Facebook Twitter Instagram
    Wednesday, September 16
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ವಿಟ್ಲ: ಸಾಲೆತ್ತೂರಿನ ಹಿಂದು ನಾಯಕತ್ವದ ವಿಚಾರದಲ್ಲಿ ದಂಪತಿಗಳ ಮೇಲೆ‌ ಹಲ್ಲೆ
    ಇತ್ತೀಚಿನ ಸುದ್ದಿ

    ವಿಟ್ಲ: ಸಾಲೆತ್ತೂರಿನ ಹಿಂದು ನಾಯಕತ್ವದ ವಿಚಾರದಲ್ಲಿ ದಂಪತಿಗಳ ಮೇಲೆ‌ ಹಲ್ಲೆ

    June 28, 2023
    Share

    ವಿಟ್ಲ: ಬೈಕ್‌ ನಲ್ಲಿ ಬಂದ ನಾಲ್ವರು ಯುವಕರು ಆಟೋ ರಿಕ್ಷಾ ಅಡ್ಡಗಟ್ಟಿ ಆಟೋದಲ್ಲಿದ್ದವರ ಜತೆ ಜಗಳವಾಡಿ, ಮಹಿಳೆಯ ಮೈ ಮೇಲೆ ಕೈ ಹಾಕಿದ್ದಲ್ಲದೆ, ಅದನ್ನು ತಡೆದ ಆಕೆಯ ಪತಿಯನ್ನು ರಿಕ್ಷಾದಿಂದ ಎಳೆದು ರಸ್ತೆಗೆ ದೂಡಿ ಹಾಕಿ ಮರದ ರೀಪಿನ ತುಂಡಿನಿಂದ ಮುಖಕ್ಕೆ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿರುವ ಘಟನೆ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

    ಮುನ್ನ ಯಾನೆ ಸುದರ್ಶನ, ಶರತ್‌, ಧನರಾಜ್‌, ಉದಯ ಆರೋಪಿಗಳಾಗಿದ್ದು, ಈ ಪೈಕಿ ಸುದರ್ಶನ್‌ಮತ್ತು ಧನರಾಜ್‌ ನನ್ನು ಬಂಧಿಸಲಾಗಿದೆ.

    ಸಾಲೆತ್ತೂರಿನ ಪಾಲ್ತಾಜೆ ನಿವಾಸಿ ಜಯಂತ (32) ಅವರು ಜೂ. 25ರಂದು ಮಗುವಿನ ಚಿಕಿತ್ಸೆಗೆಂದು ಕ್ಲಿನಿಕ್‌ ಗೆ ಪತ್ನಿ ಮಧುಶ್ರೀ ಅವರೊಂದಿಗೆ ಶಿವರಾಮ್‌ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಆಟೋ ರಿಕ್ಷಾದಲ್ಲಿ ತೆರಳುತ್ತಿದ್ದಾಗ ಸದಾಶಿವ ದೇವಸ್ಥಾನಕ್ಕೆ ಹೋಗುವ ದಾರಿ ಬಳಿ ಸಾಲೆತ್ತೂರು ವೈನ್‌ ಶಾಪ್‌ ಕಡೆಯಿಂದ ಎರಡು ಬೈಕ್‌ಗಳಲ್ಲಿ ಮುನ್ನ ಯಾನೆ ಸುದರ್ಶನ್‌, ಶರತ್‌, ಧನು ಮತ್ತು ಉದಯ ಬಂದು ಆಟೋ ರಿಕ್ಷಾವನ್ನು ಅಡ್ಡಗಟ್ಟಿದರು.

    ಸಾಲೆತ್ತೂರಿನ ಹಿಂದೂ ನಾಯಕತ್ವದ ವಿಚಾರದಲ್ಲಿ ಮಾತಿಗೆ ಮಾತು ಬೆಳೆದಾಗ ಮುನ್ನ ಯಾನೆ ಸುದರ್ಶನನು ಜಯಂತ್‌ ಅವರ ಪತ್ನಿಯ ಮೈ ಮೇಲೆ ಕೈ ಹಾಕಿ ದೂಡಿದಾಗ ಜಯಂತ್‌ ಅವರು ಅದನ್ನು ತಡೆದ ಸಂದ‌ರ್ಭದಲ್ಲಿ ಶರತ್‌, ಧನು ಮತ್ತು ಉದಯ ಅವರು ಆಟೋ ರಿಕ್ಷಾದಿಂದ ಎಳೆದು ರಸ್ತೆಗೆ ದೂಡಿ ಹಾಕಿದರು. ಮಾತ್ರವಲ್ಲದೇ ಶರತ್‌ ಅಲ್ಲೇ ಇದ್ದ ಮರದ ರೀಪಿನ ತುಂಡಿನಿಂದ ಜಯಂತ್‌ ಅವರ ಮುಖಕ್ಕೆ ಹೊಡೆದು ಸೊಂಟಕ್ಕೆ ತುಳಿದು ಹಲ್ಲೆ ನಡೆಸಿ ಈ ಬಾರಿ ಬದುಕಿದ್ದೀಯಾ ಮುಂದಕ್ಕೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದಿದ್ದಲ್ಲದೇ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಒಡ್ಡಿರುವುದಾಗಿ ದೂರು ದಾಖಲಾಗಿದೆ.

    Post Views: 253

    Related Posts

    ಉಡುಪಿ: ದೇವಸ್ಥಾನದ ಹುಂಡಿ ಕಳವು ಪ್ರಕರಣ – ಇಬ್ಬರು ಆರೋಪಿಗಳ ಬಂಧನ

    September 15, 2026

    ಬಂಟರು ನಾಯಕತ್ವ ಗುಣ ಉಳ್ಳವರು, ಎಲ್ಲಾ ರಂಗಗಳ ಸಾಧಕರು : ಇನಾಯತ್ ಆಲಿ

    September 15, 2026

    ಮಂಗಳೂರು: ಇನ್‌ಸ್ಟಾಗ್ರಾಂನಲ್ಲಿ ಯುವಕನ ಭಾವಚಿತ್ರವನ್ನು ಅಶ್ಲೀಲ ಫೋಟೋದೊಂದಿಗೆ ಮಾರ್ಫಿಂಗ್ ಮಾಡಿ ಹಣಕ್ಕೆ ಬೇಡಿಕೆ- 5.34 ಲಕ್ಷ ಕಳೆದುಕೊಂಡ ಯುವಕ

    September 15, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಉಡುಪಿ: ದೇವಸ್ಥಾನದ ಹುಂಡಿ ಕಳವು ಪ್ರಕರಣ – ಇಬ್ಬರು ಆರೋಪಿಗಳ ಬಂಧನ

    September 15, 2026

    ಬಂಟರು ನಾಯಕತ್ವ ಗುಣ ಉಳ್ಳವರು, ಎಲ್ಲಾ ರಂಗಗಳ ಸಾಧಕರು : ಇನಾಯತ್ ಆಲಿ

    September 15, 2026

    ಮಂಗಳೂರು: ಇನ್‌ಸ್ಟಾಗ್ರಾಂನಲ್ಲಿ ಯುವಕನ ಭಾವಚಿತ್ರವನ್ನು ಅಶ್ಲೀಲ ಫೋಟೋದೊಂದಿಗೆ ಮಾರ್ಫಿಂಗ್ ಮಾಡಿ ಹಣಕ್ಕೆ ಬೇಡಿಕೆ- 5.34 ಲಕ್ಷ ಕಳೆದುಕೊಂಡ ಯುವಕ

    September 15, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.