Facebook Twitter Instagram
    Saturday, March 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಕಾಸರಗೋಡು: ರೈಲು ಹಳಿಯಲ್ಲಿ ಕಲ್ಲು, ತುಂಡಾದ ಕ್ಲೋಸೆಟ್ ಪತ್ತೆ-ತಪ್ಪಿದ ಅಪಾಯ
    ಇತ್ತೀಚಿನ ಸುದ್ದಿ

    ಕಾಸರಗೋಡು: ರೈಲು ಹಳಿಯಲ್ಲಿ ಕಲ್ಲು, ತುಂಡಾದ ಕ್ಲೋಸೆಟ್ ಪತ್ತೆ-ತಪ್ಪಿದ ಅಪಾಯ

    August 17, 2023
    Share

    ಕಾಸರಗೋಡು : ರೈಲು ಹಳಿಯಲ್ಲಿ ಕಲ್ಲು ಹಾಗೂ ತುಂಡಾದ ಕ್ಲೋಸೆಟ್ ಪತ್ತೆಯಾದ ಘಟನೆ ಕಾಸರಗೋಡಿನ ಕೋಟಿಕುಲಂ ಎಂಬಲ್ಲಿ ಇಂದು ಮಧ್ಯಾಹ್ನ ಬೆಳಕಿಗೆ ಬಂದಿದ್ದು, ಇದರಿಂದ ಭಾರೀ ಅಪಾಯ ತಪ್ಪಿದೆ.

    ಕೋಟಿಕುಲಂನ ಚೆಂಬರಿಕ ಸುರಂಗ ಸಮೀಪ ಈ ಘಟನೆ ನಡೆದಿದೆ.

    ಕಾಸರಗೋಡಿನಿಂದ ಹೊರಟ ಕೊಯಮುತ್ತೂರು – ಮಂಗಳೂರು ಇಂಟರ್ ಸಿಟಿ ಎಕ್ಸ್ ಪ್ರೆಸ್ ರೈಲಿನ ಲೋಕೊ ಪೈಲಟ್ ಇದನ್ನು ಗಮನಿಸಿದ್ದು, ರೈಲು ಹಾದು ಹೋಗುವ ಸಂದರ್ಭ ಏನೋ ಬಡಿದ ಶಬ್ದ ಕೇಳಿದ್ದು, ಇದರಿಂದ ಕಾಸರಗೋಡು ರೈಲ್ವೆ ಅಧಿಕಾರಿಗೆ ಮಾಹಿತಿ ನೀಡಿದ್ದರು.

    ರೈಲ್ವೆ ಪೊಲೀಸರು ಹಾಗೂ ರೈಲ್ವೆ ಭದ್ರತಾ ಪಡೆ ಸ್ಥಳಕ್ಕೆ ಬಂದು ತಪಾಸಣೆ ನಡೆಸಿದಾಗ ಹಳಿಯಲ್ಲಿ ಕಲ್ಲು ಹಾಗೂ ತುಂಡಾದ ಕ್ಲೋಸೆಟ್ ಪತ್ತೆಯಾಗಿದೆ .

    ಈ ಬಗ್ಗೆ ತನಿಖೆ ಆರಂಭಿಸಲಾಗಿದೆ. ಸಮೀಪದ ಸಿಸಿಟಿವಿ ಕ್ಯಾಮರ ದೃಶ್ಯಗಳನ್ನು ಕಲೆ ಹಾಕಲಾಗುತ್ತಿದೆ. ಕಣ್ಣೂರು – ಕಾಸರಗೋಡು ನಡುವೆ ಕೆಲ ದಿನಗಳಿಂದ ರೈಲುಗಳ ಮೇಲೆ ಕಲ್ಲೆಸೆದ ಘಟನೆಗಳು ನಡೆದಿದ್ದು, ಇದರ ಬಳಿಕ ಇದೀಗ ರೈಲು ಹಳಿಯಲ್ಲಿ ನಡೆದಿರುವ ಇಂತಹ ಕೃತ್ಯಗಳು ಸಂಶಯಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    Post Views: 191

    Related Posts

    ವಿಟ್ಲ: ಸೈಕಲ್ ನಿಂದ ಬಿದ್ದು ಬಾಲಕ ಮೃತ್ಯು!

    March 7, 2026

    ಬಂಟ್ವಾಳ: ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ – ಅಂಚೆ ಇಲಾಖೆ ವಿರುದ್ಧ ಕೇಸ್‌

    March 7, 2026

    ಕಾರ್ಕಳ: ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿ ಅರೆಸ್ಟ್

    March 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.