ಬೆಂಗಳೂರು: ಬೆಂಗಳೂರು-ಧಾರವಾಡ , ರಾಣಿ ಕಮಲಾಪತಿ-ಜಬಲ್ಪುರ್ ಸೇರಿದಂತೆ ಒಟ್ಟು ಐದು ವಂದೇ ಭಾರತ್ ರೈಲು ಸಂಚಾರಕ್ಕೆ ಪ್ರಧಾನಿ ಮೋದಿ ಇಂದು ಚಾಲನೆ ನೀಡಲಿದ್ದಾರೆ.ಖಜುರಾಹೊ-ಭೋಪಾಲ್-ಇಂದೋರ್ , ಮಡಗಾಂವ್-ಮುಂಬೈ ಮತ್ತು ಹಟಿಯಾ-ಪಾಟ್ನಾ ಉಳಿದ ನಾಲ್ಕು ವಂದೇ ಭಾರತ್ ಸಂಚರಿಸುವ ಮಾರ್ಗಗಳು. ಈ ಪೈಕಿ ರಾಣಿ ಕಮಲಾಪತಿ-ಜಬಲ್ಪುರ್ ಹೊರತುಪಡಿಸಿ ಉಳಿದ ರೂಟ್‌ಗಳಿಗೆ ವರ್ಚುವಲ್ ಮೂಲಕ ಚಾಲನೆ ನೀಡಲಿದ್ದಾರೆ.ಇದರೊಂದಿಗೆ ಗೋವಾ, ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳು ಮೊದಲ ವಂದೇ ಭಾರತ್ ರೈಲು ಸೇವೆ ಪಡೆಯಲಿವೆ.ಇನ್ನು ಬೆಂಗಳೂರು-ಧಾರವಾಡ ಪ್ರತಿ ಮಂಗಳವಾರ ಹೊರತುಪಡಿಸಿ ಎಲ್ಲ ದಿನಗಳಲ್ಲಿ ರೈಲು ಕಾರ್ಯನಿರ್ವಹಿಸಲಿದೆ. ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಿಂದ ರೈಲು ಸೇವೆ ಆರಂಭವಾಗಿ ಮಧ್ಯೆ ದಾವಣಗೆರೆಯಲ್ಲಿ ಮಾತ್ರ ನಿಲ್ಲುತ್ತದೆ. ವಂದೇ ಭಾರತ್ ರೈಲು ಬೆಂಗಳೂರು-ಧಾರವಾಡ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡಲಿದ್ದು, ಸುಮಾರು ಏಳು ಗಂಟೆಗಳಲ್ಲಿ ಗುರಿ ತಲುಪುತ್ತದೆ.