ಮಂಗಳೂರು: ಅನಧಿಕೃತ ಕೃಷಿ ಕೀಟನಾಶಕಗಳನ್ನು ಮಾರಾಟ ಮಾಡುತ್ತಿದ್ದ ಮುಲ್ಕಿ ಹೋಬಳಿಯ ಕಾರ್ನಾಡು ಗ್ರಾಮ ಸನ್ ಕೆಮಿಕಲ್ ಕಂಪೆನಿಯ ಮಳಿಗೆ ಮೇಲೆ ಇತ್ತೀಚೆಗೆ ಕೃಷಿ ಜಾರಿದಳದ ಮೈಸೂರು ವಿಭಾಗದ ಉಪ ಕೃಷಿ ನಿರ್ದೇಶಕ ನಾಗರಾಜ್ ರೆಡ್ಡಿ, ಮಂಗಳೂರು ತಾಲೂಕು ಹಾಗೂ ಜಾರಿದಳ ಸಹಾಯಕ ಕೃಷಿ ನಿರ್ದೇಶಕ ವೀಣಾ ಕೆ.ಆರ್., ಮೈಸೂರು ವಿಭಾಗದ ಕೃಷಿ ಅಧಿಕಾರಿ ದಿವಾಕರ್ ಹಾಗೂ ಷಣ್ಮುಖ ನೇತೃತ್ವದ ತಂಡ ದಾಳಿ ನಡೆಸಿದೆ.
ಈ ಸಂದರ್ಭದಲ್ಲಿ 1.19 ಲಕ್ಷ ರೂ. ಮೌಲ್ಯದ ಕಾಪರ್ ಸಲ್ಫೆ„ಡ್ ಹಾಗೂ ಮೈಲುತುತ್ತು ಕೀಟನಾಶಕಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕೃಷಿ ಜಾರಿದಳ ಹಾಗೂ ಎಲ್ಲ ತಾಲೂಕಿನ ಗುಣ ನಿಯಂತ್ರಣ ಪರಿವೀಕ್ಷಕರ ದಳವು ಅನಧಿಕೃತವಾಗಿ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ದಾಸ್ತಾನು ಮತ್ತು ಮಾರಾಟ ಮಾಡುತ್ತಿರುವವರ ಬಗ್ಗೆ ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನಿನ ಕ್ರಮ ಕೈಗೊಳ್ಳಲಿದೆ ಎಂದು ಮಂಗಳೂರು ತಾಲೂಕು ಸಹಾಯಕ ಕೃಷಿ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.