ಸುಳ್ಯ: ಹಾಡಹಗಲೆ ನಡುಬೀದಿಯಲ್ಲಿ ತಲ್ವಾರ್ ಹಿಡಿದು ಓಡಾಡಿದ ಯುವಕನನ್ನು ಸುಳ್ಯ ಪೊಲೀಸರು ಬಂಧಿಸಿದ್ದು, ಆತನ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಸುಳ್ಯ ಕನಕಮಜಲು ಗ್ರಾಮದ ಸುಣ್ಣಮೂಲೆ ಬಳಿ ಸಂದೀಪ್ ಎಂಬಾತ ತಲವಾರು ಹಿಡಿದುಕೊಂಡು ಹೋಗುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಸಂದೀಪ್ ನನ್ನು ಸುಳ್ಯ ಪೊಲೀಸರು ಬಂಧಿಸಿದ್ದು ಸುಮೊಟೋ ಪ್ರಕರಣ ದಾಖಲಿಸಿದ್ದಾರೆ. ಸಂದೀಪ್ ಗೆ ತಲವಾರು ಹೇಗೆ ಸಿಕ್ಕದೆ ಎಂಬುವುದು ಪೊಲೀಸರು ತನಿಖೆಯಿಂದ ತಿಳಿಯಬೇಕಿದೆ.
ಪ್ರವೀಣ್ ನೆಟ್ಟಾರು ಅವರಿಗೆ ಶ್ರದ್ದಾಂಜಲಿ ಸಲ್ಲಿಸುವ ಕುರಿತ ಬ್ಯಾನರ್ ಅಳವಡಿಸಿಲು ಕನಕಮಜಲು ಪೇಟೆಯಲ್ಲಿ ಅನುಮತಿ ನೀಡಿಲ್ಲ ಎಂಬ ಕಾರಣಕ್ಕೆ ಕೋಪಗೊಂಡು ಈತ ತಲ್ವಾರ್ ಹಿಡಿದು ನಡೆದಾಡುತ್ತಿದ್ದ ಎಂದು ಹೇಳಲಾಗಿತ್ತು. ಈ ಬಗ್ಗೆ ಕನಕಮಜಲು ಗ್ರಾಮ ಪಂಚಾಯಿತಿ ಅವರನ್ನು ಸಂಪರ್ಕಿಸಿದಾಗ, ‘ ಪ್ಲೆಕ್ಸ್ ಬ್ಯಾನರ್ ಅಳವಡಿಸುವ ವಿಷಯವಾಗಿ ಅನುಮತಿಗಾಗಿ ನಮ್ಮಲ್ಲಿಗೆ ಯಾರೂ ಬಂದಿಲ್ಲ. ಬಟ್ಟೆ ಬ್ಯಾನರ್ ಹಾಕಲು ನಾವು ಅನುಮತಿ ನೀಡಿದ್ದೇವೆ’ ಎಂದು ಗ್ರಾ.ಪಂ. ಅಧ್ಯಕ್ಷ ಶ್ರೀಧರ ಕುತ್ಯಾಳ ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸರೋಜಿನಿ ತಿಳಿಸಿದ್ದಾರೆ.