Facebook Twitter Instagram
    Saturday, March 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಶಿಕ್ಷಣ ಒಂದು ಧರ್ಮದ ತಳಹದಿಯಲ್ಲಿ ಇರಬಾರದು ಎಂದು ಅಂಬೇಡ್ಕರ್ ಹೇಳಿದ್ದರು: ರುಕ್ಮಯ ಎಂ. ಕಕ್ಕೆಪದವು
    ಇತ್ತೀಚಿನ ಸುದ್ದಿ

    ಶಿಕ್ಷಣ ಒಂದು ಧರ್ಮದ ತಳಹದಿಯಲ್ಲಿ ಇರಬಾರದು ಎಂದು ಅಂಬೇಡ್ಕರ್ ಹೇಳಿದ್ದರು: ರುಕ್ಮಯ ಎಂ. ಕಕ್ಕೆಪದವು

    June 8, 2022
    Share

    ಬಂಟ್ವಾಳ: ಶಿಕ್ಷಣ ಒಂದು ಧರ್ಮದ ತಳಹದಿಯಲ್ಲಿ ಇರಬಾರದು. ಶಿಕ್ಷಣ ಒಂದು ವರ್ಗದ ತಳಹದಿಯಲ್ಲಿದ್ದರೆ, ಅದು ಒಂದು ವರ್ಗದ ಪಾಲಾಗುತ್ತದೆ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದರು ಎಂದು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಉಪನ್ಯಾಸಕ ರುಕ್ಮಯ ಎಂ. ಕಕ್ಕೆಪದವು ಹೇಳಿದರು.

    ಸಮಾಜ ಪರಿವರ್ತನಾ ವೇದಿಕೆ, ವಗ್ಗ ವಲಯದ ಆಶ್ರಯದಲ್ಲಿ ಬುದ್ಧ ಬಸವ ಅಂಬೇಡ್ಕರ್ ಚಿಂತನೆಯಡಿಯಲ್ಲಿ ಬಹುಜನ ಸಾಹಿತಿ ಸತೀಶ್ ಕಕ್ಕೆಪದವು ರವರ ನಿರ್ದೇಶನದಲ್ಲಿ, ಯುವ ನಾಯಕ ಅರುಣ್ ಮದ್ವರವರ ಸಾರಥ್ಯದಲ್ಲಿ, ಸಮಾಜ ಪರಿವರ್ತನಾ ಚಳುವಳಿಯ ಮುಖಂಡರಾದ ಪಿ.ಚೆನ್ನಪ್ಪರವರ ಅಧ್ಯಕ್ಷತೆಯಲ್ಲಿ ನಡೆದ ವಿಶ್ವ ಜ್ಞಾನಿ ಪರಮಪೂಜ್ಯ‌ ಡಾ.ಬಾಬಾ ಸಾಹೇಬ್ ಭೀಮ್ ರಾವ್ ಅಂಬೇಡ್ಕರ್ ರವರ 131 ನೇ ಹುಟ್ಟುಹಬ್ಬ ಸಂಭ್ರಮೋತ್ಸವ ಹಾಗು ಪರಿಶಿಷ್ಟ ಜಾತಿಯ ಒಂದು ಸಾವಿರ ಬಡ ಮಕ್ಕಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

    ಕಾವಳಪಡೂರು ಸೇವಾ ಸಹಕಾರಿ ಬ್ಯಾಂಕ್ ನಿ. ವಗ್ಗದ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು. ಕಾವಳ ಪಡೂರು ವಗ್ಗ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಜನಿ ಬಾಬು ಮೂಲ್ಯ, ಸತ್ಯ ಸಾರಮಾನಿ ಕ್ಷೇತ್ರ ಮುತ್ತೂರು ಪ್ರಧಾನ ಅರ್ಚಕರಾದ ಪೂಜ್ಯ ಹರಿಯಪ್ಪ ಮುತ್ತೂರು, ಬಹುಜನ ಸಮಾಜ ಪಕ್ಷ ದಕ್ಷಿಣ ಕನ್ನಡ ದ ಸಂಯೋಜಕರಾದ  ಗೋಪಾಲ ಮುತ್ತೂರು, ಬಿಲ್ಲವ ಸಮಾಜ ಸೇವಾ ಸಂಘ (ರಿ) ವಗ್ಗ ಇದರ ಅಧ್ಯಕ್ಷರಾದ ವೀರೇಂದ್ರ ಅಮೀನ್, ಸಮಾಜ ಪರಿವರ್ತನಾ ಚಳುವಳಿಗಾರರಾದ ಅಣ್ಣು ಕಕ್ಕಿಬೆಟ್ಟು, ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘ (ರಿ) ಕಕ್ಕೆಪದವು ಇದರ ಗೌರವಾಧ್ಯಕ್ಷರಾದ  ಅಣ್ಣು ಕಂಡಿಗ, ಡಾ.ಬಿ.ಆರ್ ಅಂಬೇಡ್ಕರ್ ಯುವಕ ಸಂಘ (ರಿ) ಕಕ್ಕೆಪದವು ಇದರ ಅಧ್ಯಕ್ಷರಾದ  ರಾಜೀವ್ ಕಕ್ಕೆಪದವು, ಕಾವಳಪಡೂರು  ಗ್ರಾಮ ಪಂಚಾಯತ್ ಸದಸ್ಯರಾದ ಚಂದ್ರಶೇಖರ ಕೆ. ಕರ್ಣ,  ಕಾವಳಪಡೂರು ಗ್ರಾಮ ಪಂಚಾಯತ್ ಸದಸ್ಯರಾದ ಭವಾನಿ ಶ್ರೀಧರ್ ಪೂಜಾರಿ, ಬಿಜೆಪಿ ಶಕ್ತಿ ಕೇಂದ್ರ,  ಇದರ ಅದ್ಯಕ್ಷರಾದ ಸತೀಶ್ ಶೆಟ್ಟಿ ಮದ್ವಕಟ್ಟೆ, ಬಂಟ್ವಾಳ ತಾಲೂಕು ಭಾರತರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಸಮಾಜ ಸೇವಾ ಸಂಘ (ರಿ) ಇದರ ಅಧ್ಯಕ್ಷರಾದ  ಕೆ.ಸತೀಶ್ ಅರಳ ಮೊದಲಾದವರು ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು.

    ಕಾರ್ಯಕ್ರಮದಲ್ಲಿ ಸೇವಾ ಸಹಕಾರಿ ಬ್ಯಾಂಕ್ ನಿ.ಬಡಗಕಜೆಕಾರು ನಿರ್ದೇಶಕರಾದ  ಅನಿಲ್ ಕುರುವರಗೋಳಿ, ಪ್ರಗತಿಪರ ಕೃಷಿಕರಾದ  ರಾಜೇಶ್ ಪೆರ್ಲ ಬೀಯಾಪಾದೆ, ಕಾವಳಪಡೂರು ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾದ ವಸಂತಿ, ಉಳಿ ಗ್ರಾಮ ಪಂಚಾಯತಿಯ ಸದಸ್ಯರಾದ ಕುಮಾರಿ ರಕ್ಷಿತಾ ಮೊದಲಾದವರನ್ನು ಗೌರವಿಸಿ ಸನ್ಮಾನಿಸಲಾಯಿತು.

    Post Views: 467

    Related Posts

    ಬಂಟ್ವಾಳ: ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ – ಅಂಚೆ ಇಲಾಖೆ ವಿರುದ್ಧ ಕೇಸ್‌

    March 7, 2026

    ಕಾರ್ಕಳ: ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿ ಅರೆಸ್ಟ್

    March 7, 2026

    ಮಂಗಳೂರು: ನಿವೃತ್ತ ಬ್ಯಾಂಕ್ ಮಹಿಳಾ ಉದ್ಯೋಗಿಗೆ ಸೈಬರ್ ವಂಚನೆ

    March 6, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.