ಕಾಸರಗೋಡು: ಜಿಲ್ಲಾ ನೋಂದಾಣಿಧಿಕಾರಿ ವಾಸಸ್ಥಳದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಟಿ .ಇ ಮುಹಮ್ಮದ್ ಅಶ್ರಫ್ (55) ಮೃತಪಟ್ಟವರು.ಕಾಸರಗೋಡು ಜಿಲ್ಲಾ ನೋಂದಣಿ ಅಧಿಕಾರಿಯಾಗಿದ್ದ ಇವರು, ಮೂಲತಃ ಮಲಪ್ಪುರಂ ನಿವಾಸಿ. ನಗರ ಹೊರವಲಯದ ಹೋಟೆಲ್ ವೊಂದರಲ್ಲಿ ರೂಂ ಪಡೆದು ವಾಸ್ತವ್ಯ ಹೂಡಿದ್ದರು.ಇನ್ನು ಬೆಳಿಗ್ಗೆ ಅಶ್ರಫ್ ರವರು ರೂಂ ನಿಂದ ಹೊರಬರದೆ ಇದ್ದುದರಿಂದ ಸಂಶಯಗೊಂಡು ಅವರ ಮೊಬೈಲ್ ಗೆ ಕರೆಮಾಡಿದಾಗ ತೆಗೆಯದೆ ಇದ್ದಾಗ ಬಾಗಿಲು ತೆರೆದು ನೋಡಿದಾಗ ಕುಸಿದು ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆಸ್ಪತ್ರೆಗೆ ತಲಪಿಸಿ ತಪಾಸಣೆ ನಡೆಸಿದಾಗ ಮೃತಪಟ್ಟಿರುವುದಾಗಿ ವೈದ್ಯರು ದೃಡೀಕರಿಸಿದರು.ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ. ಜುಲೈ 19 ರಂದು ಇವರು ಈ ಹೋಟೆಲ್ ನಲ್ಲಿ ರೂಂ ಪಡೆದಿದ್ದರು.