ಮಂಗಳೂರು : ಮಂಗಳೂರು ನಗರದ ಮನೆಯೊಂದಲ್ಲಿ ಹೋಂ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಯುವತಿ ಬೆಲೆಬಾಳುವ ಕರಿಮಣಿಯೊಂದಿಗೆ ಪರಾರಿಯಾದ ಘಟನೆ ನಡೆದಿದೆ.
ನಗರದ ಕದ್ರಿ ಬಿ ಗ್ರಾಮದ ಬಾರೆಬೈಲ್ ಎಂಬಲ್ಲಿನ ಮನೆಯೊಂದರಲ್ಲಿ ಹೋಂ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಕಾವ್ಯ ಎಂಬಾಕೆ ಕರಿಮಣಿ ಸರದೊಂದಿಗೆ ಪರಾರಿಯಾದ ಹೋಂ ನರ್ಸ್ ಆಗಿದ್ದಾರೆ. ಈ ಬಗ್ಗೆ ನಗರದ ಉರ್ವ ಠಾಣೆಗೆ ದೂರು ನೀಡಿದ್ದಾರೆ. ಅ.6 ರಿಂದ 30ರ ಮಧ್ಯೆ ಹೋಂ ನರ್ಸ್ ಆಗಿದ್ದ ಮಂಡ್ಯ ಜಿಲ್ಲೆಯ ಕಾವ್ಯ ಅನಾರೋಗ್ಯದ ನೆಪ ಹೇಳಿ ಹೋಗಿದ್ದರು. ಈ ಸಂದರ್ಭ ಸುಮಾರು 2 ಲಕ್ಷ ರೂ.ಮೌಲ್ಯದ 35 ಗ್ರಾಂ ತೂಕದ ಕರಿಮಣಿ ಸರ ಕಾಣೆಯಾಗಿದೆ. ಹಾಗಾಗಿ ಕಾವ್ಯಳನ್ನು ಸಂಪರ್ಕಿಸಿದಾಗ ಸರಿಯಾಗಿ ಸ್ಪಂದಿಸಲಿಲ್ಲ. ಹಾಗಾಗಿ ಆಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲು ಮಾಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.