ಬೆಂಗಳೂರು : ಚಂದ್ರಯಾನ-3 ಲ್ಯಾಂಡರ್ ಮಾಡ್ಯೂಲ್ ಚಂದ್ರನ ಮೇಲೆ ಬುಧವಾರ ಸಂಜೆ 06.03ಕ್ಕೆ ಯಶಸ್ವಿಯಾಗಿ ಇಳಿದಿದ್ದು , ಇಸ್ರೋ ಛಲಕ್ಕೆ ಹೊಸದೊಂದು ಬಲ ದೊರಕಿದ್ದು ಭಾರತದ ವೈಜ್ಞಾನಿಕ ಶಕ್ತಿಯ ಅನಾವರಣವಾಗಿ ಜಗತ್ತಿಗೆ ಮತ್ತೊಮ್ಮೆ ಬೆಳಕು ಚಲ್ಲಿದೆ.
ನಾಲ್ಕು ವರ್ಷಗಳಲ್ಲಿ ಇಸ್ರೋದ ಎರಡನೇ ಪ್ರಯತ್ನದಲ್ಲಿ ಚಂದ್ರಯಾನ-3 ಮಿಷನ್ ಚಂದ್ರನ ಮೇಲೆ ಸ್ಪರ್ಶಿಸುವಲ್ಲಿ ಮತ್ತು ರೋಬೋಟಿಕ್ ಲೂನಾರ್ ರೋವರ್ ಅನ್ನು ಲ್ಯಾಂಡಿಂಗ್ ಮಾಡುವಲ್ಲಿ ಯಶಸ್ವಿಯಾಗಿದ್ದು, ಯುಎಸ್ ನಂತರ ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್ ತಂತ್ರಜ್ಞಾನ ಯಶಸ್ಸು ಪಡೆದುಕೊಂಡ ನಾಲ್ಕನೇ ದೇಶ ಭಾರತವಾಗಿದೆ.
ಚೀನಾ ಮತ್ತು ಹಿಂದಿನ ಸೋವಿಯತ್ ಒಕ್ಕೂಟ ಯಶಸ್ವಿ ಯಾಗಿದ್ದವು.
ಇಸ್ರೋ ವಿಜ್ಞಾನಿಗಳು ಚಂದ್ರಯಾನ-3 ನ್ನು ಚಂದ್ರನ ಮೇಲ್ಮೈ ಮೇಲೆ ಮೃದುವಾಗಿ ಇಳಿಸಲು ಸಾಕಷ್ಟು ಎಚ್ಚರಿಕೆಗಳನ್ನು ತೆಗೆದುಕೊಂಡಿದ್ದರು.