ಚಾಮರಾಜನಗರ: ಅಪ್ರಾಪ್ತೆ ವಾಹನ ಚಾಲನೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂದಿಸಿದಂತೆ ಚಾಮರಾಜನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿ ನ್ಯಾಯಾಲಯದ ಮೆಟ್ಟಿಲೇರಿ ಈಗ ಲೋಕಾ ಅದಾಲತ್ ಅಲ್ಲಿ 12.500 ರೂ ಇತ್ಯರ್ಥವಾಗಿದೆ ಎಂದು ತಿಳಿದುಬಂದಿದೆ.
ಪಟ್ಟಣದಲ್ಲಿ ದಿನೆ ದಿನೆ ಅಪ್ರಾಪ್ತರಿಂದ ವಾಹನ ಚಾಲನೆ, ಶಿರಸ್ತ್ರಾಣ ಧರಿಸದೆ ವಾಹನ ಸಂಚಾರ ಮಾಡುವ ಪ್ರಕರಣಗಳು ಕೂಡ ಹೆಚ್ಚುತ್ತಿದೆ ಎಂದು ಸವಿಸ್ತೃತವಾಗಿ ನಿಮ್ಮ ಕನ್ನಡ ನ್ಯೂಸ್ ನೌ ವರದಿ ಪ್ರಕಟಿಸಲಾಗಿತ್ತು.
ಕೆಲವು ಅಪ್ರಾಪ್ತರು ವಾಹನ ಚಾಲನೆ ಮಾಡುತ್ತಿರುವ ಸಂಬಂದ ಕೆಲ ಪೊಲೀಸರು ಗೊತ್ತಿದ್ದು ಗೊತ್ತಿಲ್ಲದಂತೆ ಮೌನವಾಗಿದ್ದರು..ಕೆಲ ಪೊಲೀಸರೂ ಕೂಡ ತಮ್ಮ ಮಕ್ಕಳು ಅಪ್ರಾಪ್ತರೆಂದು ಗೊತ್ತಿದ್ದರೂ , ವಾಹನ ಚಾಲನೆ ಮಾಡೊದು ತಪ್ಪೆಂದು ಗೊತ್ತಿದ್ದರೂ ಕಾನೂನಿನ ಅರಿವಿನ ಬಗ್ಗೆ ಬೇಜವಬ್ದಾರಿತನ ಪ್ರದರ್ಶನ ಮಾಡಿದ್ದಾರೆ..ಮಾಡುತ್ತಿದ್ದಾರ ಬಗ್ಗೆ ಸುದ್ದಿ ಹಾಕಲಾಗಿತ್ತು.
ಚಾಮರಾಜನಗರ ಪಟ್ಟಣದಲ್ಲಿ ಶಾಲಾ ಮಕ್ಕಳಿಂದ ವಾಹನ ಚಾಲನೆಯನ್ನ ಚಾಲನೆ ಮಾಡಿಸೊದು ತಪ್ಪು ಎಂದು ತಿಳಿದಿದ್ದರೂ ಪೋಷಕರು ಮಾತ್ರ ಉದ್ದಟತನ ಪ್ರದರ್ಶಿಸಿದ್ದಾರೆ. ಜಿಲ್ಲೇಲಿ ಇಷ್ಟು ಅಪ್ರಾಪ್ತ ಮಕ್ಕಳಿಂದ ವಾಹನ ಚಾಲನೆ ಮಾಡುತ್ತಿದ್ದರೂ ಯಾವ್ದೆ ಪ್ರಕರಣ ನ್ಯಾಯಾಲಯಕ್ಕೆ ಹಸ್ತಾಂತರಿಸದೆ ರಾಜೀ ಮಾಡಿಕೊಂಡು ಕೈ ಬಿಡುತ್ತಿರುವುದೆ ಸಾಕ್ಷಿಯಾಗಿದೆ. ಅನ್ಯ ಜಿಲ್ಲೆಯೊಂದರಲ್ಲಿ ನ್ಯಾಯಾಲಯ ಅಪ್ರಾಪ್ತ ಮಕ್ಕಳ ವಾಹನ ಚಾಲನೆ ಮಾಡಿದ ತಪ್ಪಿದೆ 25 ಸಾವಿರ ದಂಡ ಹಾಕಿದ ಸುದ್ದಿ ಪ್ರಚಲಿತವಾಗಿದೆ. ಹೀಗಿರುವಾಗ ಜಿಲ್ಲೇಲಿ ಇಂತಹ ಪ್ರಕರಣ ಪೊಲೀಸರು ಕಣ್ಣಿಗೆ ಕಂಡರೂ ಮೌನವಹಿಸಿದೆ. ಕಠಿಣ ಕ್ರಮ ಜರುಗಿಸದೆ ಇರೋದು ಇಂತಹ ಸನ್ನಿವೇಶಗಳಿಗೆ ಕಾರಣವಾಗಿದೆ ಎಂದು ವರದಿ ಮಾಡಲಾಗಿತ್ತು.
ಇತ್ತೀಚೆಗೆ ಕೆಎಸ್ಪಿ ಆಯಪ್ ಅಲ್ಲಿ ಅಪ್ರಾಪ್ತೆ ಬಾಲಕಿ ಶಿರಸ್ತ್ರಾಣ ಧರಿಸದೆ, ತ್ರಿಬಲ್ ರೈಡ್ ಜೊತೆಗೆ ಅಪಾಯಕಾರಿ ವಾಹನ ಚಾಲನೆ ಮಾಡುತ್ತಿದ್ದ ಪ್ರಕರಣ ದಾಖಲಿಸಿದ್ದರು. ಇದರಿಂದ ಎಚ್ಚೆತ್ತ ಸಂಚಾರಿ ಠಾಣಾ ಪೊಲೀಸರು ವಾಹನ ಚಾಲನೆ ಮಾಡುತ್ತಿದ್ದ ವಿದ್ಯಾರ್ಥಿನಿ ಹಾಗೂ ಪೋಷಕರ ಮೇಲೆ FIR ದಾಖಲಿಸಿದ್ದರು.
ಚಾಮರಾಜನಗರ ಸಂಚಾರಿ ಠಾಣೆಯ ಇನ್ಸ್ ಪೆಕ್ಟರ್ ನಂದೀಶ್ ಅವರು ಎಪ್‌ಐಆರ್ ದಾಖಲಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಈ ಪ್ರಕರಣ ಬಹುಶಃ ವ್ಯಾಜ್ಯ ಪೂರ್ವ ಪ್ರಕರಣದಡಿ ಲೋಕಾ ಅದಾಲತ್ ಅಲ್ಲಿ 12.500 ರೂ ಕಟ್ಟಿಸಿಕೊಂಡು ಇತ್ಯರ್ಥ ಮಾಡಲಾಗಿದೆ. ಅಪ್ರಾಪ್ತ ವಾಹನ ಚಾಲನಾ ಸಂಬಂದ ಬಹುತೇಕ ಜಿಲ್ಲೆಗಳಲ್ಲಿ 25 ಸಾವಿರ ಹಾಗೂ ಅದ್ಕಿಂತ ಹೆಚ್ಚು ದಂಡ ನ್ಯಾಯಾಲಯ ವಿಧಿಸಿದ್ದವು. ಹೈಕೋರ್ಟ್ ನ್ಯಾಯಾದೀಶರ ಆದೇಶದಂತೆ ಶೆ.೫೦ % ರಿಯಾಯ್ತಿ ದರದಲ್ಲಿ ದಂಡ ಪಾವತಿ ಮಾಡಿಕೊಂಡಿರುವುದು ನೋಡಿದರೆ ಅಲ್ಲಿಗೆ 25 ಸಾವಿರ ದಂಡ ಬಿದ್ದಂತಾಗಿದೆ ಎಂದರೆ ತಪ್ಪಾಗಲಾರದು. ಚಾಮರಾಜನಗರ ಜಿಲ್ಲೆಯಲ್ಲಿ ಹಾಗೂ ಸಂಚಾರಿ ಠಾಣೆಯಲ್ಲಿ ಎಪ್‌ಐಆರ್ ದಾಖಲಿಸಿ ನ್ಯಾಯಾಲಯ ಹಂತದವರೆಗಿನ ಪ್ರಕರಣ ದಾಖಲಿಸಿ ದಂಡ ವಿಧಿಸಿದ ಮೊದಲ ಪ್ರಕರಣ ಇದಾಗಿದೆ ಎಂದರೆ ತಪ್ಪಾಗಲಾರದು.