ಪುತ್ತೂರು : ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮುಕ್ರಂಪಾಡಿ ಬಳಿ ಭಾನುವಾರ ಸಂಜೆ ಜೀಪ್ ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಜೀಪ್ ಚಾಲಕ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ದೇವಸ್ಯ ನಿವಾಸಿ ಮನೋಜ್ ಎಂದು ಗುರುತಿಸಲಾಗಿದೆ.ಅದೇ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಶ್ರೀಪ್ರಸಾದ್ ಪಾಣಾಜೆ ಮತ್ತು ಪುತ್ತೂರು ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಾರೂಕ್ ಪೆರ್ನೆ ಅವರು ತಕ್ಷಣವೇ ಗಾಯಗೊಂಡವರನ್ನು ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
Author: main-admin
ಪುತ್ತೂರು: ಫೇಸ್ ಬುಕ್ ನಲ್ಲಿ ಜೈನ ಧರ್ಮದ ಸ್ವಾಮೀಜಿಗೆ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಅವಹೇಳನ ಮಾಡಲಾಗಿದೆ ಎಂದು ಪುತ್ತೂರಿನ ಪಡ್ನೂರು ಗ್ರಾಮದ ನಿವಾಸಿ ಜೀವಂದರ್ ಜೈನ್ ಎಂಬವರು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದಿನಾಂಕ 29-06-2025 ರಂದು ಸಂಜೆ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ಅನ್ನು ನೋಡುತ್ತಿದ್ದಾಗ, “ಕರುನಾಡಿನ ಮಿನುಗುವ ನಕ್ಷತ್ರ” ಎಂಬ ಪೇಸ್ ಬುಕ್ ಪೇಜ್ ಹೊಂದಿರುವ ವ್ಯಕ್ತಿಯು, ಫೇಸ್ ಬುಕ್ ನಲ್ಲಿ ಪೋಸ್ಟ್ ಒಂದಕ್ಕೆ ಕಮೆಂಟ್ ಮಾಡುವ ವೇಳೆ, ಜೈನ ಧರ್ಮದ ಸ್ವಾಮೀಜಿಗೆ ಹಾಗೂ ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಗಳ ಗೌರವಕ್ಕೆ ದಕ್ಕೆ ಉಂಟು ಮಾಡುವ ರೀತಿಯಲ್ಲಿ ಹಾಗೂ ಸಾರ್ವಜನಿಕ ಶಾಂತಿ ನೆಮ್ಮಧಿಗೆ ಧಕ್ಕೆಯನ್ನುಂಟು ಮಾಡುವ ರೀತಿಯಲ್ಲಿ ಕಮೆಂಟ್ ಮಾಡಿರುವುದು ಕಂಡುಬಂದಿರುತ್ತದೆ. ಎಂದು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮಂಗಳೂರು: ನಗರದ ಕೊಡಿಯಾಲ್‌ಬೈಲಿನ ಜಿಲ್ಲಾ ಕಾರಾಗೃಹದಲ್ಲಿ ಇತ್ತೀಚೆಗೆ ಗಾಂಜಾ, ಖೈದಿಗಳ ನಡುವೆ ಹೊಡೆದಾಟ ಇತ್ಯಾದಿ ಪ್ರಕರಣಗಳು ನಡೆದಿದೆ. ಈ ಬೆನ್ನಲ್ಲೇ ಪೊಲೀಸ್ ತಪಾಸಣೆಯ ವೇಳೆ 1 ಕೀಪ್ಯಾಡ್ ಮೊಬೈಲ್ ಮತ್ತು 2 ಟಚ್ ಸ್ಕ್ರೀನ್ ಮೊಬೈಲ್ ಫೋನ್ ಹಾಗೂ ಎರಡು ಬಂಡಲ್ ಬೀಡಿಗಳು ಪತ್ತೆಯಾಗಿದೆ. ಜೈಲಿನಲ್ಲಿ ಇತ್ತೀಚೆಗೆ ನಡೆದ ಹಲ್ಲೆ ಪ್ರಕರಣದ ಬಳಿಕ ಕೇಂದ್ರ ಉಪ ವಿಭಾಗದ ಎಸಿಪಿ ಪ್ರತಾಪ್ ಸಿಂಗ್ ಥೋರಟ್ ಜೈಲಿನ ಸುರಕ್ಷತೆಯ ದೃಷ್ಟಿಯಿಂದ ಶೋಧ ಕಾರ್ಯ ಕೈಗೊಂಡಿದ್ದರು. ಈ ವೇಳೆ ಇವೆಲ್ಲ ಪತ್ತೆಯಾಗಿದೆ. ಮಹಜರು ನಡೆಸಿ ನಿಷೇಧಿತ ಸೊತ್ತುಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸುರತ್ಕಲ್ : ಬಂಟರ ಸಂಘ (ರಿ) ಸುರತ್ಕಲ್ ಇದರ 2025-27 ನೇ ಸಾಲಿನ ನಿರ್ದೇಶಕರ ಸಭೆ ಸುರತ್ಕಲ್ ಬಂಟರ ಭವನದಲ್ಲಿ ನಡೆಯಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ ಆಯ್ಕೆಗೊಂಡಿದ್ದಾರೆ.ಉಪಾಧ್ಯಕ್ಷರಾಗಿ ಪ್ರವೀಣ್ ಪಿ ಶೆಟ್ಟಿ , ಪ್ರಧಾನ ಕಾರ್ಯದರ್ಶಿಯಾಗಿ ಲೀಲಾಧರ್ ಶೆಟ್ಟಿ ಕಟ್ಲ , ಕೋಶಾಧಿಕಾರಿಯಾಗಿ ರತ್ನಾಕರ ಶೆಟ್ಟಿ ಸುರತ್ಕಲ್,ಸಹಕಾರ್ಯದರ್ಶಿಯಾಗಿ ಮೀರಾ ವಾಣಿ ಶೆಟ್ಟಿ ಕಾಟಿಪಳ್ಳ, ಸಂಘಟನಾ ಕಾರ್ಯದರ್ಶಿಯಾಗಿ ಪುಷ್ಪರಾಜ್ ಶೆಟ್ಟಿ ಕುಡುಂಬೂರುಸಾಂಸ್ಕೃತಿಕ ಕಾರ್ಯದರ್ಶಿಯಾಗಿ ದೇವೇಂದ್ರ ಕೆ ಶೆಟ್ಟಿ ಕ್ರೀಡಾ ಕಾರ್ಯದರ್ಶಿಯಾಗಿ ಪುಷ್ಪರಾಜ್ ಶೆಟ್ಟಿ ಮದ್ಯ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿಶ್ರೀಕಾಂತ್ ಶೆಟ್ಟಿ ಕಾಟಿಪಳ್ಳ, ಸುಜೀರ್ ಶೆಟ್ಟಿ ಸೂರಿಂಜೆ, ಗಿರೀಶ್ ಎಂ ಶೆಟ್ಟಿ ಪೆರ್ಮುದೆ, ಪ್ರಮೋದ್ ಶೆಟ್ಟಿ ಹೊಸಬೆಟ್ಟು, ಸುಕೇಶ್ ಶೆಟ್ಟಿ ಚೇಳಾರ್, ರಾಮಚಂದ್ರ ಶೆಟ್ಟಿ ಕುಳಾಯಿ, ದಾಮೋದರ ಶೆಟ್ಟಿ ತೋಕೂರು, ಪದ್ಮನಾಭ ಶೆಟ್ಟಿ ಕುತ್ತೆತ್ತೂರು, ಸವಿತಾ ಭವಾನಿ ಶಂಕರ್ ಶೆಟ್ಟಿ ಬಾಳ, ಜ್ಯೋತಿ ಜೆ ಶೆಟ್ಟಿ ಸುರತ್ಕಲ್ ಆಯ್ಕೆಯಾದರು. ಚುನಾವಣಾಧಿಕಾರಿಗಳಾಗಿ…
ಉಳ್ಳಾಲ: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದು, ಸೋಮೇಶ್ವರ ಸಮುದ್ರ ತೀರದಲ್ಲಿ ಕಾರಿನಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ ಕುರಿತಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಅಡಿ ಪ್ರಕರಣ ದಾಖಲಾಗಿದೆ. ಬಂಧಿತ ಆರೋಪಿಯ ಅಡ್ಯಾರ್ ವಳಚ್ಚಿಲ್ ನಿವಾಸಿ ಕೆಲ್ವಿನ್ (24) ಎಂದು ಗುರುತಿಸಲಾಗಿದೆ. ಆರೋಪಿ ಕೆಲ್ವಿನ್ ಅಪ್ರಾಪ್ತೆಯೋರ್ವಳನ್ನ ಇನ್ಸಾಗ್ರಾಮ್ ನಲ್ಲಿ ಪರಿಚಯ ಮಾಡಿಕೊಂಡಿದ್ದ. ಚಾಟಿಂಗಲ್ಲೇ ಆಕೆಯನ್ನ ಪ್ರೀತಿಸೋದಾಗಿ ನಂಬಿಸಿದ್ದ ಫೋನ್ ಕರೆ ಮಾಡಿ ಕಳೆದ ಗುರುವಾರ ಆರೋಪಿ ಅಪ್ರಾಪ್ತಯನ್ನ ಆಕೆಯ ಮನೆ ಬಳಿಯೇ ಭೇಟಿ ಮಾಡಿದ್ದು, ಕೆಲ್ವಿನ್ ಉಳ್ಳಾಲದ ಮನೆಗೆ ಕಾರಿನಲ್ಲಿ ಕರೆದೊಯ್ದಿದ್ದ. ಬಳಿಕ ಆಕೆಯನ್ನು ಕುತ್ತಾರು ಸಮೀಪದ ಲಾಡ್ಜ್‌ಗೆ ಕರೆದುಕೊಂಡು ಹೋಗಿ ರೂಮ್ ಕೇಳಿದ್ದಾನೆ. ಆದರೆ, ಬಾಲಕಿಯಾಗಿರುವ ಕಾರಣ ಲಾಡ್ಜ್ ಸಿಬ್ಬಂದಿ ರೂಮ್ ಕೊಟ್ಟಿರಲಿಲ್ಲ. ಸೋಮೇಶ್ವರ ಸಮುದ್ರ ತೀರಕ್ಕೆ ಕರೆದೊಯ್ದು ಕಾರೊಳಗೆ ಅತ್ಯಾಚಾರ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಆಕೆಯನ್ನು ಮನೆಯವರೆಗೂ ಕಾರಿನಲ್ಲಿ ಬಿಟ್ಟುಹೋಗಿದ್ದಾನೆ. ಬೆಳಿಗ್ಗೆ ಮತ್ತು ಸಂಜೆ ಕಾರಿನಲ್ಲಿ ಬಾಲಕಿಯನ್ನು ಕರೆದೊಯ್ಯುವುದನ್ನು ಮನೆ ಸಮೀಪದವರು ಗಮನಿಸಿದ್ದರು.…
ರಾಜ್ಯದಲ್ಲಿ ಮತ್ತೊಂದು ಎಟಿಎಂ ಮಷೀನ್ ದರೋಡೆಗೆ ಯತ್ನ ನಡೆದಿದ್ದು ಆದರೆ ಎಟಿಎಂ ದರೋಡೆ ಮಾಡಲು ವಿಫಲರಾದ ಕಳ್ಳರು ಸ್ಥಳದಿಂದ ಪರಾರಿಯಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಿಳಿಚೋಡು ಎಂಬ ಗ್ರಾಮದಲ್ಲಿ ನಡೆದಿದೆ. ಹೌದು ಕೆನರಾ ಬ್ಯಾಂಕ್ ಎಟಿಎಂ ಕಳ್ಳತನಕ್ಕೆ ವಿಫಲ ಯತ್ನ ನಡೆದಿರುವ ಘಟನೆ ಬಿಳಿಚೋಡು ಗ್ರಾಮದಲ್ಲಿ ತಡರಾತ್ರಿ ನಡೆದಿದೆ. ಕಬ್ಬಿಣದ ಸರಳು ಬಳಸಿಕೊಂಡು ಕದೀಮರು ಎಟಿಎಂ ಮಷೀನ್ ಒಡೆಯಲು ಯತ್ನಿಸಿದ್ದಾರೆ. ಇದು ಸಾಧ್ಯವಾಗದೆ ಇದ್ದಾಗ ಪೆಟ್ರೋಲ್ ಸುರದಿದ್ದಾರೆ. ಈ ವೇಳೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ದಟ್ಟ ಆವರಿಸುತ್ತಿದ್ದಂತೆ ಸುತ್ತಿದಂತೆ ದರೋಡೆಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ.ಘಟನೆಯ ಸಂಪೂರ್ಣ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಈ ಕುರಿತು ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಪ್ಪಿನಂಗಡಿ; ಅಡಿಕೆ ಮರಕ್ಕೆ ಔಷಧಿ ಸಿಂಪಡಿಸುವಾಗ ವಿದ್ಯುತ್ ಸ್ಪರ್ಶಿಸಿ ಕೃಷಿಕ ಸಾವನ್ನಪ್ಪಿರುವ ಘಟನೆ ರೆಖ್ಯಾ ಗ್ರಾಮದ ಪರ್ಕಳ ಎಂಬಲ್ಲಿ ಶನಿವಾರ ನಡೆದಿದೆ. ಅರಸಿನಮಕ್ಕಿ ಗ್ರಾಮದ ಉಡ್ಯೆರೆ ಮನೆ ನಿವಾಸಿ ಕೃಷ್ಣಪ್ಪ ಕುಲಾಲ್ (49) ಮೃತರು. ಪರ್ಕಳದ ತೋಟದಲ್ಲಿ ಅಡಕೆ ಕೃಷಿಗೆ ಔಷಧಿ ಸಿಂಪಡಿಸುವಾಗ ಬಳಸಿದ ದೋಟಿಯು ವಿದ್ಯುತ್ ತಂತಿಯನ್ನು ಸ್ಪರ್ಶಿಸಿ ವಿದ್ಯುತ್ ಆಘಾತಕ್ಕೆ ಒಳಗಾಗಿಗದ್ದಾರೆ. ಕೂಡಲೇ ಅವರನ್ನು ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತ್ತಾದರೂ, ಅವರಾಗಲೇ ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದ್ದಾರೆ. ಮೃತ ಕೃಷ್ಣಪ್ಪ ಕುಲಾಲ್ ಅರಸಿನಮಕ್ಕಿ ಕುಲಾಲರ ಸಮಾಜಸೇವಾ ಸಂಘದ ಮಾಜಿ ಅಧ್ಯಕ್ಷರಾಗಿಯೂ, ಪ್ರಸಕ್ತ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ, ಒರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಸುಬ್ರಮಣ್ಯ: ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಹೃದಯಾಘಾತವಾಗಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಜೂನ್ 28 ಶನಿವಾರ ನಡೆದಿದೆ. ಐನೆಕಿದು ಗ್ರಾಮದ ಕುಜುಂಬಾರು ನಿವಾಸಿ ಡೀಕಯ್ಯ ಉಪ್ಪಳಿಕೆ(55) ಮೃತ ವ್ಯಕ್ತಿ. ಜೂನ್ 28 ಶನಿವಾರ ಸಂಜೆ ಸುಬ್ರಮಣ್ಯ ಬಸ್ ನಿಲ್ದಾಣದಲ್ಲಿದ್ದಾಗ ಅವರಿಗೆ ಹೃದಯಾಘಾತವಾಗಿದೆ. ಕೂಡಲೇ ಅವನ್ನು ಕಡಬ ಪ್ರಾಥಮಿಕ ಆರೋಗ್ಯ ಕೇಂದ್ರ ಕರೆದೊಯ್ದರೂ ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ. ಮೃತರು ಪತ್ನಿ, ತಾಯಿ ಹಾಗೂ ಕುಟುಂಬಸ್ಥರು ಅಗಲಿದ್ದಾರೆ.
ನವದೆಹಲಿ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 11 ಜನರ ಪ್ರಾಣವನ್ನು ಬಲಿ ತೆಗೆದುಕೊಂಡು, ಇತರ ಅನೇಕರು ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಐಪಿಎಸ್ ಅಧಿಕಾರಿಗಳಾದ ದಯಾನಂದ, ವಿಕಾಸ್ ಕುಮಾರ್ ಮತ್ತು ಶೇಖರ್ ಅವರನ್ನು ಅಮಾನತುಗೊಳಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ವಿಜಯೋತ್ಸವದ ಸಂದರ್ಭದಲ್ಲಿ ಜನಸಂದಣಿಯನ್ನು ನಿಯಂತ್ರಿಸುವಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಕರ್ನಾಟಕ ಸರ್ಕಾರ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡ ನಂತರ ಈ ಅನುಮೋದನೆ ಬಂದಿದೆ. ಕರ್ನಾಟಕ ಸರ್ಕಾರವು ಈ ಅಮಾನತು ವರದಿಯನ್ನು ಈ ಹಿಂದೆ ಕೇಂದ್ರಕ್ಕೆ ಸಲ್ಲಿಸಿತ್ತು. ಈಗ ಅದು ಔಪಚಾರಿಕವಾಗಿ ಈ ಕ್ರಮವನ್ನು ಅನುಮೋದಿಸಿದೆ. ಕೇಂದ್ರವು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ (ಡಿಪಿಎಆರ್) ತನ್ನ ಅನುಮೋದನೆಯನ್ನು ತಿಳಿಸಿದೆ. ಇದರಿಂದಾಗಿ ರಾಜ್ಯದ ಕ್ರಮವನ್ನು ಬಲಪಡಿಸಲಾಗಿದೆ. ಮುಖ್ಯಮಂತ್ರಿಗಳ ಕಚೇರಿ (ಸಿಎಂಒ) ಪ್ರಕಾರ, ಶಿಸ್ತು ಪ್ರಕ್ರಿಯೆಯನ್ನು ಮತ್ತಷ್ಟು ಮುಂದುವರಿಸುವ ಮೂಲಕ ಅಧಿಕಾರಿಗಳ ವಿರುದ್ಧ 30 ದಿನಗಳಲ್ಲಿ…
ಮಳೆಗಾಲದಲ್ಲಿ ದರೋಡೆ, ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿ ಮುಂಜಾಗ್ರತೆ ವಹಿಸುವಂತೆ ಪೋಲೀಸ್ ಇಲಾಖೆ ಸಾರ್ವಜನಿಕರಿಗೆ ಸೂಚಿಸಿದ್ದಾರೆ. ದರೋಡೆ ನಡೆಸುವ ಉತ್ತರ ಭಾರತದ ಚಡ್ಡಿ ಗ್ಯಾಂಗ್ ಮಳೆಗಾಲದ ಪ್ರಾರಂಭದಲ್ಲಿ ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಕ್ರಿಯವಾಗಿದೆ ಎಂದು ವರದಿಯಾಗಿದೆ.ಮಂಗಳೂರು ಅಸುಪಾಸಿನ ಜಿಲ್ಲೆಗಳಾದ ಉಡುಪಿ, ಚಿಕ್ಕಮಗಳೂರು, ಮಡಿಕೇರಿಯಲ್ಲಿ ಕಳೆದ ಒಂದು ವಾರದಿಂದ ಸರಣಿ ಕಳ್ಳತನ ನಡೆಯುತ್ತಿದೆ. ಈ ಗ್ಯಾಂಗ್ ಮಂಗಳೂರು ನಗರಕ್ಕೂ ಬರುವ ಸಾಧ್ಯತೆ ಇರುವುದರಿಂದ ಒಂಟಿ ಮನೆಗಳು, ಬೀದಿಯ ಕೊನೆಯ ಮನೆಗಳು ಹಾಗೂ ನಾಗರಿಕರು ಸಾಕಷ್ಟು ಎಚ್ಚರಿಕೆಯಿಂದ ಇರಬೇಕು. ಯಾವುದೇ ಅಪರಿಚಿತ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡುವಂತೆ ಪೊಲೀಸರು ಹೇಳಿದ್ದಾರೆ.









