ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಹಲವು ಕಡೆಗಳಲ್ಲಿ ಜುಲೈ 27ರವರೆಗೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೊಷಿಸಲಾಗಿದೆ. ಹಾಸನ, ಯಾದಗಿರಿ, ಕಲಬರಗಿ, ಧಾರವಾಡ, ಬೆಳಗಾವಿ, ಬೀದರ್ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ನೈಋತ್ಯ ಮುಂಗಾರು ಉತ್ತರ ಒಳನಾಡಿನಲ್ಲಿ ತೀವ್ರವಾಗಿತ್ತು, ಕರಾವಳಿಯಲ್ಲಿ ಮತ್ತು ದಕ್ಷಿಣ ಒಳನಾಡಿನಲ್ಲಿ ಚುರುಕಾಗಿತ್ತು. ಕ್ಯಾಸಲ್ರಾಕ್, ಯಲ್ಲಾಪುರ, ಕಾರ್ಕಳ, ಸಿದ್ದಾಪುರ,ಕದ್ರಾ, ಮಂಚಿಕೆರೆ, ಜೋಯಿಡಾ, ಲೋಂಡಾ, ಶೃಂಗೇರಿ, ಕೊಪ್ಪ, ಕೊಲ್ಲೂರು, ಜಯಪುರ, ಲಿಂಗನಮಕ್ಕಿ, ಗೇರುಸೊಪ್ಪ, ಸಿದ್ದಾಪುರ, ಬೆಳ್ತಂಗಡಿ, ತಾಳಗುಪ್ಪ, ಕಮ್ಮರಡಿ, ಕೊಟ್ಟಿಗೆಹಾರ, ಸೋಮವಾರಪೇಟೆ, ಪುತ್ತೂರು, ಧರ್ಮಸ್ಥಳದಲ್ಲಿ ಭಾರೀ ಮಳೆಯಾಗಿದೆ.