ಮಂಗಳೂರು: ತಾಯಿ ಮತ್ತು ಮಗಳ ಮೃತದೇಹ ಗಡಿ ಭಾಗದ ಕಾಸರಗೋಡು ಜಿಲ್ಲೆಯ ಉದುಮ ಸಮೀಪದ ಕಳ್ನಾಡ್ ಬಾವಿಯೊಂದರಲ್ಲಿ ಶುಕ್ರವಾರ ಮಧ್ಯಾಹ್ನ ಪತ್ತೆಯಾಗಿದೆ. ಮೃತರನ್ನು ಕಳ್ನಾಡ್ ಅರಮಂಗಾನದ ತಾಜುದ್ದೀನ್ ಎಂಬವರ ಪತ್ನಿ ರುಬೀನಾ (33) ಮತ್ತು ಪುತ್ರಿ ಹನಾನ್ ಮರಿಯಾ (5) ಎಂದು ಗುರುತಿಸಲಾಗಿದೆ. ಮಧ್ಯಾಹ್ನ 12 ಗಂಟೆಯಿಂದ ಇಬ್ಬರು ನಾಪತ್ತೆಯಾಗಿದ್ದು, ಹುಡುಕಾಡಿದಾಗ ಮನೆ ಸಮೀಪದ ಬಾವಿಯಲ್ಲಿ ಮೃತದೇಹ ಕಂಡು ಬಂದಿದೆ. ಆತ್ಮಹತ್ಯೆ ಎಂದು ಶಂಕಿಸಲಾಗಿದ್ದು, ಮೇಲ್ಪರಂಬ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕೃತ್ಯಕ್ಕೆ ಕಾರಣ ತಿಳಿದು ಬಂದಿಲ್ಲ. ಪತಿ ತಾಜುದ್ದೀನ್ ಗಲ್ಫ್ ಉದ್ಯೋಗಿ ಎನ್ನಲಾಗಿದೆ. ಪೊಲೀಸರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಮೃತದೇಹವನ್ನು ಬಾವಿಯಿಂದ ಮೇಲಕ್ಕೆತ್ತಿದರು. ಮೃತದೇಹಗಳನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.