ಮಂಗಳೂರು: ಆಧಾರ್ ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆ-ಎಇಪಿಎಸ್ ಪಾವತಿ ಸಿಸ್ಟಮ್‌ನಲ್ಲಿ ವಂಚನೆ ಮಾಡುವ ಸಾಧ್ಯತೆಗಳಿವೆ. ಹಾಗಾಗಿ ಈ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದಾರೆ. ಎಇಪಿಎಸ್ ಎಂಬುದು ಬ್ಯಾಂಕ್ ತನ್ನ ಗ್ರಾಹಕರಿಗೆ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗಳಿಂದ ಬಯೋಮೆಟ್ರಿಕ್ ಉಪಯೋಗಿಸಿ ಹಣವನ್ನು ವಿದ್ ಡ್ರಾ ಮತ್ತು ರವಾನೆಯಂತಹ ಬ್ಯಾಂಕಿಂಗ್ ವಹಿವಾಟುಗಳನ್ನು ನಿರ್ವಹಿಸಲು ಅನುವು ಮಾಡಿಕೊಡುವ ವ್ಯವಸ್ಥೆಯಾ ಗಿದೆ. ಆಧಾರ್ ಕಾರ್ಡ್ ದಾರರು ತಮ್ಮ ಆಧಾರ್ ಸಂಖ್ಯೆ ಮತ್ತು ಬಯೋಮೆಟ್ರಿಕ್ ದೃಢೀಕರಣವನ್ನು ಬಳಸಿಕೊಂಡು ವಹಿವಾಟು ನಡೆಸಬಹುದು. ಆದರೆ ಇದರಲ್ಲಿಯೂ ಇತರ ಪಾವತಿ ವ್ಯವಸ್ಥೆಗಳಂತೆ ವಂಚನೆಯಾಗುವ ಸಾಧ್ಯತೆ ಇರುತ್ತದೆ, ಸೈಬರ್ ವಂಚಕರು ಬಳಕೆದಾರರ ಆಧಾರ್ ದತ್ತಾಂಶಗಳನ್ನು ಸರಕಾರಿ ವೆಬ್ ಸೈಟ್‌ಗಳಿಂದ ಅಥವಾ ಇತರ ಮೂಲಗಳಿಂದ ಸಂಗ್ರಹಿಸಿ ಅದನ್ನು ಪಿಒಎಸ್/ ಮೇಲೆ ಕ್ಲಿಕ್ ಮಾಡಬಾರದು. ಮೈಕ್ರೋ ಎಟಿಎಂ ಮೂಲಕ ಹಣ ಡ್ರಾ ಅಥವಾ ವರ್ಗಾವಣೆ ಮಾಡುವ ಅಪಾಯವಿರುತ್ತದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ವಂಚನೆಯಿಂದ ಸುರಕ್ಷಿತರಾಗಿರಬೇಕಾದರೆ ಬಳಕೆದಾರರು ಆಧಾರ್ ಕಾರ್ಡ್ ಬಯೋಮೆಟ್ರಿಕ್ ಲಾಕ್ ನ್ನು ಆಧಾರ್ ವೆಬ್ ಸೈಟ್ /ಆಧಾರ್ ಆಪ್ ಮೂಲಕ ಸಕ್ರಿಯಗೊಳಿಸಬೇಕು. ಬ್ಯಾಂಕ್ ಅಧಿಕಾರಿಗಳು ಅಥವಾ ಸರಕಾರಿ ಪ್ರತಿನಿಧಿಗಳು ಸೇರಿದಂತೆ ಯಾರೊಂದಿಗೂ ಆಧಾರ್ ಸಂಖ್ಯೆಗಳು,ಪಿನ್‌ಗಳು ಅಥವಾ ಪಾಸ್ ವರ್ಡ್‌ನಂತಹ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಳ್ಳಬಾರದು. ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬಾರದು, ಅಪರಿಚಿತರಿಂದ ಬಂದ ಅಟ್ಯಾಚ್ ಮೆಂಟ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಾರದು. ಇತ್ತೀಚಿನ ಭದ್ರತಾ ನವೀಕರಣಗಳು ಮತ್ತು ಆ್ಯಂಟಿವೈರಸ್ ಸಾಫ್ಟ್ ವೇರ್ ನೊಂದಿಗೆ ಮೊಬೈಲ್ ಮತ್ತು ಕಂಪ್ಯೂಟರ್ ಸಿಸ್ಟಮ್‌ಗಳನ್ನು ನವೀಕೃತವಾಗಿರಿಸಿಕೊಳ್ಳಬೇಕು, ಸೈಬರ್ ವಂಚನೆಗೊಳಗಾದರೆ ಕೂಡಲೇ ಸೈಬರ್ ಕ್ರೈಮ್ ಅಪರಾಧ ಸಹಾಯವಾಣಿ 1930ಗೆ ಕರೆ ಮಾಡಿ ದೂರು ದಾಖಲಿಸಬೇಕು ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ