ಉಡುಪಿ; ಅಪರೂಪದ ಪ್ರಕರಣವೊಂದರಲ್ಲಿ ತಾಂತ್ರಿಕ ದೋಷವಿದ್ದ ಮಿಕ್ಸರ್ ಗ್ರೈಂಡರ್ ಕೊಟ್ಟ ಅಂಗಡಿ ವಿರುದ್ದ ಕೋರ್ಟ್ ನಲ್ಲಿ ದಾವೆ ಹೂಡಿದ್ದ ಗ್ರಾಹಕ ಮಹಿಳೆ ಇದೀಗ ಪರಿಹಾರವನ್ನು ಪಡೆದುಕೊಂಡಿದ್ದಾರೆ.
ಉಡುಪಿಯ ಪೈ ಇಂಟರ್‌ನ್ಯಾಷನಲ್ ಹಾಗೂ ಪ್ರೀತಿ ಕಿಚನ್ ಅಪ್ಲೆಯನ್ಸಸ್ ಪ್ರೈ.ಲಿ. ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಪರಿಹಾರ ನೀಡುವಂತೆ ಸೂಚಿಸಿದೆ. ಅನಿತಾ ಎಂಬವರು ಎರಡು ವರ್ಷಗಳ ಹಿಂದೆ ಪೈ ಇಂಟರ್‌ನ್ಯಾಷನಲ್ ನಲ್ಲಿ 4,239 ರೂ.ಗಳನ್ನು ನೀಡಿ ಪ್ರೀತಿ ಮಿಕ್ಸರ್ ಗ್ರೈಂಡರ್ ಖರೀದಿಸಿದ್ದರು. ಆದರೆ ಮೂರೇ ತಿಂಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಮಿಕ್ಸಿಗೆ ಎರಡು ವರ್ಷಗಳ ಗ್ಯಾರಂಟಿ ಮತ್ತು 5 ವರ್ಷಗಳ ವಾರೆಂಟಿ ಇರುವುದರಿಂದ ಹೊಸ ಮಿಕ್ಸಿ ಕೊಡುವಂತೆ ಗ್ರಾಹಕಿ ಮನವಿ ಮಾಡಿದ್ದರು. ಆದರೆ ಪೈ ಇಂಟರ್‌ನ್ಯಾಷನಲ್ ನವರು ಬದಲಿ ಮಿಕ್ಸಿಯನ್ನು ಕೊಡಲು ಒಪ್ಪದೇ ಅದೇ ಮಿಕ್ಸಿಯನ್ನು ಸರಿಪಡಿಸಿ ಕೊಟ್ಟಿದ್ದರು. ಅದರ ಅನಂತರವೂ ಮೂರು ತಿಂಗಳಿಗೊಮ್ಮೆ ಮಿಕ್ಸಿಯಲ್ಲಿ ತಾಂತ್ರಿಕ ತೊಂದರೆಗಳು ಕಾಣಿಸಿಕೊಂಡಿದ್ದವು. ಇದರಿಂದ ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಪೈ ಇಂಟರ್‌ನ್ಯಾಾಷನಲ್ ಹಾಗೂ ಪ್ರೀತಿ ಕಿಚನ್ ಅಪ್ಲೆಯನ್ಸಸ್ ಪ್ರೈ.ಲಿ.ವಿರುದ್ಧ ದಾವೆ ಹೂಡಿದ್ದರು.
ಇದೀಗ ಉಪನ್ಯಾಸಕಿಯ ಪರ ತೀರ್ಪು ಬಂದಿದ್ದು ಜಿಲ್ಲಾ ಗ್ರಾಹಕರ ಆಯೋಗ 20,189 ರೂ.ಪರಿಹಾರ ಒದಗಿಸಬೇಕೆಂದು ಮಾರಟಗಾರರಿಗೆ ಆದೇಶಿಸಿದೆ.