Author: main-admin

ಕಾಸರಗೋಡು: ಅತೀ ವೇಗದಿಂದಾಗಿ ಖಾಸಗಿ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಪಲ್ಟಿ ಹೊಡೆದ ಘಟನೆ ಕಾಸರಗೋಡು ನಗರ ಹೊರವಲಯದ ವಿದ್ಯಾನಗರದಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ. ಕಣ್ಣೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಖಾಸಗಿ ಬಸ್ ಮುಂದಿನಿಂದ ಸಾಗುತ್ತಿದ್ದ ಇನ್ನೊಂದು ಬಸ್ಸನ್ನು ಓವರ್ ಟೆಕ್ ಮಾಡುವ ಭರದಲ್ಲಿ ನಿಯಂತ್ರಣ ತಪ್ಪಿ ರಸ್ತೆ ಮಧ್ಯೆ ಮಗುಚಿ ಬಿದ್ದಿದೆ. ಬಸ್ಸಿನಲ್ಲಿ ಬೆರಳಣಿಕೆಯಷ್ಟೇ ಪ್ರಯಾಣಿಕರಿದ್ದ ಕಾರಣ ಭಾರೀ ಅನಾಹುತ ತಪ್ಪಿದೆ. ಇನ್ನು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ನೀಲೇಶ್ವರದ ರೇಶ್ಮಾ, ಪವಿತ್ರ , ಕಲ್ಯೊಟ್ ನ ಕಮಲಾಕ್ಷ, ಪ್ರಭಾಕರ ಮ್ ಪೆರಿಯದ ಗೋಕುಲ್ ರಾಜ್, ಸರಿನಾ, ಮೇಘ, ಕೃಷ್ಣ ಗಾಯಗೊಂಡಿದ್ದು, ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಿಂದಾಗಿ ರಸ್ತೆಯಲ್ಲಿ ಸಂಚಾರ ಕೆಲ ಸಮಯ ಅಸ್ತವ್ಯಸ್ಥ ಗೊಂಡಿತ್ತು. ಬಸ್ಸಿನಲ್ಲಿ ಸಿಲುಕಿದ್ದವರನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು, ನಾಗರಿಕರು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಖಾಸಗಿ ಬಸ್ಸುಗಳ ಅತೀವೇಗಕ್ಕೆ ಕಡಿವಾಣ ಹಾಕೇಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಬಸ್ ಚಾಲಕನ ಅತೀ ವೇಗ ಹಾಗೂ ನಿರ್ಲಕ್ಷದ ಚಾಲನೆ ಅಪಘಾತಕ್ಕೆ ಕಾರಣ…

Read More

ಮಣಿಪಾಲ: ಸ್ಕೂಟರ್‌ ಹಾಗೂ ಬೈಕ್‌ಗೆ ಕಾರು ಡಿಕ್ಕಿ ಹೊಡೆದು ಕಾರು ಚಾಲಕ ಪರಾರಿಯಾದ ಘಟನೆ ನಡೆದಿದೆ. ಮಣಿಪಾಲದ ಅಲ್ಕಾ ಹಾಗೂ ಸಹಸವಾರೆ ನಯನಾ ಅವರು ಸ್ಕೂಟರ್‌ನಲ್ಲಿ ಬಿಗ್‌ ಬಾಸ್‌ ಹೊಟೇಲ್‌ ಸಮೀಪ ಇರುವ ಯು ಟರ್ನ್ ತಲುಪುತ್ತಿದ್ದಂತೆ ಮಣಿಪಾಲ ಕಡೆಯಿಂದ ಪರ್ಕಳ ಕಡೆಗೆ ಅತೀ ವೇಗದಿಂದ ಆಗಮಿಸಿದ ಕಾರು ಡಿಕ್ಕಿ ಹೊಡೆದಿದೆ. ಕಾರು ಚಾಲಕ ನಿಲ್ಲಿಸದೆ ಪರಾರಿಯಾಗಿದ್ದಾನೆ. ಈ ವೇಳೆ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್‌ ಸವಾರ ತ್ವನೀರ್‌ ಕೌರ್‌ಗೂ ಡಿಕ್ಕಿ ಹೊಡೆದಿದ್ದಾನೆ. ಮೂರು ಮಂದಿ ಗಾಯಾಳುಗಳನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮಲ್ಪೆ: ಮಲ್ಪೆ ಬೀಚ್‌ಗೆ ಪ್ರವಾಸಕ್ಕೆಂದು ಬಂದಿದ್ದ ಮಂಡ್ಯ ಮೂಲದ ಯುವಕನೋರ್ವ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಸಂಭವಿಸಿದೆ. ಮೃತರನ್ನು ಮಂಡ್ಯ ಮೂಲದ ನಾಗೇಂದ್ರ ಪ್ರಸಾದ್‌ ಜಿ. ಆರ್‌. (21) ಎಂದು ಗುರುತಿಸಲಾಗಿದೆ. ಒಟ್ಟು ಐವರು ಸ್ನೇಹಿತರು ರವಿವಾರ ಮಲ್ಪೆ ಬೀಚ್‌ಗೆ ಬಂದಿದ್ದು, ಇವರು ನೀರಿನಲ್ಲಿ ಆಡುತ್ತಿದ್ದಾಗ ನಾಗೇಂದ್ರ ಅವರು ಅಲೆಗಳ ಅಬ್ಬರಕ್ಕೆ ಸಿಲುಕಿ ನೀರಿನಲ್ಲಿ ಕೊಚ್ಚಿಕೊಂಡು ಹೋದರು. ತತ್‌ಕ್ಷಣ ಧಾವಿಸಿ ಬಂದ ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಕಾರ್ಯಾಚರಣೆ ನಡೆಸಿ ನಾಗೇಂದ್ರನನ್ನು ಮೇಲಕ್ಕೆತ್ತಿ ಮಣಿಪಾಲ ಆಸ್ಪತ್ರೆಗೆ ಸಾಗಿಸಿದರು. ಆದರೆ ತೀವ್ರ ಅಸ್ವಸ್ಥಗೊಂಡಿದ್ದ ಅವರು ದಾರಿ ಮಧ್ಯೆಯೇ ಕೊನೆಯುಸಿರೆಳೆದರು. ಅವರು ಬೆಂಗಳೂರಿನ ವಿಧಾನಸೌಧದಲ್ಲಿ ಲಿಫ್ಟ್‌ ಅಪರೇಟರ್‌ ಅಗಿದ್ದರು ಎನ್ನಲಾಗಿದೆ. ಈ ಸಂಬಂಧ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Read More

ಮಂಗಳೂರು: ಹೆಬ್ಬಾವುವೊಂದರ ದೇಹದಲ್ಲಿ ಬರೋಬ್ಬರಿ 11 ಏರ್‌ ಬುಲ್ಲೆಟ್‌ ಪತ್ತೆಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಇತ್ತೀಚಿನ ದಿನಗಳಲ್ಲಿ ಅನೇಕ ಕಡೆಗಳಲ್ಲಿ ಹೆಬ್ಬಾವು ಸಂಚಾರವಿದ್ದು, ಮಂಗಳೂರಿನ ಆನೆಗುಂಡಿ ಬಳಿ ಹೆಬ್ಟಾವೊಂದು ಪರ್ಶಿಯನ್‌ ಬೆಕ್ಕನ್ನು ತಿಂದು ನುಂಗಲಾರದೆ ಸಂಕಷ್ಟಪಡುತ್ತಿರುವುದನ್ನು ಗಮನಿಸಿ ಸ್ಥಳೀಯರು ಉರಗತಜ್ಞರಿಗೆ ಕರೆ ಮಾಡಿದರು. ಆಗ ಹೆಬ್ಬಾವಿನ ದೇಹ ತಪಾಸಣೆಗೆ ಒಳಪಡಿಸಿದಾಗ ದೇಹದಲ್ಲಿ 11 ಬುಲ್ಲೆಟ್‌ ಪತ್ತೆಯಾಯಿತು. ಹೆಬ್ಬಾವು ಪರ್ಶಿಯನ್‌ ಕ್ಯಾಟ್‌ ತಿನ್ನುವಾಗ ಅದರ ಕತ್ತಿನ ಕೆಳ ಭಾಗದಲ್ಲಿ ಬಲೆ ಸಿಲುಕಿ ನುಂಗಲಾರದೆ ಕಷ್ಟಪಡುತ್ತಿತ್ತು. ಉರಗತಜ್ಞ ಭುವನ್‌ ದೇವಾಡಿಗ ಸ್ಥಳಕ್ಕೆ ಆಗಮಿಸಿ, ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದರು. ಬಳಿಕ ಬಲೆ ತೆರವು ಮಾಡಿ ಹೆಬ್ಬಾವು ರಕ್ಷಿಸಲಾಯಿತು. ಪಶುವೈದ್ಯ ಡಾ| ಯಶಸ್ವಿ ಅವರಲ್ಲಿ ಹೆಬ್ಬಾವಿಗೆ ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗೆಂದು ಎಕ್ಸ್‌ರೇ ಮಾಡಿಸಿದಾಗ ದೇಹದಲ್ಲಿ 11 ಏರ್‌ ಬುಲ್ಲೆಟ್‌ ಪತ್ತೆಯಾಯಿತು. ಸುಮಾರು ವರ್ಷಗಳ ಹಿಂದೆಯೇ ಈ ಹೆಬ್ಟಾವಿಗೆ ಏರ್‌ಗನ್‌ನಿಂದ ಶೂಟ್‌ ಮಾಡಿರಬಹುದು. ಇದೇ ಕಾರಣಕ್ಕೆ ಕೆಲವೊಂದು ಬುಲೆಟ್‌ಗಳ ಮೇಲೆ ಚರ್ಮ ಬೆಳೆದಿತ್ತು. ಎರಡು ಬುಲ್ಲೆಟ್‌ಗಳನ್ನು…

Read More

ಕಾರ್ಕಳ : ಮಿಯ್ಯಾರು ಕಂಬಳ ಕ್ರೀಡಾಂಗಣದಲ್ಲಿ ಕೇರಳ ಮೂಲದ ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ. ವಿಜೇಶ್ ಯಾನೆ ಮೋಹನ್ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಏ. 19 ರಾತ್ರಿಯಿಂದ ಏ.20ರ ಬೆಳಗಿನ ಮಧ್ಯಾವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗುತ್ತಿದೆ. ವಿಜೇಶ್ ಮಾಳದಲ್ಲಿ ವಾಸಿಸುತ್ತಿದ್ದು ಶೇಂದಿ ವ್ಯಾಪಾರ ಮಾಡುತ್ತಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕಾರ್ಕಳ ನಗರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ

Read More

ಪುತ್ತೂರು  : ಮಾಜಿ ಐಪಿಎಸ್ ಅಧಿಕಾರಿ ತಮಿಳು ನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ಎಪ್ರಿಲ್ 23 ರಂದು ಪುತ್ತೂರಿನಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಪರವಾಗಿ ರೋಡ್ ಶೋ ನಡೆಯಲಿದೆ ಎಪ್ರಿಲ್ 23 ರಂದು ಬೆಳಿಗ್ಗೆ 8.30ಕ್ಕೆ ಅಣ್ಣಾಮಲೈ ಅವರು ಸುಳ್ಯ ನಗರದಲ್ಲಿ ರೋಡ್ ಶೋ ನಡೆಸುವರು. 10.30ಕ್ಕೆ ಪುತ್ತೂರಿಗೆ ಬರಲಿದ್ದು, ದರ್ಬೆ ವೃತ್ತದಿಂದ ಬಸ್ ನಿಲ್ದಾಣದವರೆಗೆ ರೋಡ್ ಶೋ ನಡೆಸುವರು. ಬಳಿಕ ಬಂಟ್ವಾಳ ತಾಲ್ಲೂಕಿನ ಫರಂಗಿಪೇಟೆಯ ಕಾರ್ಯಕ್ರಮಕ್ಕೆ ತೆರಳುವರು. ಮಧ್ಯಾಹ್ನ 3 ಗಂಟೆಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಉಪ್ಪಿನಂಗಡಿಯಲ್ಲಿ ರೋಡ್‌ ಶೋ ನಡೆಯಲಿದೆ. ಸಂಜೆ 5.30ಕ್ಕೆ ವಿಟ್ಲದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ರೋಡ್ ಶೋ ನಡೆಯಲಿದೆ ಎಂದು ಅವರು ತಿಳಿಸಿದರು.

Read More

ಕಾರ್ಕಳ : ರಾತ್ರಿ ವೇಳೆ ಕಾರ್ಕಳ ತಾಲೂಕಿನ ಕೆದಿಂಜೆಯಲ್ಲಿ ವಿದ್ಯುತ್‌ ಶಾಕ್‌ನಿಂದ ಸೆಂಟ್ರಿಂಗ್‌ ಕೆಲಸ ಮಾಡುತ್ತಿದ್ದ ಹಾವೇರಿ ಮೂಲದ ಅನಂತೇಶ್ವರ (29) ಎಂಬವರು ಮೃತಪಟ್ಟ ಘಟನೆ ಸಂಭವಿಸಿದೆ. ರಾತ್ರಿ 9 ಗಂಟೆ ವೇಳೆಗೆ ರಾಡ್‌ ಕಟ್ಟಿಂಗ್‌ ಕೆಲಸ ಮಾಡುತ್ತಿರುವ ವೇಳೆ ವಿದ್ಯುತ್‌ ಶಾಕ್‌ ಹೊಡೆದಿದೆ. ಸ್ಥಳೀಯರು ಅವರನ್ನು ತತ್‌ಕ್ಷಣವೇ ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರೂ ಫ‌ಲಕಾರಿಯಾಗದೆ ಮೃತಪಟ್ಟಿದ್ದಾರೆ. ಶಾಕ್‌ಗೆ ಕಾರಣ ತಿಳಿದು ಬಂದಿಲ್ಲ. ಆದರೆ ಈ ವೇಳೆ ಪರಿಸರದಲ್ಲಿ ಮಳೆಯ ಜತೆ ಗುಡುಗು-ಮಿಂಚು ಕೂಡ ಬರುತ್ತಿತ್ತು ಎನ್ನಲಾಗಿದೆ.

Read More

ಉಡುಪಿ : ಕೆಲಸಕ್ಕೆ ಸೇರಲು ಬಂದ ಯುವತಿಯೊಬ್ಬಳು ನಾಪತ್ತೆಯಾದ ಘಟನೆ ಉಡುಪಿ ಜಿಲ್ಲೆಯ ಉದ್ಯಾವರ ಗ್ರಾಮದಲ್ಲಿ ನಡೆದಿದೆ. ಉದ್ಯಾವರ ಗ್ರಾಮದ ಪಿತ್ರೋಡಿಯ ಫ್ಯಾಕ್ಟರಿ ಒಂದರ ಕೆಲಸಕ್ಕೆ ಸೇರಲು ಬಂದು ಉದ್ಯಾವರದ ರೂಮಿನಲ್ಲಿ ಉಳಿದುಕೊಂಡಿದ್ದ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕು ಕಾಸರಕೋಡ ಮಲಬಾರ ಕೇರಿ ನಿವಾಸಿ ಪ್ರೇಮಾ (25) ಎಂಬ ಯುವತಿಯು ಏಪ್ರಿಲ್ 15 ರಂದು ರೂಮಿನಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ ಎತ್ತರ, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ, ಕೊಂಕಣಿ ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾಪು ಪೊಲೀಸ್ ಠಾಣೆ ದೂ.ಸಂಖ್ಯೆ: 0820-2551033, ಕಾಪು ವೃತ್ತ ನಿರೀಕ್ಷಕರ ಕಚೇರಿ ದೂ.ಸಂಖ್ಯೆ: 0820-2572333, ಪೊಲೀಸ್ ಉಪಾಧೀಕ್ಷಕರ ಕಚೇರಿ ದೂ.ಸಂಖ್ಯೆ: 08258-231333, ಪೊಲೀಸ್ ಅಧೀಕ್ಷಕರ ಕಚೇರಿ ದೂ.ಸಂಖ್ಯೆ: 0820-2534777 ಹಾಗೂ ಜಿಲ್ಲಾ ನಿಸ್ತಂತು ಕೊಠಡಿ ದೂ.ಸಂಖ್ಯೆ:0820-2526444 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕಾಪು ಪೊಲೀಸ್ ಠಾಣೆಯ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್, ಕಾಂಗ್ರೆಸ್ ನಾಯಕಿ ಕವಿತಾ ಸನಿಲ್ (Kavita Sanil) ಶನಿವಾರ ಬಂಟ್ವಾಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.ಬಳಿಕ ಮಾತನಾಡಿದ ಕವಿತಾ ಸನಿಲ್, ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ನಾನು ಪಕ್ಷ ಸೇರ್ಪಡೆಯಾಗಿದ್ದೇನೆ ಎಂದರು. ದೇಶಕ್ಕೆ ಮೋದಿ ನಾಯಕತ್ವ ಅಗತ್ಯವಿದೆ. ಅವರ ಕೈಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದು, ಇದಕ್ಕೂ ಮೊದಲು ನನ್ನ ರಾಜಕೀಯ ಗುರು ಬಿ. ಜನಾರ್ದನ ಪೂಜಾರಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದೇನೆ ಎಂದರು.

Read More

ಮೂಡುಬಿದಿರೆ: ಪ್ರತೀ ತಿಂಗಳು ಕಂತು ಕಟ್ಟಿ ಇಷ್ಟದ ವಸ್ತುವನ್ನು ಮನೆಗೆ ಕೊಂಡುಹೋಗುವ ಅದೃಷ್ಟದ “ಡ್ರೀಮ್ ಡೀಲ್” ಇದರ 2ನೇ ಆವೃತ್ತಿಯು ಎ.21 ರಿಂದ ಶುಭಾರಂಭಗೊಳ್ಳಲಿದೆ. ಇದರ ಉದ್ಘಾಟನೆಯನ್ನು ತುಳು ಚಿತ್ರರಂಗದ ನವರಸ ನಾಯಕ ಬೊಜರಾಜ್ ವಾಮಂಜೂರು, ಕಂಬಳ ಓಟಗಾರ ಶ್ರೀನಿವಾಸ ಗೌಡ, ಆಳ್ವಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಡಾ. ಮೋಹನ್ ಆಳ್ವ, ಯುವ ವಕೀಲರಾದ ಶ್ವೇತ ಜೈನ್ ಮೂಡಬಿದಿರೆ , ಅಬ್ದುಲ್ ಪುತ್ತಿಗೆ ನೆರವೇರಿಸಲಿದ್ದಾರೆ. ಈ ವಿಶೇಷ ಡ್ರೀಮ್ ಡೀಲ್‌ನಲ್ಲಿ 20 ತಿಂಗಳವರೆಗೆ ಪ್ರತಿ ತಿಂಗಳು 1000 ರೂ. ಪಾವತಿಸಿದ ನಂತರ ಉಳಿದ ಜನರು, ತಮ್ಮ ಉಳಿತಾಯದ ಮೌಲ್ಯಕ್ಕೆ ಸಮಾನವಾದ ಅಥವಾ ಉಳಿಸಿದ ಮೊತ್ತಕ್ಕಿಂತ ಹೆಚ್ಚಿನ ಮೌಲ್ಯದ ಬ್ರಾಂಡ್ ಮತ್ತು ಉತ್ತಮ ಗುಣಮಟ್ಟದ ವಸ್ತುಗಳನ್ನು ಆಯ್ಕೆ ಮಾಡಲು ಅವಕಾಶವನ್ನು ಹೊಂದಿರುತ್ತಾರೆ. ಈ ಡ್ರೀಮ್ ಡೀಲ್‌‌ನ ಮೊದಲ ಕಂತು ಮೇ.22 ರಂದು ಆರಂಭವಾಗಲಿದ್ದು, ಪ್ರತೀ ತಿಂಗಳು 10 ನೇ ತಾರೀಕಿಗೆ ಮುಂಚಿತವಾಗಿ ಕಂತನ್ನು ಪಾವತಿಸಿದರೆ ವಿಶೇಷ ಬಹುಮಾನ 25 ಗೋಲ್ಡ್ ರಿಂಗ್ ಪಡೆಯುವ…

Read More