Facebook Twitter Instagram
    Saturday, March 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»Uncategorized»ಪುತ್ತೂರು : ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ, ಕೊಲೆ ಯತ್ನ : ಆರೋಪಿಯ ಬಂಧನ
    Uncategorized

    ಪುತ್ತೂರು : ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ, ಕೊಲೆ ಯತ್ನ : ಆರೋಪಿಯ ಬಂಧನ

    July 28, 2024
    Share

    ಪುತ್ತೂರು : ಗಲಾಟೆ ವಿಷಯವಾಗಿ ಕರೆ ಬಂದ ಹಿನ್ನಲೆ ವಿಚಾರಣೆಗೆ ತೆರಳಿದ ಪೊಲೀಸರ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿರುವ ಕುರಿತು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತನನ್ನು ಪೊಲೀಸರು ಬಂಧಿಸಿದ್ದಾರೆ. ಬನ್ನೂರು ಗ್ರಾಮದ ಕಂಜೂರು ನಿವಾಸಿ ತೇಜಸ್ ಬಂಧಿತ.

    ಜು.26 ರಂದು ಜಿಲ್ಲಾ ಕಂಟ್ರೋಲ್‌ ರೂಮ್‌ ನಿಂದ ಇವೆಂಟ್‌ ಬಂದಿದ್ದು, ಇವೆಂಟ್‌ನಲ್ಲಿ ಬಂದಿರುವ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಘಟನಾ ಸ್ದಳವನ್ನು ಖಚಿತ ಪಡಿಸಿಕೊಂಡು ಘಟನಾ ಸ್ದಳವಾದ ಪುತ್ತೂರು ಬನ್ನೂರು ಗ್ರಾಮದ ಕಂಜೂರು ಎಂಬಲ್ಲಿ ತೇಜಸ್‌ ಎಂಬವರು ತನ್ನ ತಾಯಿಯೊಂದಿಗೆ ಗಲಾಟೆ ಮಾಡುತ್ತಿದ್ದು ತೇಜಸ್‌ನ ತಾಯಿ ಚಂದ್ರಾವತಿಯವರು ಪಕ್ಕದ ಮನೆಗೆ ಬಂದಿರುವುದಾಗಿ ತಿಳಿಸಿದ್ದು, ಆಗ ಪೊಲೀಸ್ ಸಿಬ್ಬಂದಿ ಚಂದ್ರಾವತಿಯವರನ್ನು ವಿಚಾರಿಸುತ್ತಿರುವಾಗ ತೇಜಸ್‌ನು ಆತನ ಮನೆಯಿಂದ ಪೊಲೀಸರನ್ನು ನೋಡಿ ಅವಾಚ್ಯವಾಗಿ ಬೈದು, ನಮ್ಮ ಮನೆಗೆ ಪೊಲೀಸರು ಬರುವುದು ಯಾಕೆ? ಎಂದು ಹೇಳಿ ಆತನ ಮನೆಯ ಅಂಗಳದಲ್ಲಿದ್ದ ಪೋರ್ಡ್ ಕಾರನ್ನು ತುರ್ತು ಸ್ಪಂದನಾ ( ಇಆರ್‌ಎಸ್‌ಎಸ್‌) ವಾಹನಕ್ಕೆ ಅಡ್ಡವಾಗಿ ನಿಲ್ಲಿಸಿದ್ದು, ಆ ಸಮಯ ಆತನಲ್ಲಿ ಕಾರನ್ನು ರಸ್ತೆಯಿಂದ ತೆಗೆಯಲು ಹೇಳಿದಾಗ ಆತನು ಕಾರನ್ನು ತೆಗೆಯಲು ನಿರಾಕರಿಸಿದ್ದು, ಕೂಡಲೇ ಈ ವಿಚಾರವನ್ನು ರಾತ್ರಿ ರೌಂಡ್ಸ್‌ ಕರ್ತವ್ಯದಲ್ಲಿದ್ದ ಪುತ್ತೂರು ನಗರ ಠಾಣಾ ಎಎಸ್ಐ ಮೋನಪ್ಪ ರವರಿಗೆ ಕರೆಮಾಡಿ ಘಟನಾ ಸ್ದಳಕ್ಕೆ ಬರುವಂತೆ ತಿಳಿಸಿದ್ದು, ಅವರು ಹೈವೇ ಪೆಟ್ರೋಲ್‌ ವಾಹನದಲ್ಲಿ ಸ್ದಳಕ್ಕೆ ಬಂದಿದ್ದು, ಎಎಸ್ಐ ಮೋನಪ್ಪ, ಸಿಬ್ಬಂದಿಗಳು ತೇಜಸ್‌ನ ಮನೆಯ ಅಂಗಳಕ್ಕೆ ಹೋಗಿ ಕಾರಿನ ಕೀಯನ್ನು ಕೊಡುವಂತೆ ಆತನಲ್ಲಿ ತಿಳಿಸಿದಾಗ, ಆತನು ಮನೆಯ ಸಿಟೌಟ್‌ನಲ್ಲಿ ನಿಂತುಕೊಂಡು ಕೀಯನ್ನು ಕೊಡದೇ ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಹೇಳಿ ಮನೆಯ ಒಳಗಿನಿಂದ ತನ್ನ ಬಲ ಕೈಯಲ್ಲಿ ಒಂದು ಸ್ಟೀಲ್‌ ರಾಡನ್ನು ಹಿಡಿದುಕೊಂಡು ಬಂದು ಏಕಾಏಕಿಯಾಗಿ ರಾಡ್‌ನಿಂದ ಬಲವಾಗಿ ಪಿಸಿ ವಿನಾಯಕರವರ ತಲೆಗೆ ಹೊಡೆಯಲು ಬೀಸಿದ್ದು, ವಿನಾಯಕ ರವರು ರಾಡ್‌ನ ಹಲ್ಲೆಯಿಂದ ತಪ್ಪಿಸಿ ಕೊಂಡಾಗ ರಾಡ್‌ನ ಏಟು ಅವರ ಬಲ ಭುಜಕ್ಕೆ ಬಿದ್ದಿರುತ್ತದೆ. ಎಲ್ಲರೂ ಸೇರಿ ತೇಜಸ್‌ನ ಕೈಯಲ್ಲಿದ್ದ ರಾಡನ್ನು ಎಳೆದು ತೆಗೆದು ಕೊಂಡಿದ್ದು, ಆಗ ತೇಜಸ್‌ನು ತನ್ನ ಕೈಯಿಂದ ಪಿಸಿ ವಿನಾಯಕ ಹಾಗೂ ಇನ್ನೋರ್ವ ಪಿಸಿಗೆ ಹಲ್ಲೆ ನಡೆಸಿದ್ದು, ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ಬೈದು, ಪೊಲೀಸ್‌ ವಾಹನಕ್ಕೆ ಕಾರನ್ನು ಅಡ್ಡವಾಗಿ ನಿಲ್ಲಿಸಿ, ಜೀವ ಬೆದರಿಕೆ ಹಾಕಿ, ಪೊಲೀಸ್‌ ಸಮವಸ್ತ್ರದಲ್ಲಿ ಕರ್ತವ್ಯದಲ್ಲಿರುವಾಗ ಸಾರ್ವಜನಿಕ, ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಹಲ್ಲೆ ಮಾಡಿ, ಕೊಲ್ಲಲು ಪ್ರಯತ್ನಿಸಿದ ತೇಜಸ್‌ನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಅ.ಕ್ರ:68/2024 ಕಲಂ:352,351,126(2),132,121(1),109,115(2),118 ಬಿ,ಎನ್,ಎಸ್ ಪ್ರಕರಣ ದಾಖಲಾಗಿದೆ.

    Post Views: 205

    Related Posts

    ಮಂಗಳೂರು: ಹೈದರಾಬಾದ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೈಬರ್ ವಂಚಕರ ಜಾಲವನ್ನು ಬೇಧಿಸಿದ ಮಂಗಳೂರು ಸೈಬರ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು- 6 ಮಂದಿ ಆರೋಪಿಗಳ ಬಂಧನ

    February 28, 2026

    ಪ್ರತಿಷ್ಠಿತ ಎಕ್ಸ್ ಪರ್ಟ್ ಪಿಯು ಕಾಲೇಜು ವಿದ್ಯಾರ್ಥಿಗಳ ಸಾಧನೆ; 99 ಪರ್ಸೆಂಟೈಲ್ ಕ್ಕಿಂತ ಅಧಿಕ ಅಂಕ ಪಡೆದ 15 ವಿದ್ಯಾರ್ಥಿಗಳು

    February 18, 2026

    ಮಂಗಳೂರು:ಬಸ್ ಚಾಲಕನ ನಿರ್ಲಕ್ಷ್ಯಕ್ಕೆ ಯುವತಿ ಸಾವು , ಶವ ಮುಂದಿಟ್ಟು ಪ್ರತಿಭಟಿಸಿದವರ ವಿರುದ್ಧವೂ ಕೇಸ್- ಕಮಿಷನರ್

    February 6, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.