ಬೆಂಗಳೂರು: ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕೊಡುವ ರಾಷ್ಟ್ರಪತಿ ಪದಕ ಈ ಬಾರಿ ಕರ್ನಾಟಕದ 20 ಪೊಲೀಸ್ ಅಧಿಕಾರಿಗಳಿಗೆ ಘೋಷಿಸಿಸಲಾಗಿದೆ.
ಕರ್ನಾಟಕ ರಾಜ್ಯದ 20 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದು, ಐಪಿಎಸ್ ಅಧಿಕಾರಿಗಳಾದ ಸಿಮಂತ್ ಕುಮಾರ್ ಸಿಂಗ್, ಎಸ್. ಮುರುಗನ್, ಸಂದೀಪ್ ಪಾಟೀಲ್, ಸಿಐಡಿ ಎಸ್ಪಿ ರಾಘವೇಂದ್ರ ಕೆ.ಹೆಗ್ಡೆ, ಬಿ. ಎಸ್. ಮೋಹನ್ ಕುಮಾರ್, ಶಿವಶಂಕರ್, ಎಂ.ಬಿ.ಎನ್. ಶ್ರೀನಿವಾಸ್, ಅನಿಲ್ ಕುಮಾರ್. ಪಿ. ಸೇರಿದಂತೆ ಒಟ್ಟು 20 ಮಂದಿ ಅಧಿಕಾರಿಗಳ ಹೆಸರು ಘೋಷಣೆಯಾಗಿದೆ.
ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ರತಿ ವರ್ಷ ಕೂಡ ಸಾಧಕ ಪೊಲೀಸರಿಗೆ ರಾಷ್ಟ್ರಪತಿ ಪದಕ ನೀಡಲಾಗುತ್ತದೆ.