Author: main-admin

ತನ್ನ ಗೌರವಾನ್ವಿತ ಗ್ರಾಹಕರ ಅನುಕೂಲಕ್ಕಾಗಿ, ಎಂಸಿಸಿ ಬ್ಯಾಂಕಿನ ಕುಲಶೇಖರ ಶಾಖೆಯನ್ನು ಆಗಸ್ಟ್ 17, 2025 ರಂದು ಮಂಗಳೂರಿನ ಕಲ್ಪನೆಯಲ್ಲಿರುವ ಸ್ಪೆಕ್ಟ್ರಮ್ ಬಿಸಿನೆಸ್ ಸೆಂಟರ್‌ನ ಕೆಳ ಮಹಡಿಯಲ್ಲಿರುವ ಹೊಸದಾಗಿ ಖರೀದಿಸಿದ ಸ್ವಂತ ನಿವೇಶನಕ್ಕೆ ಸ್ಥಳಾಂತರಿಸಲಾಯಿತು.ಹೊಸ ಕಛೇರಿಯನ್ನು ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ಉದ್ಘಾಟಿಸಿದರು. ಕಾರ್ಯಕ್ರಮವನ್ನು ಮಂಗಳೂರಿನ ಬಿಕರ್ನಕಟ್ಟೆಯ ಇನ್ಫೆಂಟ್ ಜೀಸಸ್ ಶ್ರೈನ್‌ನ ನಿರ್ದೇಶಕ ವಂದನೀಯ ಸ್ಟಿಫನ್ ಪಿರೇರಾ, ಒಸಿಡಿ ಅವರು ದೀಪ ಬೆಳಗಿಸುವ ಮೂಲಕ ಪ್ರಾರಂಬಿಸಿದರ. ಕೊರ್ಡೆಲ್ ಹೋಲಿ ಕ್ರಾಸ್ ಚರ್ಚ್ನ ಧರ್ಮಗುರುಗಳಾದ ವಂದನೀಯ ಕ್ಲಿಫರ್ಡ್ ಫೆರ್ನಾಂಡಿಸ್ ಅವರು ಹೊಸ ಕಛೇರಿಯನ್ನು ಆಶೀರ್ವದಿಸಿದರು. ಸೇಫ್ ರೂಮ್ ಅನ್ನು ಮುಖ್ಯ ಅತಿಥಿ, ಸಿಸ್ಟರ್ಸ್ ಆಫ್ ದಿ ಲಿಟಲ್ ಫ್ಲವರ್ ಆಫ್ ಬೆಥನಿಯ ಪ್ರೊಕ್ಯುರೇಟರ್ ಸಿ. ಫ್ಲೋಸಿ ಮಿÄನೆಜಸ್ ಉದ್ಘಾಟಿಸಿದರು. ಎಟಿಎಂ ಸೌಲಭ್ಯವನ್ನು ಮಂಗಳೂರಿನ ವೈಟ್ ಡವ್ಸ್ನ ಸ್ಥಾಪಕಿ ಮತ್ತು ಅಧ್ಯಕ್ಷೆ ಶ್ರೀಮತಿ ಕೊರಿನ್ ರಸ್ಕ್ವಿನ್ಹಾ ಉದ್ಘಾಟಿಸಿದರು. ಮೊದಲ ಎಟಿಎಂ ನಗದು ಹಿಂಪಡೆಯುವಿಕೆಯನ್ನು ಮಂಗಳೂರಿನ ಪ್ರಸಾದ್ ಪ್ರಿಂಟರ್ಸ್ನ ಮಾಲೀಕ ಶ್ರೀ…

Read More

ಪುತ್ತೂರು: ಆ.12ರಂದು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಈಶ್ವರಮಂಗಳದ ಮನೆಯೊಂದರಲ್ಲಿ ನಡೆದ, ಸುಮಾರು 31 ಗ್ರಾಂ ಬಂಗಾರ ಮತ್ತು ರೂ.5000/- ನಗದು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಯನ್ನು ಈಶ್ವರಮಂಗಲದಲ್ಲಿ ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ನೆಟ್ಟಣಿಗೆ ಮುಡೂರು ಗ್ರಾಮದ ನಿವಾಸಿ ದಯಾನಂದ್ ನಾಯ್ಕ ಎಂ (29) ಎಂದು ಗುರುತಿಸಲಾಗಿದೆ. ಊರಿನಲ್ಲಿ ತಾನಾಯಿತು ತನ್ನ ಕೆಲಸವಾಯಿತು ಯಾರ ತಂಟೆ ತಕರಾರಿಗೆ ಹೋಗದ ಕೆಂಪು ಕಲ್ಲು ಲೋಡಿಂಗ್ ನ್ನು ತನ್ನ ಕಾಯಕವಾಗಿ ನಂಬಿದ್ದ ದಯಾನಂದ ಕೆಲವು ಸಮಯದಿಂದ ಕೆಂಪು ಕಲ್ಲು ಕೆಲಸ ಇಲ್ಲದ ಕಾರಣ ತನ್ನ ಮನೆ ಖರ್ಚು, ಬ್ಯಾಂಕ್ ಲೋನ್ ಕಟ್ಟಲು ಸಾಧ್ಯವಾಗದೆ ಬೇರೆ ವಿದಿಯಿಲ್ಲದೆ ಕಳ್ಳತನ ಮಾಡಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ. ಆರೋಪಿಯಿಂದ 30.120 ಗ್ರಾಂ ಬಂಗಾರ ಮತ್ತು ಪ್ರಕರಣಕ್ಕೆ ಉಪಯೋಗಿಸಿದ ಡಿಸ್ಕವರಿ ಬೈಕ್ ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಆರೋಪಿ ಪತ್ತೆ ಕಾರ್ಯದಲ್ಲಿ ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಅರುಣ್ ನಾಗೇಗೌಡ ಮತ್ತು ಪೊಲೀಸ್ ನಿರೀಕ್ಷಕರಾದ ರವಿ ಬಿ…

Read More

ಪಿಎಸ್ ಐ ಹುದ್ದೆ ಆಕಾಂಕ್ಷಿಗಳಿಗೆ ಸಿಹಿಸುದ್ದಿ ಸಿಕ್ಕಿದ್ದು, 15 ದಿನದಲ್ಲಿ ಪಿಎಸ್ಐ ಹುದ್ದೆಗೆ ಆಯ್ಕೆಯಾದ 545 ಮಂದಿಗೆ ನೇಮಕಾತಿ ಆದೇಶ ನೀಡಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಸರ್ಕಾರದಲ್ಲಿ 545 ಪಿಎಸ್ಐ ನೇಮಕಾತಿಯಲ್ಲಿ ಹಗರಣವಾಗಿತ್ತು. ಈಗ ಆದೇಶ ನೀಡಿದ 545 ಮಂದಿ ತರಬೇತಿಯಲ್ಲಿದ್ದಾರೆ. 402 ಮಂದಿಗೆ ಮೆಡಿಕಲ್ ಟೆಸ್ಟ್ ನಡೆಯುತ್ತಿದ್ದು, 15 ದಿನದಲ್ಲಿ ನೇಮಕಾತಿ ಆದೇಶ ನೀಡಲಾಗುವುದು ಎಂದು ತಿಳಿಸಿದ್ದಾರೆ. . ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ನಾಗಮೋಹನದಾಸ್ ಸಮಿತಿ ವರದಿ ಬಂದಿದ್ದು, ಆಗಸ್ಟ್ 19 ರಂದು ನಡೆಯಲಿರುವ ವಿಶೇಷ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

Read More

ಉಳ್ಳಾಲ: ತೊಕ್ಕೊಟ್ಟಿನಲ್ಲಿ ಶನಿವಾರ ರಾತ್ರಿ ನಡೆದಿದ್ದ ಮೊಸರು ಕುಡಿಕೆ ಉತ್ಸವದ ಶೋಭಾಯಾತ್ರೆಯಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಮಹಿಳಾ ಪೊಲೀಸ್ ಸಿಬ್ಬಂದಿಗೆ ಅಶ್ಲೀಲ ಕೈ ಸನ್ನೆ ಮಾಡಿ, ಕಿರುಕುಳ ನೀಡಿದ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಅಸೈಗೋಳಿ ನಿವಾಸಿ ದೀಪಕ್ ಮತ್ತು ತೊಕ್ಕೊಟ್ಟು ನಿವಾಸಿ ಕಿರಣ್ ಬಂಧಿತ ಆರೋಪಿಗಳು. ತೊಕ್ಕೊಟ್ಟುವಿನ ಜೈ ವೀರ ಮಾರುತಿ ವ್ಯಾಯಾಮ ಶಾಲೆಯ ವತಿಯಿಂದ ನಡೆದ ಮೊಸರು ಕುಡಿಕೆ ಉತ್ಸವದ ಶೋಭಾಯಾತ್ರೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದ ಯುವಕರ ತಂಡವೊಂದು ಶನಿವಾರ ರಾತ್ರಿ 11.50ರ ವೇಳೆಗೆ ತೊಕ್ಕೊಟ್ಟು ಒಳಪೇಟೆ ಬಳಿ ಮೆರವಣಿಗೆ ಮುಂದೆ ಹೋಗಲು ಅವಕಾಶ ನೀಡದೆ ಜೋರಾಗಿ ಬ್ಯಾಂಡ್ ಬಾರಿಸುತ್ತಾ ಸಾರ್ವಜನಿಕರಿಗೆ ತೊಂದರೆ ನೀಡುತ್ತಿತ್ತು ಎನ್ನಲಾಗಿದೆ. ಈ ವೇಳೆ ಉಳ್ಳಾಲ ಠಾಣೆಯ ಮಹಿಳಾ ಸಿಬ್ಬಂದಿ ಪೂರ್ಣಿಮಾ ಮತ್ತು ಲಕ್ಷ್ಮೀ ಎಂಬವರು ಯುವಕರಲ್ಲಿ ಮುಂದಕ್ಕೆ‌ ಹೋಗುವಂತೆ ಸೂಚನೆ ನೀಡಿದ್ದಾರೆ. ಈ ವೇಳೆ ಆರೋಪಿ ದೀಪಕ್ ಎಂಬಾತ ಮುಂದಕ್ಕೆ ಹೋಗದೆ…

Read More

ಪುತ್ತೂರು: ಕಳ್ಳತನ ಪ್ರಕರಣದಲ್ಲಿ ಆರೋಪಿಯಾಗಿದ್ದು ನ್ಯಾಯಾಲಯಕ್ಕೆ ಹಾಜರಾಗದೇ, ವಾರೆಂಟ್ ಜಾರಿಯಾಗಿದ್ದ ಆರೋಪಿಯೋರ್ವನನ್ನು ಬೆಳ್ಳಾರೆ ಠಾಣಾ ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉದ್ದೇಶ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಆ.17ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Read More

ಮಂಗಳೂರು: ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ಪ್ರತ್ಯೇಕ ಪ್ರಕರಣ ಗಳಲ್ಲಿ ಮಾದಕ ವಸ್ತುವನ್ನು ಸೇವನೆ ಆರೋಪದಲ್ಲಿ ಐದು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬೊಂಡಂತಿಲ ಗ್ರಾಮದ ಬಿತ್ತುಪಾದೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತುವನ್ನು ಸೇವನೆ ಆರೋಪದಲ್ಲಿ ಅಡ್ಯಾರ್ ಪದವಿನ ರಕ್ಷಿತ್ (32 ) ಮತ್ತು ಮುಹಮ್ಮದ್ ಸಫ್ವಾನ್ (21 )ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ನೀರುಮಾರ್ಗ ಗ್ರಾಮದ ಮಾಣೂರಿನ ಕೊಳ್ಚಾರ್ ರೋಡ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತುವನ್ನು ಸೇವನೆ ಮಾಡಿದ ಆರೋಪದಲ್ಲಿ ಅಡ್ಯಾರ್‌ನ ಹಿತೇಶ್ (23 ) ಮತ್ತು ಕವೀಶ್ ( 29) ಇನ್ನೊಂದು ಪ್ರಕರಣದಲ್ಲಿ ನೀರುಮಾರ್ಗ ಜಂಕ್ಷನ್ ಬಳಿ ಅಡ್ಯಾರ್ ಪದವಿನ ಮುಹಮ್ಮದ್ ಇರ್ಷಾದ್ (23) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಆ.15ರಂದು ನಡೆಸಿದ ಕಾರ್ಯಾಚರಣೆಯಲ್ಲಿ ಪಂಪ್‌ವೆಲ್ ಫ್ಲೈ ಓವರ್ ಬ್ರಿಡ್ಜ್ ಕೆಳಗೆ ನಿಷೇದಿತ ಮಾದಕ ವಸ್ತುಗಳನ್ನು ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಆರೋಪದಲ್ಲಿ ಹೃತಿಕ್( 21) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ವಿರುದ್ದ ಪೊಲೀಸರು…

Read More

ಮಂಗಳೂರು, ಆಗಸ್ಟ್ 8, 2025: ಶೈಕ್ಷಣಿಕ ಸಹಯೋಗ ಮತ್ತು ಅಂತರಶಿಸ್ತೀಯ ಸಂಶೋಧನೆಯನ್ನು ಮುನ್ನಡೆಸುವ ದಿಶೆಯಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟುಕೊಂಡು, ಸೈಂಟ್ ಅಲೋಶಿಯಸ್ ಘೋಷಿತ ವಿಶ್ವವಿದ್ಯಾಲಯ, ಮಂಗಳೂರು ಮತ್ತು ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು, ಮಂಗಳೂರು ಇವರು ಆಗಸ್ಟ್ 8, 2025 ರಂದು ಒಪ್ಪಂದಕ್ಕೆ (MoU) ಅಧಿಕೃತವಾಗಿ ಸಹಿ ಹಾಕಿವೆ. ಈ ಒಪ್ಪಂದಕ್ಕೆ ಫಾದರ್ ಮುಲ್ಲರ್ ಸಂಸ್ಥೆಗಳ ನಿರ್ದೇಶಕ ರೆ। ಫಾ। ಫಾವೊಸ್ತಿನ್ ಲುಕಾಸ್ ಲೋಬೊ ಮತ್ತು ಸೈಂಟ್ ಅಲೋಶಿಯಸ್ ಘೋಷಿತ ವಿಶ್ವವಿದ್ಯಾಲಯದ ಎಐಎಮ್ಐಟಿ ಕೇಂದ್ರದ ನಿರ್ದೇಶಕ ಡಾ. (ಫಾ।) ಕಿರಣ್ ಕೋತಾ ಎಸ್.ಜೆ. ಅವರು ಸಹಿ ಹಾಕಿದ್ದಾರೆ. ಹೊಸತನವನ್ನು ಉತ್ತೇಜಿಸುವುದು, ಸಹಯೋಗಿ ಸಂಶೋಧನೆಯನ್ನು ಉತ್ತೇಜಿಸುವುದು ಮತ್ತು ವಿವಿಧ ಶಿಸ್ತುಗಳಲ್ಲಿ ಶೈಕ್ಷಣಿಕ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸುವುದು ಎಂಬ ಎರಡೂ ಸಂಸ್ಥೆಗಳ ಸಾಮಾನ್ಯ ದೃಷ್ಟಿಕೋನವನ್ನು ಈ ಪಾಲುದಾರಿಕೆ ಪ್ರತಿಬಿಂಬಿಸುತ್ತದೆ. ಈ ಒಪ್ಪಂದದ ಸಂಘಟನೆಯನ್ನು ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಸಂಶೋಧನಾ ಮುಖ್ಯಸ್ಥ ಡಾ. ರಮೇಶ್ ಭಟ್ ಮತ್ತು ಸೈಂಟ್ ಅಲೋಶಿಯಸ್ ಘೋಷಿತ ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ಶಾಲೆಯ ಡೀನ್…

Read More

ಮುಂಬೈ: ಇಲ್ಲಿನ 71 ವರ್ಷದ ಮಹಿಳೆಯೊಬ್ಬರು ಆನ್‌ಲೈನ್‌ನಲ್ಲಿ ಒಂದು ಲೀಟರ್ ಹಾಲನ್ನು ಆರ್ಡರ್ ಮಾಡಲು ಪ್ರಯತ್ನಿಸುವಾಗ ತಮ್ಮ ಬ್ಯಾಂಕ್ ಖಾತೆಗಳಿಂದ 18.5 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ವಡಾಲಾ ನಿವಾಸಿಯಾಗಿರುವ ಮಹಿಳೆ ಈ ತಿಂಗಳ ಆರಂಭದಲ್ಲಿ ಆನ್‌ಲೈನ್ ವಿತರಣಾ ಅಪ್ಲಿಕೇಶನ್‌ನಿಂದ ಹಾಲನ್ನು ಆರ್ಡರ್ ಮಾಡಲು ಪ್ರಯತ್ನಿಸಿದಾಗ ಎರಡು ದಿನಗಳಲ್ಲಿ ಅವರ ಬ್ಯಾಂಕ್‌ ಖಾತೆಯಲ್ಲಿದ್ದ ಹಣವನ್ನು ದೋಚಿ ವಂಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆಗಸ್ಟ್ 4 ರಂದು, ಹಾಲು ಕಂಪನಿಯ ಕಾರ್ಯನಿರ್ವಾಹಕ ದೀಪಕ್ ಎಂದು ಗುರುತಿಸಿಕೊಂಡ ವ್ಯಕ್ತಿಯಿಂದ ಮಹಿಳೆಗೆ ಕರೆ ಬಂದಿದ್ದು, ಹಾಲನ್ನು ಆರ್ಡರ್ ಮಾಡಲು ವಿವರಗಳನ್ನು ನೀಡುವಂತೆ ಅವರ ಮೊಬೈಲ್‌ಗೆ ಲಿಂಕ್ ಕಳುಹಿಸಿದ್ದಾರೆ. ಕರೆಯನ್ನು ಕಡಿತಗೊಳಿಸದೆ ಲಿಂಕ್ ಅನ್ನು ಕ್ಲಿಕ್ ಮಾಡುವಂತೆ ಮತ್ತು ಮುಂದಿನ ಸೂಚನೆಗಳನ್ನು ಅನುಸರಿಸಲು ಮಹಿಳೆಗೆ ಸೂಚಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಕರೆ ಒಂದು ಗಂಟೆಗೂ ಹೆಚ್ಚು ಕಾಲ ಮುಂದುವರಿದಿದ್ದರಿಂದ, ಬೇಸರಗೊಂಡ ಮಹಿಳೆ ಫೋನ್ ಅನ್ನು ಸ್ಥಗಿತಗೊಳಿಸಿದ್ದಾರೆ. ಮರುದಿನ, ಅದೇ ಆರೋಪಿಯಿಂದ ಮಹಿಳೆಗೆ ಫೋನ್…

Read More

ಮೂಡುಬಿದಿರೆ: ಖಾಸಗಿ ಬಸ್ಸಿನಲ್ಲಿ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಯನ್ನು ಕುಕ್ಕಡೇಲು, ಕರಿಯನಂಗಡಿ, ಬೆಳವಾಯಿ ಗ್ರಾಮ ಮತ್ತು ಅಂಚೆ ಮೂಡಬಿದರೆ ರೆಹ್ಮಾನ( 60) ಎಂದು ಗುರುತಿಸಲಾಗಿದೆ. ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿರುವ ಓರ್ವ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುತ್ತದೆ. ವಿಡಿಯೋದಲ್ಲಿ ಯುವತಿಯ ಮುಖ ಚಹರೆ ಸರಿಯಾಗಿ ಕಂಡು ಬರದ ಕಾರಣ ಗುರುತಿಸಲು ಅಸಾಧ್ಯವಾಗಿರುತ್ತದೆ. ಈ ಬಗ್ಗೆ ಆರೋಪಿಯನ್ನು ಠಾಣೆಗೆ ಕರೆಯಿಸಿ ವಿಚಾರಿಸಲಾಗಿದ್ದು ಆತನಿಗೂ ಸಹ ಸಂತ್ರಸ್ತ ಯುವತಿಯ ಬಗ್ಗೆ ಮಾಹಿತಿ ಇರುವುದಿಲ್ಲ. ಆದುದರಿಂದ ಸಂತ್ರಸ್ತ ಯುವತಿ ಅಥವಾ ಘಟನೆಯ ಕುರಿತು ವಿಡಿಯೋ ಚಿತ್ರೀಕರಣ ಮಾಡಿರುವ ವ್ಯಕ್ತಿಗಳು ನೇರವಾಗಿ ಪೊಲೀಸ್ ಠಾಣೆಗೆ ಅಗಮಿಸಿ ದೂರು ನೀಡಬಹುದಾಗಿದೆ. ದೂರನ್ನು ನೀಡಬಹುದಾಗಿದೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮೂಡಬಿದಿರೆ ಪೊಲೀಸ್ ನೀರಿಕ್ಷಕ ಸಂದೇಶ್ ಪಿ.ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಮಂಗಳೂರು : ನಗರದಲ್ಲಿ  ವ್ಯಕ್ತಿಯೊಬ್ಬರ ಬಳಿ ಕಸ್ಟಮ್ ಅಧಿಕಾರಿಗಳು ಎಂದು‌ ಹೇಳಿ ಅವರ ಹತ್ತಿರ ಇದ್ದ ಚಿನ್ನವನ್ನು ದರೋಡೆ ಮಾಡಿದ ಪ್ರಕರಣ ಸಂಭವಿಸಿದೆ. ಚಿನ್ನ ಕಳೆದುಕೊಂಡ ವ್ಯಕ್ತಿ ಶ್ರೀ ಹರ ಎಂದು ತಿಳಿದು ಬಂದಿದೆ. ದರೋಡೆಕೋರರು ಇನ್ನೋವಾ ಕಾರಿನಲ್ಲಿ ಬಂದು ದರೋಡೆ ಮಾಡಿ‌ ಹೋಗಿದ್ದಾರೆ ಎಂದು ಮಾಹಿತಿ ತಿಳಿಯಲಾಗಿದೆ. ಪ್ರಕರಣದ ಸಾರಾಂಶ : ಫಿರ್ಯಾದುದಾರರಾದ ಶ್ರೀ ಹರಿ, ವೃತ್ತಿ; ಜ್ಯುವೆಲ್ಲರಿ ಶಾಪ್, ಇವರನ್ನು ಯಾರೋ ಆರು ಜನ ಆಪಾದಿತರು ಫಿರ್ಯಾದುದಾರರ ಬಳಿ ಇರುವ 350 ಗ್ರಾಂ ತೂಕದ ಬಂಗಾರದ ಗಟ್ಟಿಯನ್ನು ದರೋಡೆ ಮಾಡುವ ಉದ್ದೇಶದಿಂದ ದಿನಾಂಕ; 13-08-2025 ರಂದು ಬೆಳಿಗ್ಗೆ 07-00 ಗಂಟೆಯ ಸುಮಾರಿಗೆ ಮಂಗಳೂರು ಸೆಂಟ್ರಲ ರೇಲ್ವೆ ನಿಲ್ದಾಣದ ಹತ್ತಿರದ ಕೈರಾಲಿ ಹೊಟೆಲ್ ಬಳಿ ಆಟೋ ಕಾಯುತ್ತಿದ್ದ ಫಿರ್ಯಾದುದಾರರಿಗೆ, ತಾವು ಕಸ್ಟಮ್ ಅಧಿಕಾರಿಗಳು, ನಿಮ್ಮನ್ನು ಪರಿಶೀಲನೆ ಮಾಡಬೇಕು ತಮ್ಮೊಂದಿಗೆ ಬನ್ನಿ ಅಂತಾ ಗದರಿಸಿ, ಫಿರ್ಯಾದುದಾರರನ್ನು ಹಿಡಿದುಕೊಂಡು ಬಲವಂತವಾಗಿ 24ಬಿಹೆಚ್8102ಜಿ ಎಂಬ ನಂಬರ್ ಬರೆದುಕೊಂಡಿರುವ ಬಿಳೆ ಬಣ್ಣದ ಇನ್ನೋವಾ ಕಾರಿನ ಮೇಲೆ…

Read More