ಉತ್ತರ ಕನ್ನಡ: ಯುವಕನೊಬ್ಬ ಕೇವಲ 25ನೇ ವಯಸ್ಸಿಗೆ ನ್ಯಾಯಾಧೀಶನಾಗುವ ಮೂಲಕ ಇಂದಿನ ಯುವಜನತೆಗೆ ಮಾದರಿಯಾಗಿದ್ದಾನೆ.
ಉತ್ತರ ಕನ್ನಡ ಜಿಲ್ಲೆಯ ಹೆಗಡೆ ಕಟ್ಟಾದ ನಿವಾಸಿಯಾಗಿರುವ ಸುಮಂತ್ (24) ಸಿವಿಲ್ ಜಡ್ಜ್ ನೇಮಕಾತಿ ಪರೀಕ್ಷೆಯಲ್ಲಿ ಎರಡನೇ ರಾಂಕ್ ಪಡೆಯುವ ಮೂಲಕ ಮೊದಲ ಪ್ರಯತ್ನದಲ್ಲೇ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.
ಡಿಸೆಂಬರ್ ನಲ್ಲಿ ಅಂತಿಮ ಪರೀಕ್ಷೆ ನಡೆದಿದ್ದು, ಜನವರಿಯಲ್ಲಿ ಸಂದರ್ಶನವನ್ನು ನಡೆಸಲಾಗಿತ್ತು. ಪಠ್ಯೇತರ ಚಟುವಟಿಕೆಗಳಲ್ಲೂ ಸೈ ಅನಿಸಿಕೊಂಡಿರುವ ಸುಮಂತ್ ಬೆಂಗಳೂರು ಲೋಕಾಯುಕ್ತದ ಸರಕಾರಿ ಅಭಿಯೋಜಕರಾದ ಮಂಜುನಾಥ್ ನಾಯಕ್ ಹಾಗೂ ವಕೀಲೆ ಸುಜಾತ ನಾಯಕ್ ದಂಪತಿಯ ಪುತ್ರನಾಗಿದ್ದಾರೆ.




