Facebook Twitter Instagram
    Sunday, September 6
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಅಂತಾರಾಷ್ಟ್ರೀಯ»16 ಸಾವಿರ ಕೋಟಿ ಖರ್ಚು ಮಾಡಿ ಈ ‘ಐಷಾರಾಮಿ ಹೋಟೆಲ್’ ಕಟ್ಟಿ 25 ವರ್ಷ ಕಳೆದ್ರೂ ಒಬ್ಬೇ ಒಬ್ಬ ಅತಿಥಿ ಬಂದಿಲ್ಲ
    ಅಂತಾರಾಷ್ಟ್ರೀಯ

    16 ಸಾವಿರ ಕೋಟಿ ಖರ್ಚು ಮಾಡಿ ಈ ‘ಐಷಾರಾಮಿ ಹೋಟೆಲ್’ ಕಟ್ಟಿ 25 ವರ್ಷ ಕಳೆದ್ರೂ ಒಬ್ಬೇ ಒಬ್ಬ ಅತಿಥಿ ಬಂದಿಲ್ಲ

    September 10, 2023
    Share

    ನವದೆಹಲಿ : ಇಂದು ನಾವು ನಿಮಗೆ ಹೋಟೆಲ್ ಒಂದರ ಬಗ್ಗೆ ಹೇಳುತ್ತಿದ್ದೇವೆ. ಈ ಹೋಟೆಲ್ ಕಟ್ಟಿ 25 ವರ್ಷಗಳು ಕಳೆದಿವೆ. ಇನ್ನಿದಕ್ಕೆ 16 ಸಾವಿರ ಕೋಟಿ ಖರ್ಚು ಮಾಡಲಾಗಿದೆ. ಆದ್ರೆ, ಇಲ್ಲಿಯವರೆಗೆ ಒಬ್ಬ ಅತಿಥಿಯೂ ಇಲ್ಲಿಗೆ ಬಂದಿಲ್ಲ. ಹಾಗಾಗಿ ಈಗ ಸರ್ಕಾರ ಈ ಹೋಟೆಲ್ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದೆ.

    ಈ ಹೋಟೆಲ್‌ನ ಹೆಸರು Ryugyong.

    ಈ ಹೋಟೆಲ್ ಎಲ್ಲಿದೆ.?
    ವರದಿಯ ಪ್ರಕಾರ, Ryugyong ಹೋಟೆಲ್ ಉತ್ತರ ಕೊರಿಯಾದ ರಾಜಧಾನಿ Pyongyang ನಲ್ಲಿದೆ. ಈ ಹೋಟೆಲ್’ನ್ನ ಸರ್ವಾಧಿಕಾರಿ ಕಿಮ್ ಜಾಂಗ್-ಉನ್ ಅವರ ಮನೆಯಿಂದ ಸುಮಾರು 12 ಮೈಲಿ (19.3 ಕಿಲೋಮೀಟರ್) ದೂರದಲ್ಲಿ ನಿರ್ಮಿಸಲಾಗಿದೆ. ಈ ಹೋಟೆಲ್‌ನ ಎತ್ತರ 1082 ಅಡಿಗಳು ಇದರಲ್ಲಿ 3000 ಕೊಠಡಿಗಳನ್ನ ನಿರ್ಮಿಸಲು ಯೋಜಿಸಲಾಗಿತ್ತು. ಈ ಹೋಟೆಲ್ ದೇಶದ ಆರ್ಥಿಕ ಮತ್ತು ರಾಜಕೀಯ ಶಕ್ತಿಗೆ ವಿಭಿನ್ನವಾದ ಗುರುತನ್ನ ನೀಡುತ್ತಿತ್ತು. ಆದ್ರೆ, 25 ವರ್ಷಗಳ ನಂತ್ರವೂ ಈ ಹೋಟೆಲ್ ಖಾಲಿ ಬಿದ್ದಿದೆ. ಈಗ ಈ ಹೋಟೆಲ್’ನ್ನ ‘ಹೋಟೆಲ್ ಆಫ್ ಡೂಮ್’ ಎಂದು ಕರೆಯಲಾಗುತ್ತದೆ.

    1987ರಲ್ಲಿ ಈ ಹೋಟೆಲ್‌ ಪ್ರಾರಂಭ.!
    Ryugyong ಹೋಟೆಲ್ 1987ರಲ್ಲಿ ನಿರ್ಮಾಣವನ್ನ ಪ್ರಾರಂಭಿಸಿತು. ಆಗ 2 ವರ್ಷಗಳ ನಂತರವೇ ಈ ಹೋಟೆಲ್ ತೆರೆಯುವ ಉದ್ದೇಶವಿತ್ತು. ಈ ಹೋಟೆಲ್ ನಿಗದಿತ ಸಮಯದಲ್ಲಿ ಪೂರ್ಣಗೊಂಡಿದ್ದರೆ, ಇದು ವಿಶ್ವದ ಅತಿ ಎತ್ತರದ ಹೋಟೆಲ್ ಆಗುತ್ತಿತ್ತು. ಪ್ರಸ್ತುತ, ಈ ಹೋಟೆಲ್ ಭೂಮಿಯ ಮೇಲಿನ ಅತಿ ಎತ್ತರದ ಖಾಲಿ ಕಟ್ಟಡ ಎಂಬ ದಾಖಲೆಯನ್ನು ಹೊಂದಿದೆ. ಈ ಹೋಟೆಲ್ ನಿರ್ಮಾಣದ ವೆಚ್ಚ £1.6 ಬಿಲಿಯನ್ 16 ಸಾವಿರ ಕೋಟಿ. 1992ರಲ್ಲಿ ಈ ಹೊಟೇಲ್‌ನ ನಿರ್ಮಾಣ ಕಾರ್ಯ ನಿಂತುಹೋಯಿತು.

    ಈಗ ಈ ಹೋಟೆಲ್ ಬಗ್ಗೆ ಪ್ರಚಾರ.!
    ಹೋಟೆಲ್‌ನಲ್ಲಿ ಏನೂ ಆಗದೇ ಸುಮ್ಮನೆ ಬಿದ್ದಿರುವುದನ್ನು ನೋಡಿ ಈ ಹೋಟೆಲ್‌ನಲ್ಲಿ ಬಾಹ್ಯ ಗಾಜಿನ ಫಲಕಗಳನ್ನು ಅಳವಡಿಸಲಾಗಿದೆ. ಇದಾದ ಬಳಿಕ 2013ರೊಳಗೆ ಪೂರ್ಣಗೊಳಿಸುವ ಭರವಸೆ ನೀಡಲಾಗಿತ್ತು. ಆದರೆ ಇದು ಇಂದಿಗೂ ಪೂರ್ಣಗೊಂಡಿಲ್ಲ. ಈ ಹೋಟೆಲ್ ಒಳಗಿನಿಂದ ಸಂಪೂರ್ಣವಾಗಿ ಖಾಲಿಯಾಗಿದೆ. ಇದರೊಂದಿಗೆ ಈ ಕಟ್ಟಡದಲ್ಲಿ ಹಲವು ಲೋಪದೋಷಗಳಿವೆ. ಈ ಕಟ್ಟಡದ ನೆಲ ಇಳಿಜಾರಾಗಿದೆಯಂತೆ. ಈ ಹೋಟೆಲ್‌ನ ರಚನೆಯು ತುಕ್ಕು ಹಿಡಿದು ದುರ್ಬಲವಾಗಿದೆ. 2018 ರಲ್ಲಿ ಈ ಕಟ್ಟಡದ ಮೇಲೆ ಎಲ್‌ಇಡಿ ಫಲಕಗಳನ್ನ ಅಳವಡಿಸಲಾಗಿದೆ. ಇದನ್ನ ಈಗ ಸರ್ಕಾರ ಪ್ರಚಾರಕ್ಕೆ ಬಳಸಿಕೊಂಡಿದೆ.

    Post Views: 644

    Related Posts

    ಪುತ್ತೂರು: ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ವಿದ್ಯಾರ್ಥಿ ಮೃತ್ಯು

    September 6, 2026

    ಪುತ್ತೂರು: ಪೊಲೀಸ್ ಸಿಬ್ಬಂದಿಗೆ ಹಲ್ಲೆ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ: ಮೂವರ ವಿರುದ್ಧ ಪ್ರಕರಣ

    September 6, 2026

    ಕಂಬಳ ಅಭಿವೃದ್ಧಿಗೆ ₹5 ಕೋಟಿ ವಿಶೇಷ ಅನುದಾನ: ಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    September 5, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಪುತ್ತೂರು: ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ವಿದ್ಯಾರ್ಥಿ ಮೃತ್ಯು

    September 6, 2026

    ಪುತ್ತೂರು: ಪೊಲೀಸ್ ಸಿಬ್ಬಂದಿಗೆ ಹಲ್ಲೆ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ: ಮೂವರ ವಿರುದ್ಧ ಪ್ರಕರಣ

    September 6, 2026

    ಕಂಬಳ ಅಭಿವೃದ್ಧಿಗೆ ₹5 ಕೋಟಿ ವಿಶೇಷ ಅನುದಾನ: ಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    September 5, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.