ರೇವಾ : ಮಧ್ಯಪ್ರದೇಶದ ರೇವಾ ನಗರದ ಸಿಟಿ ಕೊಟ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರ ಶವವನ್ನು ಆಕೆಯ ಮನೆಯ ಫ್ರೀಜರ್‌ನಿಂದ ಪೊಲೀಸರು ಹೊರತೆಗೆದಿದ್ದಾರೆ. ಈ ಬಗ್ಗೆ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸಿಟಿ ಕೊತ್ವಾಲಿ ಪೊಲೀಸ್ ಠಾಣೆ ಪ್ರಭಾರಿ ವಿಜಯ್ ಸಿಂಗ್ ಮಾತನಾಡಿ, ‘ಸುಮಿತ್ರಿ ಮಿಶ್ರಾ ಅವರ ಶವವನ್ನು ಅವರ ಮನೆಯ ಫ್ರೀಜರ್‌ನಿಂದ ಹೊರತೆಗೆಯಲಾಗಿದೆ.
ಪೋಷಕರ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿದ್ದು, ಈ ವಿಷಯ ಬೆಳಕಿಗೆ ಬಂದಿದೆ. ಎರಡು ದಿನಗಳ ಹಿಂದೆ ಪತಿ ಭರತ್ ಮಿಶ್ರಾ ನಮ್ಮ ಮಗಳನ್ನು ಕೊಂದು ಶವವನ್ನು ಫ್ರೀಜರ್‌ನಲ್ಲಿಟ್ಟಿದ್ದಾನೆ ಎಂದು ಮೃತ ಮಹಿಳೆಯ ತಾಯಿಯ ಕಡೆಯವರು ಆರೋಪಿಸಿದರೆ, ಮುಂಬೈನಿಂದ ಮಗ ಬರಲೆಂದು ಶವವನ್ನು ಫ್ರೀಜರ್‌ನಲ್ಲಿ ಇಟ್ಟಿದ್ದೆ ಎಂದು ಮೃತ ಮಹಿಳೆಯ ಪತಿ ಹೇಳಿಕೊಂಡಿದ್ದಾನೆ.
ಸದ್ಯ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈಗ ಇಡೀ ಪ್ರಕರಣದ ತನಿಖೆ ನಡೆಯುತ್ತಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರವಷ್ಟೇ ಸಾವಿಗೆ ಕಾರಣ ತಿಳಿಯಲಿದೆ ಎಂದು ಠಾಣಾಧಿಕಾರಿ ವಿಜಯ್ ಸಿಂಗ್ ತಿಳಿಸಿದ್ದಾರೆ.