Facebook Twitter Instagram
    Saturday, April 25
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮಂಗಳೂರು: ಬೈಕ್ ಕಳವು ಪ್ರಕರಣದ ಆರೋಪಿ- ಗಾಂಜಾ ವ್ಯಸನಿ ನೇಣು ಬಿಗಿದು ಆತ್ಮಹತ್ಯೆ..!
    ಇತ್ತೀಚಿನ ಸುದ್ದಿ

    ಮಂಗಳೂರು: ಬೈಕ್ ಕಳವು ಪ್ರಕರಣದ ಆರೋಪಿ- ಗಾಂಜಾ ವ್ಯಸನಿ ನೇಣು ಬಿಗಿದು ಆತ್ಮಹತ್ಯೆ..!

    September 5, 2023
    Share

    ಮಂಗಳೂರು: ಬೈಕ್ ಕಳವುಗೈದು ಉಳ್ಳಾಲ ಪೊಲೀಸರಿಂದ ಬಂಧಿತನಾಗಿದ್ದ ಆರೋಪಿ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾನೆ. ಗಾಂಜಾ ವ್ಯಸನಕ್ಕೆ ಬಲಿಯಾಗಿದ್ದ ಯುವಕ ಸೇದಲು ಗಾಂಜಾ ಸಿಗದೆ ಜಿಗುಪ್ಸೆಗೊಂಡು ಇಂದು ಬೆಳಿಗ್ಗೆ ಮನೆಯಲ್ಲಿ ಸಾವಿಗೆ ಶರಣಾಗಿದ್ದಾನೆ.

    ತಲಪಾಡಿ ಗ್ರಾಮದ ನಾರ್ಲ, ಪಡೀಲ್ ನಿವಾಸಿ ಪೈಝಲ್ (24) ಆತ್ಮಹತ್ಯೆಗೈದ ಯುವಕ. ಫೈಝಲ್ ಇಂದು ಬೆಳಿಗ್ಗೆ ತನ್ನ ಮನೆಯ ಮೊದಲ ಅಂತಸ್ತಿನ ಕೊಠಡಿಯ ಫ್ಯಾನ್‌ಗೆ ನೈಲಾನ್ ಬಟ್ಟೆಯಿಂದ ಕುಣಿಕೆ ಬಿಗಿದು ಆತ್ಮಹತ್ಯೆಗೈದಿದ್ದಾನೆ. ಮನೆಯಲ್ಲಿ ಫೈಸಲ್ ತಾಯಿ, ತಂಗಿ ಮತ್ತು ಅಜ್ಜಿ ಇದ್ದು ತಾಯಿ ಮನೆಯ ಮೇಲಿನ ಅಂತಸ್ತಿಗೆ ತೆರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಫೈಝಲ್ ನಿತ್ಯವೂ ಬೆಳಗ್ಗೆ 9:00 ರಿಂದ 10ಗಂಟೆ ಅವಧಿಯಲ್ಲಿ ಗಾಂಜಾ ಸೇದುವ ಚಟ ಬೆಳೆಸಿದ್ದನಂತೆ. ಇಂದು ಗಾಂಜಾ ಸಿಗದ ಕಾರಣದಿಂದ ಜಿಗುಪ್ಸೆಗೊಂಡು ಆತ್ಮಹತ್ಯೆಗೈದಿರುವುದಾಗಿ ತಿಳಿದು ಬಂದಿದೆ. ಉಳ್ಳಾಲ ಠಾಣಾ ವ್ಯಾಪ್ತಿಯ ಪಂಡಿತ್ ಹೌಸ್ ಎಂಬಲ್ಲಿ ನಡೆದ ಬೈಕ್ ಕಳವು ಪ್ರಕರಣದಲ್ಲಿ ಫೈಝಲ್ ನನ್ನ ಪೊಲೀಸರು ಬಂಧಿಸಿದ್ದು ಮೃತ ಫೈಝಲ್ ಪ್ರಕರಣವನ್ನ ಎದುರಿಸುತ್ತಿದ್ದ. ಇಷ್ಟಲ್ಲದೆ ಉಳ್ಳಾಲ ಠಾಣೆಯಲ್ಲಿ ಈತನ ವಿರುದ್ಧ ಗಾಂಜಾ ಸೇವನೆಯ ಕೇಸು ದಾಖಲಾಗಿದೆ.ಉಳ್ಳಾಲ ಪೊಲೀಸರು ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾಣಿಸಿ ಪ್ರಕರಣ ದಾಖಲಿಸಿದ್ದಾರೆ.

    Post Views: 173

    Related Posts

    ಭಾರತದ ನಕ್ಷೆಯಲ್ಲಿ ಮಹತ್ವದ ಬದಲಾವಣೆ: ರಾಜ್ಯ ರಾಜಧಾನಿಗೆ ಸಂಸತ್ತಿನ ಕಾನೂನು ಮಾನ್ಯತೆ

    April 24, 2026

    ಪಾತ್ರೆಯಲ್ಲಿ ಸಿಲುಕಿದ ಪುಟ್ಟ ಮಗು: ಪೊಲೀಸರ ಸಮಯೋಚಿತ ರಕ್ಷಣಾ ಕಾರ್ಯಕ್ಕೆ ಶ್ಲಾಘನೆ

    April 24, 2026

    ವಿದ್ಯುತ್ ಅವಘಡದಲ್ಲಿ ನವವಿವಾಹಿತ ಸೇರಿದಂತೆ ಇಬ್ಬರ ಸಾವು

    April 24, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.