ಕಾಸರಗೋಡು ಜಿಲ್ಲಾ ನ್ಯಾಯಾಲಯ ಸಮುಚ್ಚಯದ ಬೀಗ ಮುರಿದು ಕಳವಿಗೆ ಯತ್ನಿಸಿದ ಆರೋಪಿಯನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ಕೋಜಿಕ್ಕೋ ಡ್ ತೋಟಿಲ್ ಪಾಳ ದ ಸನಿಶ್ ಜೋರ್ಜ್ (44) ಬಂಧಿತ ಆರೋಪಿ. ಆಗಸ್ಟ್ ನಾಲ್ಕರಂದು ಮುಂಜಾನೆ ಕೃತ್ಯ ನಡೆದಿತ್ತು. ನ್ಯಾಯಾಲಯದ ಬೀಗ ಮುರಿದು ಒಳನುಗ್ಗಿದ ಈತ ಕಳವಿಗೆತ್ನಿಸಿದ್ದು , ಶಬ್ದ ಕೇಳಿ ಬೊಬ್ಬೆ ಹಾಕಿದಾಗ ಈತ ಪರಾರಿಯಾಗಿದ್ದನು.ಅದೇ ದಿನ ರಾತ್ರಿ ನಾಯಮ್ಮರಮೂಲೆ ಶಾಲೆಯ ಬೀಗ ಮುರಿದು ಒಳನುಗ್ಗಿದ ಈತ ೫೦೦ ರೂ . ನಗದನ್ನು ಕಳವುಗೈದಿದ್ದನು.. ರಾಜ್ಯದ ವಿವಿಧೆಡೆಗಳಲ್ಲಾಗಿ ಹದಿನೈದಕ್ಕೂ ಅಧಿಕ ಸ್ಥಳಗಳಲ್ಲಿ ಕಳವು ನಡೆಸಿದ್ದಾಗಿ ತನಿಖೆಯಿಂದ ತಿಳಿದು ಬಂದಿದೆ. ಹೊಸದುರ್ಗ , ನೀಲೇಶ್ವರ , ಚೋಮಲಾ , ಪಯಂಗಡಿ , ಕೊಯಿಲಾಂಡಿ , ಪಾಲಕ್ಕಾಡ್ ಕಸಬಾ , ಧರ್ಮಡ, ವೆಳ್ಳ೦ಮುಂಡ, ಸುಲ್ತಾನ್ ಬತ್ತೇರಿ , ನಾದಪುರಂ ಮೊದಲಾದ ಠಾಣೆ ಗಳಲ್ಲಿ ಈತನ ವಿರುದ್ಧ ಪ್ರಕರಣಗಳಿವೆ. ಇವುಗಳಲ್ಲಿ ಅಂಚೆ ಕಚೇರಿ , ನ್ಯಾಯಾಲಯದಲ್ಲಿನ ಕಳವು ಒಳಗೊಂಡಿದೆ. ಪೊಲೀಸರು ಸಿ ಸಿ ಟಿ ವಿ ದ್ರಶ್ಯಗಳನ್ನು ಕೇಂದ್ರೀಕರಿಸಿ ನಡೆಸಿದ ತನಿಖೆಯಿಂದ ಆರೋಪಿಯ ಸುಳಿವು ಲಭಿಸಿತ್ತು.ಡಿ ವೈ ಎಸ್ಪಿ ಸಿ.ಕೆ ಸುನಿಲ್ ಕುಮಾರ್ ನೇತೃತ್ವದ ಪೊಲೀಸ್ ತಂಡ ಅಂಗಮಾಲಿ ಯಿಂದ ಬಂಧಿಸಿದೆ. ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ