ಬೆಂಗಳೂರು: ಪ್ರವೀಣ್ ಸೂದ್ ಅವರು ಸಿಬಿಐಗೆ ನೇಮಕಗೊಂಡ ನಂತ್ರ, ಅವರ ತೆರವಾದ ಸ್ಥಾನಕ್ಕೆ ರಾಜ್ಯ ಸರ್ಕಾರದಿಂದ ಡಾ.ಅಲೋಕ್ ಮೋಹನ್ ( Dr Alok Mohan IPS ) ಅವರನ್ನು ರಾಜ್ಯದ ನೂತನ ಪೊಲೀಸ್ ಮಹಾ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿತ್ತು. ತಾತ್ಕಾಲಿಕ ನೇಮಕಾತಿಯನ್ನು, ಈಗ ಅಧಿಕೃತಗೊಳಿಸಿ ಆದೇಶಿಸಿದೆ.
ಈ ಕುರಿತಂತೆ ರಾಜ್ಯ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದೆ. ಡಾ.ಅಲೋಕ್ ಮೋಹನ್, ಐಪಿಎಸ್ (ಕೆಎನ್: 1987) ಪೊಲೀಸ್ ಮಹಾನಿರ್ದೇಶಕರು ಮತ್ತು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಮಹಾನಿರ್ದೇಶಕರು, ಗೃಹರಕ್ಷಕ ದಳದ ಕಮಾಂಡೆಂಟ್ ಜನರಲ್, ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (ಎಸ್ಡಿಆರ್‌ಎಫ್) ಮಹಾನಿರ್ದೇಶಕರು, ಕರ್ನಾಟಕ ರಾಜ್ಯದ ನಾಗರಿಕ ರಕ್ಷಣಾ ನಿರ್ದೇಶಕರನ್ನಾಗಿ ಈಗಾಗಲೇ ನೇಮಿಸಲಾಗಿತ್ತು ಎಂದಿದೆ.
ಈಗ ಮಹಾನಿರ್ದೇಶಕರಾಗಿ ಮತ್ತು ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಪೊಲೀಸ್ ಪಡೆಯ ಮುಖ್ಯಸ್ಥ) ಆಗಿ ನೇಮಿಸಲಾಗಿದೆ. ಐಪಿಎಸ್ (ವೇತನ) ನಿಯಮಗಳು, 2016 ರ ವೇತನ ಮ್ಯಾಟ್ರಿಕ್ಸ್ ನಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಅಸ್ತಿತ್ವದಲ್ಲಿರುವ ಖಾಲಿ ಹುದ್ದೆಗಳಲ್ಲಿ ಮುಂದಿನ ಆದೇಶದವರೆಗೆ 25,000 / – (ಸ್ಥಿರ) ನಿಗದಿಪಡಿಸಲಾಗಿದೆ ಎಂದು ಹೇಳಿದೆ.