ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಸಹಿತ 35 ಹಿರಿಯ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಮಂಗಳವಾರ ಆದೇಶ ಹೊರಡಿಸಿದೆ.ಹುದ್ದೆಯ ನಿರೀಕ್ಷೆಯಲ್ಲಿದ್ದ 2008ರ ಬ್ಯಾಚ್‌ನ ಅನುಪಮ್ ಅಗರ್ವಾಲ್ ಅವರನ್ನು ಮಂಗಳೂರು ನಗರ ಪೊಲೀಸ್ ಆಯುಕ್ತರನ್ನಾಗಿ ನೇಮಿಸಲಾಗಿದೆ.ಕುಲದೀಪ್ ಕುಮಾರ್ ಜೈನ್‌ಗೆ ಯಾವುದೇ ಹುದ್ದೆ ತೋರಿಸಿಲ್ಲ.
ಕೋಸ್ಟಲ್ ಸೆಕ್ಯುರಿಟಿ ಪೊಲೀಸ್ ಉಡುಪಿ ಇಲ್ಲಿನ ಎಸ್ಪಿಯಾಗಿದ್ದ ಅಬ್ದುಲ್ ಅಹದ್ ಅವರನ್ನು ಬೆಂಗಳೂರು ನಗರದ ಕೇಂದ್ರ ವಿಭಾಗದ ಡಿಸಿಪಿಯಾಗಿ ವರ್ಗಾಯಿಸಲಾಗಿದೆ.
ಉಳಿದಂತೆ ಡಾ. ಶರಣಪ್ಪ, ಅಂಶುಕುಮಾರ್, ಹರಿರಾಂ ಶಂಕರ್, ಸೋನಾವಣೆ ರಿಷಿಕೇಶ್ ಭಗವಾನ್, ವರ್ತಿಕಾ ಕಟಿಯಾರ್, ಸಾರಾ ಫಾತಿಮಾ, ಕೆ. ಸಂತೋಷ್ ಬಾಬು ಅವರನ್ನು ಕೂಡಾ ವರ್ಗಾವಣೆಗೊಳಿಸಲಾಗಿದೆ.