ಬೆಂಗಳೂರು : ಗಡಿಪಾರು ಭೀತಿಯಲ್ಲಿದ್ದ ನಟ ಚೇತನ್ ಗೆ ಹೈಕೋರ್ಟ್ ರಿಲೀಫ್ ನೀಡಿದ್ದು, ನಟ ಚೇತನ್ ಗೆ ಷರತ್ತುಬದ್ದ ರಿಲೀಫ್ ನೀಡಿದೆ.
ನಟ ಚೇತನ್ ಗೆ ನೀಡಿದ್ದ OCI ರದ್ದು ಹಿನ್ನೆಲೆ ಗಡಿಪಾರು ಭೀತಿಯಲ್ಲಿದ್ದ ನಟ ಚೇತನ್ ಗೆ ಹೈಕೋರ್ಟ್ ರಿಲೀಫ್ ನೀಡಿದೆ.ನ್ಯಾಯಾಂಗದ ಬಗ್ಗೆ ಚೇತನ್ ಟ್ವೀಟ್ ಮಾಡುವಂತಿಲ್ಲ, ವಿಚಾರಣೆಗೆ ಬಾಕಿ ಇರುವ ಕೇಸ್ ಗಳ ಬಗ್ಗೆ ಟ್ವೀಟ್ ಮಾಡುವಂತಿಲ್ಲ.
ಜೂನ್ 2 ರವರೆಗೆ ಕ್ರಮ ಬೇಡ ಎಂದು ಹೈಕೋರ್ಟ್ ನ್ಯಾಯಮೂರ್ತಿ M. ನಾಗಪ್ರಸನ್ನ ಅವರಿದ್ದ ಪೀಠ ಆದೇಶ ಹೊರಡಿಸಿದೆ.
ಸಾಗರೋತ್ತರ ಭಾರತೀಯ ನಾಗರಿಕ ಪತ್ರ (ಓಸಿಎ) ನಿಯಮಗಳನ್ನು ಚೇತನ್ ಉಲ್ಲಂಘನೆ ಮಾಡಿದ್ದಾರೆ ಎಂದು ಪೊಲೀಸ್ ಇಲಾಖೆಯು ಸರಕಾರಕ್ಕೆ ವರದಿ ಸಲ್ಲಿಸಿತ್ತು. ಚೇತನ್ ಅಹಿಂಸಾ ಅವರಿಗೆ ಭಾರತದಲ್ಲಿ ಬಂದು ವಾಸಿಸಲು ನೀಡಲಾಗಿದ್ದ ಭಾರತೀಯ ಸಾಗರೋತ್ತರ ಪೌರತ್ವವನ್ನು (Overseas Citizenship of India – OCI) ಕೇಂದ್ರ ಸರ್ಕಾರ ರದ್ದುಗೊಳಿಸಿತ್ತು.. ಹಿಂದುತ್ವದ ಬಗ್ಗೆ ಟ್ವೀಟ್ ಮಾಡಿ ಅರೆಸ್ಟ್ ಆಗಿದ್ದ ಚೇತನ್, ಜಾಮೀನು ಪಡೆದು ಹೊರ ಬಂದಿದ್ದರು. ಆಗಲೂ ಸುಮ್ಮನಿರದ ಚೇತನ್ ಗಾಂಜಾ ಕೃಷಿ, ತಿರುಪತಿ ದೇವಸ್ಥಾನದ ಬಗ್ಗೆ ಮಾತನಾಡಿದ್ದರು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಚೇತನ್ ವೀಸಾ ರದ್ದು ಮಾಡಿದೆ.ಇತ್ತೀಚೆಗಷ್ಟೇ, ಹಿಂದುತ್ವವನ್ನು ಪ್ರಶ್ನಿಸಿ ಅವಹೇಳನಕಾರಿ ಪೋಸ್ಟ್ ಒಂದನ್ನು ಹಾಕಿದ್ದರಿಂದಾಗಿ ಮಾ. 21ರಂದು ಅವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದರು. ಆನಂತರ ಅವರು, ಜಾಮೀನಿನ ಮೇಲೆ ಆಚೆ ಬಂದಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಗಳನ್ನು ಹಾಕುತ್ತಲೇ ಇದ್ದ ಅವರಿಗೆ 2022, ಎಫ್‌ಆರ್ ಆರ್ ಒ ವತಿಯಿಂದ ನೋಟಿಸ್ ಜಾರಿಯಾಗಿತ್ತು.