ವಿಟ್ಲ: ಕಲ್ಲಿನ ಕೋರೆಯಲ್ಲಿ ಈಜಲು ಹೋಗಿ ಯುವಕನೋರ್ವ ಮೃತಪಟ್ಟ ಘಟನೆ ವಿಟ್ಲ ಸಮೀಪದ ಕುದ್ದುಪದವು ಎಂಬಲ್ಲಿ ನಡೆದಿದೆ. ಉಕ್ಕುಡ ದರ್ಬೆ ನಿವಾಸಿ ಕಾರ್ತಿಕ್(24) ಮೃತ ದುರ್ದೈವಿ. ಈತ ಕುದ್ದುಪದವು ಬಳಿ ಇರುವ ಕಲ್ಲಿನ ಕೋರೆಯಲ್ಲಿ ಈಜಲು ಹೋಗಿದ್ದು, ಈ ವೇಳೆ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭಿಸಿದೆ.
Post Views: 105