ಮಲ್ಪೆ : ಡ್ರಗ್ಸ್ ಪಾರ್ಸೆಲ್ ಕಳುಹಿಸಿರುವುದಾಗಿ ಬೆದರಿಸಿ ವ್ಯಕ್ತಿಯೊಬ್ಬರಿಂದ 20.ಲಕ್ಷ ರೂ. ಖಾತೆಗೆ ವರ್ಗಾಯಿಸಿ ವಂಚನೆ ಎಸಗಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನ.7ರಂದು ಅಪರಿಚಿತ ವ್ಯಕ್ತಿ ಕೋರಿಯರ್ ಕಂಪನಿಯಿಂದ ಕರೆ ಮಾಡಿರುವುದಾಗಿ ಹೇಳಿ, ನೀವು ಕಳಿಸಿರುವ ಪಾರ್ಸೆಲ್‌ನಲ್ಲಿ ಬಟ್ಟೆ, ಪಾಸ್‌ಪೋರ್ಟ್, ಡೆಬಿಟ್ ಕಾರ್ಡ್, ಲ್ಯಾಪ್‌ಟಾಪ್, ಎಂಡಿಎಂಎ ಡ್ರಗ್ಸ್ ಇದ್ದು ಆ ಪಾರ್ಸೆಲ್ ಮುಂಬೈಯ ಎನ್ ಸಿಬಿ ಅವರ ಬಳಿ ಇದೆ. ನೀವು ಅರ್ಮನ್ ಅಲಿಗೆ ಪಾರ್ಸೆಲ್ ಕಳುಹಿಸಿರುವುದಾಗಿ ತಿಳಿಸಿದರು. ಇದಕ್ಕೆ ಪೊಲೀಸ್ ಕ್ಲಿಯರೆನ್ಸ್ ಪಡೆಯಲು ವಿಡಿಯೋ ಕಾಲ್ ಗೆ ಬರುವಂತೆ ತಿಳಿಸಿದರು. ಎಲ್ಲಾ ದಾಖಲೆಗಳನ್ನು ಪರಿಶೀಲಿಸುವುದಾಗಿ ತಿಳಿಸಿ , ವ್ಯಕ್ತಿಯ ಬ್ಯಾಂಕ್ ನ ಖಾತೆಯ ಅಪ್ಲಿಕೇಶನ್ ಲಾಗಿನ್ ಆಗಲು ಸೂಚಿಸಿ ಪರ್ಸನಲ್ ಲೋನ್ ಸೆಕ್ಷನ್‌ನಲ್ಲಿ 20 ಲಕ್ಷ ವಂಚನೆಯ ಹಣ ಇದ್ದು 20 ಲಕ್ಷ ಹಣವನ್ನು ತಮ್ಮ ಖಾತೆಗೆ ಜಮಾವಣೆ ಮಾಡಿಕೊಳ್ಳುವಂತೆ ಸೂಚಿಸಿದರು. ಅದನ್ನು ನಂಬಿ 20 ಲಕ್ಷ ರೂ. ಹಣವನ್ನು ವರ್ಗಾವಣೆ ಮಾಡಿ ವಂಚನೆಗೆ ಒಳಗಾಗಿರುವುದಾಗಿ ದೂರಲಾಗಿದೆ.