ಮಂಗಳೂರು: ಎರಡು ಮೂರು ದಿನಗಳಿಂದ ಮಂಗಳೂರಿನಲ್ಲಿ ಗೂಡಂಗಡಿ ಹಾಗೂ ಬೀದಿಬದಿ ವ್ಯಾಪಾರಿಗಳನ್ನು ಮಟ್ಟ ಹಾಕಲು ಮತ್ತು ಸಿಗರೇಟು ಬಾಂಗ್ ಗಳಂತಹ ಮಾದಕ ಪದಾರ್ಥಗಳನ್ನು ಮಾರುವುದು ಹಾಗೂ ಉಪಯೋಗಿಸುವುದನ್ನು ನಿಲ್ಲಿಸುವ ಒಳ್ಳೆಯ ಉದ್ದೇಶದಿಂದ ಮಂಗಳೂರು ಮಹಾನಗರಪಾಲಿಕೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಪರವಾನಿಗೆ ಇಲ್ಲದ ಗೂಡಂಗಡಿಗಳನ್ನು ತೆರವು ಮಾಡುವ ಕಾರ್ಯ ನಡೆಯುತ್ತಿದೆ.
ಇಂತಹ ಸಂದರ್ಭದಲ್ಲಿ ಮಂಗಳೂರಿನ ಹೃದಯ ಭಾಗದಲ್ಲಿರುವ ಸೆಂಟ್ರಲ್ ರೈಲು ನಿಲ್ದಾಣದ ಜಾಗ ಹಾಗೂ ಎದುರು ಭಾಗದಲ್ಲಿ ಒಂದು ಗೂಡಂಗಡಿಯನ್ನು ಇರಿಸಲಾಗಿದೆ. ಇದರಲ್ಲಿ ರೈಲ್ವೆ ಅಧಿಕಾರಿಗಳು ಮತ್ತು ರೈಲ್ವೆ ಪೊಲೀಸರು ಶಾಮೀಲಾಗಿರಬಹುದೆಂದು ಸಂಶಯಿಸಲಾಗಿದೆ.
ಅನಧಿಕೃತ ಗೂಡಂಗಡಿಯು ತಲೆ ಎತ್ತಿದ್ದು, ಮಹಾನಗರ ಪಾಲಿಕೆ ಮತ್ತು ರೈಲ್ವೇ ಅಧಿಕಾರಿಗಳು ತಕ್ಷಣ ತೆರವುಗೊಳಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.