ಬಜಪೆ: ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯೊಬ್ಬನನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.ಮೂಡುಪೆರಾರ ಗ್ರಾಮದ ಮಿತ್ತಕೊಳಪಿಲದ ನಿವಾಸಿ ಪ್ರತಾಪ್ ಬಂಧಿತ ಆರೋಪಿ. ಫೆ.13 ರಂದು ಮದ್ಯಾಹ್ನದ ವೇಳೆ ಮೂಡುಪೆರಾರ ಗ್ರಾಮದ ಮಿತ್ತಕೊಳಪಿಲದ ಬಳಿ ದೇವಸ ಎಂಬಲ್ಲಿರುವ ಜನಾರ್ದನ ಗೌಡ ಎಂಬವರ ಮನೆಯ ಹಿಂಬದಿಯ ಭಾಗಿಲಿನ ಚಿಲಕದ ನಟ್ ಬೋಲ್ಟ್ ಗಳನ್ನು ಸ್ಪಾನರ್ ನಿಂದ ಬಿಚ್ಚಿ ಮನೆಯ ಒಳಗಡೆ ಹೋಗಿ ಮನೆಯಲ್ಲಿದ್ದ ಒಟ್ಟು 40,000/- ರೂಪಾಯಿ ಹಣವನ್ನು ಕಳವು ಗೈದಿದ್ದು,ಈ ಬಗ್ಗೆ ಬಜಪೆ ಠಾಣಿಯಲ್ಲಿ ಪ್ರಕರಣ ದಾಖಲಾಗಿತ್ತು. ಬಜಪೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸಂದೀಪ್ ಜಿ.ಎಸ್ ರವರ ಅಪರಾಧ ಪತ್ತೆ ವಿಭಾಗದ ತಂಡವು ಈ ಬಗ್ಗೆ ಕಾರ್ಯಾಚರಣೆ ನಡೆಸಿ ಸಂಶಯದ ಮೇಲೆ ಆರೋಪಿ ಪ್ರತಾಪ್ ನನ್ನುಬಜಪೆ ಬಸ್ಸು ನಿಲ್ದಾಣದ ಬಳಿ ವಶಕ್ಕೆ ಪಡೆದಿದ್ದು,ಪೊಲೀಸರು ವಿಚಾರಣೆ ನಡೆಸಿದಾಗ ಆರೋಪಿಯು ಜನಾರ್ದನ ಗೌಡ ರವರ ಮನೆಯಿಂದ ಹಣ ಕಳವು ಮಾಡಿರುವ ಬಗ್ಗೆ ಮತ್ತು ಕಳೆದ ಸಪ್ಟೆಂಬರ್ ತಿಂಗಳಲ್ಲಿ ಕೊಂಪದವು ನೆಲ್ಲಿಗುಡ್ಡೆಯ ನಿವಾಸಿ ಗೋವಿಂದ ಗೌಡ ಎಂಬವರ ಮನೆಯಿಂದ ಒಟ್ಟು 4 ಗೋಣಿ ಚೀಲದಲ್ಲಿ ತುಂಬಿಸಿದ್ದ ಸುಲಿದ ಅಡಿಕೆಯನ್ನು ಕಳವು ಮಾಡಿರುವುದಲ್ಲದೆ ಊರಿನಲ್ಲಿ ಚಿಕ್ಕಪುಟ್ಟ ಕಳ್ಳತನ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಂಧಿತ ಆರೋಪಿಯಿಂದ ಕಳವು ಮಾಡಿರುವ 10,000/- ರೂಪಾಯಿ ಹಣ, ಸುಮಾರು 1 ಲಕ್ಷ ರೂಪಾಯಿ ಮೌಲ್ಯದ 4 ಗೋಣಿ ಚೀಲ ಸುಲಿದ ಅಡಿಕೆ, ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ಆಟೋ ರಿಕ್ಷಾ ಮತ್ತು ಇತರೆ ಸೊತ್ತುಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.ಆರೋಪಿಯ ವಿರುದ್ದ ಬ್ಯಾಟರಿ ಕಳವುವಿಗೆ ಸಂಬಂಧಿಸಿದಂತೆ 2 ಪ್ರತ್ಯೇಕ ಪ್ರಕರಣಗಳು ಬಜಪೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಪತ್ತೆ ಕಾರ್ಯದಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ IPS ರವರ ಮಾರ್ಗದರ್ಶನದಂತೆ, DCP (L&O) ಶ್ರೀ ಸಿದ್ದಾರ್ಥ ಗೋಯೆಲ್ IPS ಮತ್ತು DCP (ಕ್ರೈಂ) ದಿನೇಶ್ ಕುಮಾರ್ ರವರ ನಿರ್ದೇಶನದಂತೆ, ಮಂಗಳೂರು ಉತ್ತರ ಉಪ ವಿಭಾಗದ ACP ಮನೋಜ್ ಕುಮಾರ್ ಮತ್ತು ಬಜಪೆ ಪೊಲೀಸ್ ಠಾಣೆಯ ನಿರೀಕ್ಷಕ ಸಂದೀಪ್ ಜಿ.ಎಸ್ ರವರ ನೇತೃತ್ವದಲ್ಲಿ ಬಜಪೆ ಪೊಲೀಸ್ ಠಾಣೆಯ PSI ರೇವಣ ಸಿದ್ದಪ್ಪ, PSI ಗುರಪ್ಪ ಕಾಂತಿ, PSI ರವಿ, ಸಿಬ್ಬಂದಿಯವರಾದ ASI ರಾಮ ಪೂಜಾರಿ ಮೇರೆಮಜಲು, ರಶೀದ ಶೇಖ್, ಸುಜನ್, ದೇವಪ್ಪ, ಬಸವರಾಜ್ ಪಾಟೀಲ್, ಕೆಂಚಪ್ಪ, ಚಿದಾನಂದ, ಪ್ರಕಾಶ್, ದುರ್ಗಾ ಪ್ರಸಾದ್, ಜಗದೀಶ್, ರವಿಕುಮಾರ್, ದಯಾನಂದ, ಮದು, ಅನಿಲ್ ಕುಮಾರ್, ವಿರುಪಾಕ್ಷ, ಭರಮಪ್ಪ ಮತ್ತು ನಗರ ಕಂಪ್ಯೂಟರ್ ವಿಭಾಗದ ಮನೋಜ್ ರವರು ಭಾಗವಹಿಸಿದ್ದರು.