Facebook Twitter Instagram
    Saturday, March 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಬೆಳ್ತಂಗಡಿ: ಅಂದರ್ ಬಾಹರ್ ಅಡ್ಡಕ್ಕೆ ಪೊಲೀಸ್‌ ದಾಳಿ-23 ಮಂದಿ ವಶಕ್ಕೆ
    ಇತ್ತೀಚಿನ ಸುದ್ದಿ

    ಬೆಳ್ತಂಗಡಿ: ಅಂದರ್ ಬಾಹರ್ ಅಡ್ಡಕ್ಕೆ ಪೊಲೀಸ್‌ ದಾಳಿ-23 ಮಂದಿ ವಶಕ್ಕೆ

    September 21, 2024
    Share

    ಬೆಳ್ತಂಗಡಿ: ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಇಸ್ಪೀಟು ಎಲೆಗಳಿಂದ ಅಂದರ್‌-ಬಹಾರ್‌ ಎಂಬ ಅದೃಷ್ಟದ ಆಟವನ್ನು ಆಡುತ್ತಿದ್ದ ಅಡ್ಡಕ್ಕೆ ಪೊಲೀಸರು ದಾಳಿ ನಡೆಸಿ 23 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದ ಘಟನೆ ಬೆಳ್ತಂಗಡಿ ತಾಲೂಕು ಮಾಲಾಡಿ ಗ್ರಾಮದ, ಮಡಂತ್ಯಾರಿನಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕು ಮಾಲಾಡಿ ಗ್ರಾಮದ ಮಡಂತ್ಯಾರು ಪೇಟೆಯ ಬಳಿಯಿರುವ ಅಲ್ಬರ್ಟ್ ಡಿ ಸೋಜಾ ಎಂಬವರಿಗೆ ಸೇರಿದ ಕಟ್ಟಡದ ಹಿಂಭಾಗದಲ್ಲಿರುವ ಶೆಡ್‌ನೊಳಗೆ ಸುಮಾರು 15-20 ಜನರು ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಇಸ್ಪೀಟು ಎಲೆಗಳಿಂದ ಉಲಾಯಿ –ಪಿದಾಯಿ (ಅಂದರ್‌-ಬಹಾರ್‌ ) ಎಂಬ ಅದೃಷ್ಟದ ಆಟವನ್ನು ಆಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ, ಪುಂಜಾಲಕಟ್ಟೆ ಪೊಲೀಸ್‌ ಠಾಣಾ ಪಿಎಸ್‌ಐ (ಕಾ&ಸು) ನಂದಕುಮಾರ್‌ ಎಂ.ಎಂ ರವರು ಸಿಬ್ಬಂದಿಗಳೊಂದಿಗೆ ಧಾಳಿ ನಡೆಸಿ ಕೃತ್ಯದಲ್ಲಿ ತೊಡಗಿದ್ದ 23 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು, ಜುಗಾರಿ ಆಟಕ್ಕೆ ಉಪಯೋಗಿಸಿದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ವಶಕ್ಕೆ ಪಡೆದ ನಗದು ಸೇರಿ ಎಲ್ಲಾ ಸೊತ್ತುಗಳ ಅಂದಾಜು ಮೌಲ್ಯ ರೂ 36729/- ಆಗಬಹುದು. ಈ ಬಗ್ಗೆ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ದಿನಾಂಕ: 20.09.2024 ರಂದು ಪುಂಜಾಲಕಟ್ಟೆ ಠಾಣೆಯಲ್ಲಿ ಅ.ಕ್ರ 67/2024 ಕಲಂ: 79, 80 ಕರ್ನಾಟಕ ಪೊಲೀಸ್‌ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಮೊನಪ್ಪ ಪೂಜಾರಿ, ಬಿ.ಸಿ ರೋಡ್‌, ಬಂಟ್ವಾಳ ಜುಗಾರಿ ಕೃತ್ಯವನ್ನು ನಡೆಸುತ್ತಿದ್ದಾತ, ಪರಾರಿಯಾಗಿದ್ದಾನೆ . ಆರೋಪಿಗಳನ್ನು ಅಬ್ದುಲ್‌ ಖಾದರ್‌, , ಕುವೆಟ್ಟು ಬೆಳ್ತಂಗಡಿ, ಮೊಹಮ್ಮದ್‌ ಹೈದರ್‌, ಮೂಡುಪಡುಕೋಡಿ ಬಂಟ್ವಾಳ, ಜೋಸ್‌ ತೋಮಸ್‌, ಳಿ ಬಂಟ್ವಾಳ. ಅಬೂಬಕ್ಕರ್‌, ಉ ಜಿರೆ ಬೆಳ್ತಂಗಡಿ.ಲೋಕನಾಥ ಬಂಗೇರ, ತೆಂಕಕಜೆಕಾರು ಬಂಟ್ವಾಳ. ತುಕರಾಮ್‌, ,ನ್ಯಾಯತರ್ಪು ಬೆಳ್ತಂಗಡಿ. ಅಬ್ದುಲ್‌ ರಹಿಮಾನ್‌, ಕುವೆಟ್ಟು ಬೆಳ್ತಂಗಡಿ ಯಶೋಧರ, ಕಾವಳಮೂಡೂರು ಬಂಟ್ವಾಳ, ರಮೇಶ್‌ ಆಚಾರ್ಯ, ,ಮಾಲಾಡಿ, ಬೆಳ್ತಂಗಡಿಜಿ.ಎ.ದಾವೂದ್‌, ಪಡಂಗಡಿ ಬೆಳ್ತಂಗಡಿ, ರಿಯಾಜ್‌ @ ರಿಯಾಜುದ್ದೀನ್‌ ಲಾಯಿಲ ಬೆಳ್ತಂಗಡಿ. ಮೊಹಮ್ಮದ್‌, ಪಡಂಗಡಿ ಬೆಳ್ತಂಗಡಿ. ಅಬೂಬಕ್ಕರ್‌ @ ಗುಜುರಿ ಅಬೂಬಕ್ಕರ್, , ಕುವೆಟ್ಟು ಬೆಳ್ತಂಗಡಿ, ಅಬ್ದುಲ್‌ ರವೂಫ್‌,ಲಾಯಿಲ ಬಂಟ್ವಾಳ.ಮುಸ್ತಾಫ, ಲಾಯಿಲ ಬೆಳ್ತಂಗಡಿ, ಎಂ.ಅಶ್ರಫ್‌, ಕಾವಳಪಡೂರು ಬಂಟ್ವಾಳ.ರಮೇಶ್‌.ಕೆ, ಬಜತ್ತೂರು ಪುತ್ತೂರು, ಅಬ್ದುಲ್‌ ರಝಾಕ್‌, ಪಡಂಗಡಿ ಬೆಳ್ತಂಗಡಿ., ಕಮಲಾಕ್ಷ ದಾಸ್‌, ಮಾಲಾಡಿ ಬೆಳ್ತಂಗಡಿ, ವಿಜಯ ಕುಮಾರ್, ಪಡಂಗಡಿ ಬೆಳ್ತಂಗಡಿ, ಮಜೀದ್‌ ಯಾನೆ ಅಬ್ದುಲ್‌ ಮಜೀದ್, ಕುವೆಟ್ಟು ಬೆಳ್ತಂಗಡಿ,ಶ್ರೀಧರ ಪೂಜಾರಿ, ಪೆರ್ನೆ ಬಂಟ್ವಾಳ ,ಮುನ್ನ @ ಮುಸ್ತಾಫ, ನಾವುರ ಬಂಟ್ವಾಳ ಎಂದು ಗುರುತಿಸಲಾಗಿದೆ

    Post Views: 241

    Related Posts

    ವಿಟ್ಲ: ಸೈಕಲ್ ನಿಂದ ಬಿದ್ದು ಬಾಲಕ ಮೃತ್ಯು!

    March 7, 2026

    ಬಂಟ್ವಾಳ: ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ – ಅಂಚೆ ಇಲಾಖೆ ವಿರುದ್ಧ ಕೇಸ್‌

    March 7, 2026

    ಕಾರ್ಕಳ: ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿ ಅರೆಸ್ಟ್

    March 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.