ಮಂಗಳೂರು : ಅನ್ಯಕೋಮಿನ ವ್ಯಕ್ತಿ ಮೇಲೆ ತಂಡದಿಂದ ತಲವಾರು ದಾಳಿ ನಡೆದ ಘಟನೆ ಮಂಗಳೂರಿನ ಕಾವೂರಿನ ಶಾಂತಿನಗರದಲ್ಲಿ ನಡೆದಿದೆ. ಮೂವರು ಆರೋಪಿ ಗಳನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ಪಂಜಿಮೊಗರು ನಿವಾಸಿ ಚರಣ್(23), ಕುಳಾಯಿ ನಿವಾಸಿ ಸುಮಂತ್ (24), ಕೋಡಿಕಲ್ ನಿವಾಸಿ ಅವಿನಾಶ್ (24) ಬಂಧಿತರು, ಆಗಸ್ಟ್ 21ರಂದು ರಾತ್ರಿ ಕಾವೂರಿನ ಎಂವಿ ಶೆಟ್ಟಿ ಕಾಲೇಜು ರಸ್ತೆಯಲ್ಲಿ ಸ್ಕೂಟರ್ ನಲ್ಲಿ ಅಡ್ಡಗಟ್ಟಿದ್ದ ತಂಡ, ತಲವಾರು ದಾಳಿಯಿಂದ ಮುಖಕ್ಕೆ ಗಾಯವಾಗಿದ್ದು ಯುವಕನನ್ನು ನಗರ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.




