ಮಂಗಳೂರು: ಜೂನ್.13ರಂದು ನರಿಕೊಂಬು ಗ್ರಾ.ಪಂಚಾಯತ್ ಕಚೇರಿಯ ಜಗಲಿಯಲ್ಲಿ ವ್ಯಕ್ತಿಯೋರ್ವ ಬಿದ್ದುಕೊಂಡ ಬಗ್ಗೆ ಗ್ರಾಮ ಪಂಚಾಯತ್ ನ ಅಧಿಕಾರಿಗಳ ಗಮನಕ್ಕೆ ಬರುತ್ತದೆ.
ಜೂ.12ರಂದು ರಾತ್ರಿ ಈತ ಪಂಚಾಯತ್ ನ ಜಗುಲಿಗೆ ಪ್ರವೇಶ ಮಾಡಿದ್ದ.ಈ ವೇಳೆ ಈತನ ಕೈಗೆ ಗಾಯವಾಗಿ ರಕ್ತಸ್ರಾವವಾಗಿತ್ತು.
ಕುಡಿದ ಮತ್ತಿನಲ್ಲಿ ಕಚೇರಿ ಬಳಿಯೇ ಮಲಗಿದ್ದ.ಶಿವಶಂಕರ ರಕ್ತದ ನಡುವೆ ಬಿದ್ದುಕೊಂಡಿದ್ದರಿಂದ ಜನರು ಹತ್ತಿರ ಹೋಗಲು ಹೆದರುತ್ತಿದ್ದರು.
ಘಟನೆ ತಿಳಿದು ಸ್ಥಳಕ್ಕೆ ಬಂದ ಬಂಟ್ವಾಳ ನಗರ ಠಾಣಾ ಪೋಲೀಸರ ತಂಡ ಅಂಬ್ಯುಲೆನ್ಸ್ ಮೂಲಕ ಮಂಗಳೂರು ವೆನ್ಲಕ್ ಆಸ್ಪತ್ರೆಗೆ ದಾಖಲಿಸಿ ಅವರ ಮನೆಯವರಿಗೆ ಮಾಹಿತಿ ನೀಡಿದ್ದರು.
ಆತ ನಿನ್ನೆ ಗುಣಮುಖನಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಕೂಡಲೇ ಮೊದಲು ಬಂಟ್ವಾಳ ನಗರ ಪೋಲಿಸ್ ಠಾಣೆಗೆ ಬಂದು ಧನ್ಯವಾದ ಹೇಳಿದ್ದಾನೆ ಎಂದು ವರದಿಯಾಗಿದೆ.