ಬೆಂಗಳೂರು: ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಐವರು ಶಂಕಿತ ಉಗ್ರರನ್ನು ಸಿಸಿಬಿ ಪೊಲೀಸರು ( CCB Police ) ಬಂಧಿಸಿದ್ದರು. ಈ ಬೆನ್ನಲ್ಲೇ ಶಂಕಿತ ಉಗ್ರರಿಗೆ ಗನ್ ಸಪ್ಲೈ ಮಾಡುತ್ತಿದ್ದ ಜಾಡನ್ನು ಕೂಡ ಪತ್ತೆ ಹಚ್ಚಿದ್ದಾರೆ.
ಬೆಂಗಳೂರಿನಲ್ಲಿ ಬಂಧಿಸಿದಂತ ಶಂಕಿತ ಐವರು ಉಗ್ರರನ್ನು ಸಿಸಿಬಿ ಪೊಲೀಸರು ಹೆಚ್ಚಿನ ವಿಚಾರಣೆ ಮಾಡಿದಾಗ, ಜೂನ್ ಲ್ಲಿ ತುಮಕೂರು ರಸ್ತೆಯ ಟಿ.ಬೇಗೂರಿನಲ್ಲಿ ಗನ್ ಇದ್ದ ಬ್ಯಾಗ್ ಅನ್ನು ಶಂಕಿತ ಉಗ್ರ ರಬ್ಬಾನಿ ಪಡೆದಿದ್ದನು.
ಆ ಬಗ್ಗೆ ಜೈಲಿನಲ್ಲಿ ಪರಿಚಯವಾಗಿದ್ದ ಪೋಕ್ಸೋ ಕೇಸ್ ಆರೋಪಿ ಬ್ಯಾಗ್ ತರ್ತಾನೆ ಎಂದು ಜುನೈದ್ ಕೂಡ ಹೇಳಿದ್ದ. ಅದರಂತೆ ಆತ ಹೇಳಿದ ವ್ಯಕ್ತಿಯಿಂದ ರಬ್ಬಾನಿ ಗನ್ ಇದ್ದ ಬ್ಯಾಗ್ ಪಡೆದಿದ್ದನು. ಅದನ್ನು ರಬ್ಬಾನಿ ತಬ್ರೇಜ್ ಗೆ ಕೊಟ್ಟಿದ್ದನೆಂಬ ಮಾಹಿತಿ ಸಿಕ್ಕಿತ್ತು.
ಈ ಹಿನ್ನಲೆಯಲ್ಲಿ ಗನ್ ಯಾರು ಕೊಟ್ಟಿದ್ದು ಎನ್ನುವ ಬಗ್ಗೆ ಸಿಸಿಬಿ ಪೊಲೀಸರು ಮಾಹಿತಿ ಕಲೆ ಹಾಕಿದಾಗ, ಆರ್ ಟಿ ನಗರ ಹೆಬ್ಬಾಳದ ಕಡೆಯುವರು ಎಂಬ ಶಂಕೆ ವ್ಯಕ್ತವಾಗಿದೆ. ಅಲ್ಲದೇ ಹೆಬ್ಬಾಳದ ಬಳಿಯ ಆಸ್ಪತ್ರೆಯೊಂದರಲ್ಲಿ ಗನ್ ತಂದುಕೊಟ್ಟವರ ಚಹರೆಯನ್ನು ಕೂಡ ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಸಿಸಿಟಿವಿ ದಾಖಲಾಗಿರುವಂತ ದೃಶ್ಯಾವಳಿಯಲ್ಲಿ ಕಪ್ಪು ಬಣ್ಣದ ಕಾರಿನಲ್ಲಿ ವ್ಯಕ್ತಿಯೊಬ್ಬ ಗನ್ ತಂದು ಕೊಟ್ಟು ಹೋಗಿರುವ ಸುಳಿವು ಸಿಕ್ಕಿದೆ. ಹೀಗಾಗಿ ಸಿಸಿಬಿ ಅಧಿಕಾರಿಗಳು ತುಮಕೂರು ರಸ್ತೆಯ ಸಿಸಿಟಿವಿ, ಹೆಬ್ಬಾಳ ಸಿಸಿಟಿವಿಯ ದೃಶ್ಯಾವಳಿಗನ್ನು ಹೋಲಿಕೆ ಮಾಡಿ, ಗನ್ ತಂದುಕೊಟ್ಟವನನ್ನು ಪತ್ತೆ ಹಚ್ಚಿ, ಬಂಧಿಸೋ ಕಾರ್ಯದಲ್ಲಿ ತೊಡಗಿದ್ದಾರೆ.