ಕಾರ್ಕಳ: ಚಾಲಕನ ಮೇಲೆ ಟಿಪ್ಪರ್ ಮಾಲೀಕ ಮತ್ತು ಅವರ ಜೊತೆಗಿದ್ದ ವ್ಯಕ್ತಿಯೋರ್ವ ಹಲ್ಲೆ ಮಾಡಿ ಅಟ್ಟಹಾಸ ಮೆರೆದ ಘಟನೆ ಕಾರ್ಕಳದಲ್ಲಿ ನಡೆದಿದೆ. ಯೋಗಿಶ್ ಎಂಬವರು ಬಂಧಿತ ಆರೋಪಿ. ಚಾಲಕ ಅರ್ಜುನ್ ಹಲ್ಲೆಗೊಳಗಾದ ವ್ಯಕ್ತಿ.

ಯೋಗಿಶ್ ಎಂಬವರ ಟಿಪ್ಪರ್ ನಲ್ಲಿ ಅರ್ಜುನ್ ಚಾಲಕರಾಗಿ ದುಡಿಯುತ್ತಿದ್ದರು. ಅರ್ಜುನ್ ಗೆ ಸಂಬಳ ಬಾಕಿಯಿಟ್ಟದ್ದನ್ನು ಕೇಳಿದ ಪದೇ ಪದೇ ಕೇಳಿದ ಬಳಿಕ ಯೋಗಿಶ್ ಅದನ್ನು ನವೆಂಬರ್ ನಲ್ಲಿ ಕೊಟ್ಟಿದ್ದರು. ಫೆ.೧೩ಕ್ಕೆ ರಾತ್ರಿ ಬೆಳ್ಮಣ್ ನಲ್ಲಿರುವ ತನ್ನ ಮಾವನ ಹೋಟೆಲ್ ಗೆ ಅರ್ಜುನ್ ಹೋದಾಗ ಅಲ್ಲಿದ್ದ ಯೋಗಿಶ್ ಅವಾಚ್ಯ ಶಬ್ಧಗಳಿಂದ ಬೈದು ಆತನ ಮುಖಕ್ಕೆ ಹೊಡೆದಿದ್ದಾನೆ.
ಯೋಗಿಶ್ ಜೊತೆಗಿದ್ದ ಗಡ್ಡಧಾರಿ ವ್ಯಕ್ತಿ ಕೂಡಾ ಸೋಡಾ ಬಾಟಲಿಯಿಂದ ಹಲ್ಲೆ ಮಾಡಿದ್ದಾನೆ. ಈ ಬಗ್ಗೆ ಅರ್ಜುನ್ ಕಾರ್ಕಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಅವರು ಹಲ್ಲೆ ನಡೆಸಿದ ಸಂದರ್ಭ ತನ್ನ ಜೇಬಿನಲ್ಲಿದ್ದ ಹಣ ಕಳೆದುಹೋಗಿದೆ ಎಂದು ಕೂಡಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.