ಉಡುಪಿ : ಆನ್ಲೈನ್ ನಲ್ಲಿ ಲೋನ್ ಪಡೆದಂತ ವ್ಯಕ್ತಿ ಒಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ತಮ್ಮ ಮನೆಯಲ್ಲಿ ಸೀಲಿಂಗ್ ಫ್ಯಾನ್ ಗೆ ನೀನು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಳ್ಳಿ ಗ್ರಾಮದಲ್ಲಿ ನಡೆದಿದೆ.
ಖಾಸಗಿ ಕಂಪನಿಯ ಉದ್ಯೋಗಿ ಶಿವಳ್ಳಿ ಗ್ರಾಮದ ಹುಡ್ಕೋ ಕಾಲೊನಿ ನಿವಾಸಿ ರಾಘವೇಂದ್ರ ಎ.
ಶಾನಭಾಗ (49) ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ.ರಾಘವೇಂದ್ರ ಅವರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಇತ್ತೀಚಿಗೆ ಆನ್ಲೈನ್ ಮುಖಾಂತರ ಲೋನ್ ಪಡೆದುಕೊಂಡಿದ್ದರು.
ಇದರಿಂದ ಅವರಿಗೆ ಪದೇಪದೇ ಕರೆ ಬರುತ್ತಿದ್ದವು ಎನ್ನಲಾಗುತ್ತಿದೆ. ಇದೇ ಕಾರಣಕ್ಕೋ ಅಥವಾ ಬೇರೆ ಇನ್ಯಾವುದೋ ಕಾರಣಕ್ಕೋ ಜೀವನದಲ್ಲಿ ಜಿಗುಪ್ಸೆಗೊಂಡಿದ್ದರು.ಶನಿವಾರ ತಾನು ವಾಸವಿದ್ದ ಮನೆಯ ಮಹಡಿಯಲ್ಲಿನ ಹ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಲ್ಲದೆ ಕಳೆದ ತಿಂಗಳು ಬೆಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿ ಒಬ್ಬ ತನ್ನ ಸ್ನೇಹಿತನಿಗೆ ಆನ್ಲೈನ್ ಮುಖಾಂತರ ಲೋನ್ ಕೊಡಿಸಿದ್ದ ಇದರಿಂದ ಆತನಿಗೆ ಪದೇಪದೇ ಅವರಿಂದ ಕರೆ ಹಾಗೂ ಬೆದರಿಕೆಗಳು ಬರುತ್ತಿದ್ದವು. ಇದರಿಂದ ಹೆದರಿ ತನ್ನ ಜೀವವನ್ನೇ ಕಳೆದುಕೊಂಡಿದ್ದ. ಆದರಿಂದ ಆನ್ಲೈನ್ ಲೋನ್ ಪಡೆದುಕೊಳ್ಳುವುದಕ್ಕಿಂತ ಮುಂಚೆ ನೂರು ಬಾರಿ ಯೋಚಿಸುವುದು ಒಳ್ಳೆಯದು.