ಬೆಂಗಳೂರು: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಸಲುವಾಗಿ 46 ಗ್ರೇಡ್-1 ಹಾಗೂ ಗ್ರೇಡ್-2 ದರ್ಜೆಯ ತಹಶೀಲ್ದಾರ್ ಅವರನ್ನು ವರ್ಗಾವಣೆ ಮಾಡಿ ಆದೇಶಿಸಿದೆ.
ಕಂದಾಯ ಇಲಾಖೆಯ ತಹಶೀಲ್ದಾರ್ ಗ್ರೇಡ್-1 ಮತ್ತು ತಹಶೀಲ್ದಾರ್ ಗ್ರೇಡ್-2 ವೃಂದದ ಅಧಿಕಾರಿಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಠಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಆದೇಶಿಸಿದೆ.
ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ತಹಶೀಲ್ದಾರ್ ಗ್ರೇಡ್-1 ಅಂಜುಂ ತಬಸುಮ್ ಅವರನ್ನು ಪ್ರಸ್ತುತ ನಿರ್ವಹಿಸುತ್ತಿರುವ ಸ್ಥಳದಲ್ಲಿಯೇ ಮುದುವರೆಸಿದೆ. ಬೇಲೂರು ತಾಲೂಕು ತಹಶೀಲ್ದಾರ್ ಮಮತ.ಎಂ ಅವರುನ್ನು ಪ್ರಸ್ತುತ ನಿರ್ವಹಿಸುತ್ತಿರುವ ಸ್ಥಳದಲ್ಲಿಯೇ ಮುಂದುವರೆಸಿದೆ.
ಕುರಗೋಡು ತಾಲ್ಲೂಕು ತಹಶೀಲ್ದಾರ್ ಗುರುರಾಜ್ ಎಂ ಚಲವಾದಿ ಅವರನ್ನು ಬಳ್ಳಾರಿ ತಾಲೂಕು ತಹಶೀಲ್ದಾರ್ ಆಗಿ ವರ್ಗಾವಣೆ ಮಾಡಿದೆ. ಬೀದರ್ ನ ಚಿಟಗುಪ್ಪಾ ತಾಲೂಕು ತಹಶೀಲ್ದಾರ್ ರವೀಂದ್ರ ದಾಮ ಅವರನ್ನು ಅಲ್ಲಿಯೇ ಮುಂದುವರೆಸಿದೆ.
ಸ್ಥಳ ನಿಯುಕ್ತಿಯ ನಿರೀಕ್ಷೆಯಲ್ಲಿದ್ದಂತ ತಹಶೀಲ್ದಾರ್ ಗ್ರೇಡ್-2 ವೈ.ಕೆ ಗುರುಪ್ರಸಾದ್ ಅವರನ್ನು ಚಾಮರಾಜನಗರದ ಹನೂರು ತಾಲ್ಲೂಕು ತಹಶೀಲ್ದಾರ್ ಆಗಿ ನಿಯೋಜಿಸಿದೆ. ಕಾಗವಾಡ ತಹಶೀಲ್ದಾರ್ ಮುಜಫರ ಎನ್ ಬಳಿಗಾರ ಅವರನ್ನು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಹಶೀಲ್ದಾರ್ ಆಗಿ ವರ್ಗಾವಣೆ ಮಾಡಿದೆ.