ಬೆಂಗಳೂರು: ಅತ್ಯಾಚಾರದಂತ ಪ್ರಕರಣಗಳು ನಡೆದಾಗ, ಆ ಬಗ್ಗೆ ಶೀಘ್ರವೇ ಪ್ರಕರಣ ದಾಖಲಿಸಿ, ಸಂತ್ರಸ್ತೆಗೆ ರಕ್ಷಣೆ ನೀಡಿ, ಆರೋಪಿಗಳನ್ನು ಬಂಧಿಸೋ ಕೆಲಸವನ್ನು ಪೊಲೀಸರು ಮಾಡಬೇಕು. ಆದ್ರೇ ಆ ಕೆಲಸ ಮಾಡದೇ ರಾಜಿ ಸಂಧಾನಕ್ಕೆ ಇಳಿದಂತ ಬೆಂಗಳೂರಿನ ಬಸವೇಶ್ವನಗರ ಪೊಲೀಸ್ ಠಾಣೆಯ ಪಿಎಸ್‌ಐ ಅನ್ನು ಅಮಾನತುಗೊಳಿಸಲಾಗಿದೆ.
ಹೌದು ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆಗೆ ರಾಜೀ ಮಾಡಿಸಲು ಯತ್ನಿಸಿದ ಸಂಬಂಧ ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯ ಪಿಎಸ್‌ಐ ಸತೀಶ್ ಅವರನ್ನು ಅಮಾನತುಗೊಳಿಸಲಾಗಿದೆ.
ಬಸವೇಶ್ವನಗರ ಪೊಲೀಸ್ ಠಾಣೆಯ ಪಿಎಸ್‌ಐ ಸತೀಶ್ ಅವರು ಅತ್ಯಾಚಾರ ಸಂತ್ರಸ್ತೆಯನ್ನು ಆರೋಪಿ ಜೊತೆ ರಾಜಿ ಮಾಡಿಸಲು ಯತ್ನ ನಡೆಸಿದ್ದರಂತೆ. ಅಲ್ಲದೇ ತನಿಖೆ ವೇಳೆ ಅಸಭ್ಯವಾಗಿ ವರ್ತಿಸಿದ್ದಲ್ಲದೇ, ಹಣ ಕೂಡ ಕೇಳಿದ್ದ ಆರೋಪ ಇತ್ತು.
ಈ ಸಂಬಂಧ ಸಂತ್ರಸ್ತೆ ಬಸವೇಶ್ವರನಗರ ಠಾಣೆಯ ಪಿಎಸ್‌ಐ ಸತೀಶ್ ವಿರುದ್ಧ ದೂರು ನೀಡಿದ್ದರು. ಈ ದೂರಿನ ಹಿನ್ನಲೆಯಲ್ಲಿ ತನಿಖೆ ನಡೆಸಿದ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ಅವರು, ಪಿಎಸ್‌ಐ ಸತೀಶ್ ಅವರ ವಿರುದ್ಧದ ತನಿಖಾ ವಿಚಾರಣೆ ಬಾಕಿ ಉಳಿಸಿ, ಅಮಾನತುಗೊಳಿಸಿ ಆದೇಶಿಸಿದ್ದಾರೆ.