನ್ ಕಮೀಷನ್ ನ ಸೆಕ್ರೇಟರಿಯಾಗಿ ನೇಮಿಸಿದೆ.
ಹೀಗಿದೆ ವರ್ಗಾವಣೆಗೆ ಗೊಂಡ 14 ಐಎಎಸ್ ಅಧಿಕಾರಿಗಳ ಪಟ್ಟಿ
- ಜಾವೇದ್ ಅಖ್ತರ್, ಎಸಿಎಸ್, ಆರೋಗ್ಯ ಇಲಾಖೆ (ವೈದ್ಯಕೀಯ ಶಿಕ್ಷಣ)
- ಬಿ.ಸಿ.ಸತೀಶ್, ಇಡಿ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್
- ಡಾ.ಹೆಚ್.ಎನ್.ಗೋಪಾಲಕೃಷ್ಣ, ಜೆಡಿ, ಮುನ್ಸಿಪಲ್ ಡಾಟಾ ಸೊಸೈಟಿ
- ಡಾ.ಎನ್.ಶಿವಶಂಕರ, ಜಿಲ್ಲಾಧಿಕಾರಿ, ಬೆಂಗಳೂರು ಗ್ರಾಮಾಂತರ
- ಅಕ್ರಂ ಪಾಷಾ, ಜಿಲ್ಲಾಧಿಕಾರಿ, ಕೋಲಾರ
- ಗಂಗೂಬಾಯಿ ರಮೇಶ್ ಮಾನಕರ್, ಕಾರ್ಯದರ್ಶಿ, ರಾಜ್ಯ ಮಾಹಿತಿ ಆಯೋಗ
- ಆರ್.ಲತಾ, ಕಾರ್ಯದರ್ಶಿ, ರಾಜ್ಯ ಮಹಿಳಾ ಆಯೋಗ
- ವೆಂಕಟರಾಜು, ಜಿಲ್ಲಾಧಿಕಾರಿ, ಕೊಡಗು
- ಫೌಝಿಯಾ ತರನುಮ್, ಜಿಲ್ಲಾಧಿಕಾರಿ, ಕಲಬುರಗಿ
- ಎನ್.ಎಂ.ನಾಗರಾಜ್, ಯೋಜನಾ ನಿರ್ದೇಶಕ, ಏಡ್ಸ್ ಪ್ರಿವೆನ್ಷನ್ ಸೊಸೈಟಿ
- ಭನ್ವರ್ ಸಿಂಗ್ ಮೀನಾ, ಸಿಇಒ, ಕಲಬುರಗಿ ಜಿಲ್ಲಾ ಪಂಚಾಯಿತಿ
- ಜಿ.ಲಿಂಗಮೂರ್ತಿ, ವ್ಯವಸ್ಥಾಪಕ ನಿರ್ದೇಶಕ, ಕೆಆರ್ಡಿಸಿಎಲ್
- ಡಾ.ಗಿರೀಶ್ ದಿಲೀಪ್ ಬಾಡೊಲೆ, ಪರೀಕ್ಷಾ ನಿಯಂತ್ರಕ, ಕೆಪಿಎಸ್ಸಿ
- ನೊಂಗ್ಜಾಯ್ ಮೊಹಮ್ಮದ್ ಅಲಿಅಕ್ರಂ ಶಾ, ಆಯುಕ್ತ, ಹಂಪಿ ವಿಶ್ವ ಹೆರಿಟೇಜ್ ಏರಿಯಾ ನಿರ್ವಹಣಾ ಪ್ರಾಧಿಕಾರ