Author: main-admin

ಉಡುಪಿ: ನೇಜಾರಿನಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಆರೋಪಿ ಪ್ರವೀಣ್ ಚೌಗುಲೆಯನ್ನು ವೀಡಿಯೋ ಕಾನ್ಸರೆನ್ಸ್ ಮೂಲಕ ನ್ಯಾಯಾಧೀಶರ ಎದುರು ಹಾಜರುಪಡಿಸಲಾಯಿತು. ಈ ಪ್ರಕರಣವನ್ನು ಉಡುಪಿ ಸೆಷನ್ಸ್ ಕೋರ್ಟ್ ನಿಂದ ಬೆಂಗಳೂರಿನ ಸೆಷನ್ಸ್ ಕೋರ್ಟ್‌ಗೆ ವರ್ಗಾಯಿಸುವಂತೆ ಕೋರಿ ಆರೋಪಿ ಪರ ವಕೀಲರು ಮೆಮೋ ಸಲ್ಲಿಕೆ ಮಾಡಿದ್ದರೂ ನ್ಯಾಯಪೀಠ ಅಂಗೀಕರಿಸಿಲ್ಲ. ಸಾಕ್ಷಿಗಳಿಗೆ ಸಮನ್ಸ್ ನೀಡಿ, ಮುಂದಿನ ವಿಚಾರಣೆಯು ಜೂನ್ 13ರಿಂದ 15ರ ಅವಧಿಯಲ್ಲಿ ನಡೆಯಲಿದೆ. ಮೊದಲನೇ ದಿನ ಒಬ್ಬರು ಹಾಗೂ ಉಳಿದ ದಿನಗಳಲ್ಲಿ ತಲಾ ಇಬ್ಬರಂತೆ ಮೂರು ದಿನಗಳ ಕಾಲ 5 ಮಂದಿ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗುವುದು.

Read More

ಗೃಹಲಕ್ಷ್ಮಿ ಯೋಜನೆಯ 7ನೇ ಕಂತಿನ ಹಣ ಈಗಾಗಲೇ ಮಹಿಳೆಯರ ಖಾತೆಗೆ ಜಮಾ ಮಾಡಲಾಗಿದೆ. ಒಂದು ವೇಳೆ ನಿಮಗೆ ಈ ಯೋಜನೆಯ ಹಣ ದೊರೆಯದೆ ಇದ್ದರೆ ಮೊದಲು ನೀವು ಇಕೆವೈಸಿ ಮಾಡಿಸಿ. ನಂತರ ಸೂಕ್ತ ದಾಖಲೆಗಳನ್ನು ನಿಮ್ಮ ಬ್ಯಾಂಕ್‌ ಗೆ ನೀಡಿ. ಈಗಾಗಲೇ ಈ ಯೋಜನೆಯಡಿ ಮಹಿಳೆಯರು ಪ್ರತಿ ತಿಂಗಳು 2000 ರೂಪಾಯಿಯನ್ನು ಪಡೆದುಕೊಳ್ಳುತ್ತಿದ್ದಾರೆ.

Read More

ಮಂಗಳೂರು : ಅಡ್ಯಾರ್ ನಲ್ಲಿರುವ ನ್ಯಾಚುರಲ್ಸ್ ಐಸ್ ಕ್ರೀಂ ಸಂಸ್ಥೆ ಬೊಂಡಾ ಪ್ಯಾಕ್ಟರಿಯಲ್ಲಿ ಎಳನೀರು ಕುಡಿದು ತುಂಬೆ ಪರಿಸರದ ನಿವಾಸಿಗಳು ಅಸ್ವಸ್ಥರಾದ ಘಟನೆ ನಡೆದಿದ್ದು, ಇದೀಗ ಬೊಂಡಾ ಪ್ಯಾಕ್ಟರಿಗೆ ಆರೋಗ್ಯಾಧಿಕಾರಿಗಳು ಭೇಟಿ ನೀಡಿ ಎಳನೀರು ಸ್ಯಾಂಪಲ್ ನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಎಪ್ರಿಲ್ 8 ರಂದು ಅಡ್ಯಾರ್ ನಲ್ಲಿರುವ ಲ್ಯಾಂಡ್ಸ್ ಫ್ಲೆವರ್ ಸಂಸ್ಥೆಯ ಬೊಂಡ ಫ್ಯಾಕ್ಟರಿ ಎಂಬ ಎಳನೀರು ಮತ್ತು ನ್ಯಾಚುರಲ್ ಐಸ್ ಕ್ರೀಮ್ ಮಾರಾಟ ಮಾಡುವ ಸಂಸ್ಥೆಯಿಂದ ಅಡ್ಯಾರ್ ಕಣ್ಣೂರು ಮತ್ತು ತುಂಬೆ ಪರಿಸರದ ನಿವಾಸಿಗಳು ಎಳನೀರನ್ನು ಲೀಟರ್ ಲೆಕ್ಕದಲ್ಲಿ ಖರೀದಿಸಿ ಕುಡಿದ ಕಾರಣ ದಿನಾಂಕ 9.4.2024 ರಂದು ಬೆಳಗ್ಗೆಯಿಂದ ಸಂಜೆಯ ತನಕ ವಾಂತಿ ಮತ್ತು ಭೇದಿಯಿಂದ ಬಳಲಿರುತ್ತಾರೆ. ಇದರಿಂದ ಉತ್ಪಾದನೆಯಾಗುವ ಎಳನೀರನ್ನು ಸಾರ್ವಜನಿಕರಿಗೆ ಲೀಟರ್ ಗೆ 40 ರೂಪಾಯಿಯಂತೆ ಸೋಮವಾರ ಸಂಜೆ ಈ ಎಳನೀರನ್ನು ಕುಡಿದ ಅಡ್ಯಾರು ಮತ್ತು ಕಣ್ಣೂರ್ ಸುತ್ತಮುತ್ತಲಿನ ಸಾರ್ವಜನಿಕರು ಮಂಗಳವಾರದಿಂದ ವಾಂತಿಬೇದಿಯಿಂದ ಬಳಲಿದ್ದು ಸ್ಥಳೀಯ ವೈದ್ಯರುಗಳಲ್ಲಿ ಪರೀಕ್ಷಿಸಿ ಔಷಧೋಪಚಾರ ಪಡೆದು ಗುಣಮುಖರಾಗದೆ ಮೂರು ಮಂದಿ ಪಲ್ನೀರ್…

Read More

ಮಂಗಳೂರು : ಸರ್ಕಾರಿ ಅಧಿಕಾರಿಯೋರ್ವರಿಗೆ ಲೋಕಾಯುಕ್ತ ಪೊಲೀಸರ ಸೋಗಿನಲ್ಲಿ ಕರೆ ಮಾಡಿ ಲಂಚದ ಬೇಡಿಕೆ ಇಟ್ಟು ಪ್ರಕರಣ ದಾಖಲಿಸುವ ಬೆದರಿಕೆಯೊಡ್ಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಈ ಬಗ್ಗೆ ಕಂದಾಯ ಅಧಿಕಾರಿ ಪುರುಷೋತ್ತಮ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Read More

ಮಂಗಳೂರು : ನಗರದ ಬಂಗ್ರ ಕೂಳೂರಿನ ಗೋಲ್ಡ್ ಪಿಂಚ್ ಸಿಟಿಯಲ್ಲಿ ಏಪ್ರಿಲ್14ರಂದು ಆಯೋಜನೆಗೊಳ್ಳಲಿರುವ ಪ್ರಧಾನಿ ಮೋದಿಯವರ ಸಮಾವೇಶ ಕೊನೆಯ ಕ್ಷಣದಲ್ಲಿ ರದ್ದಾಗಿದೆ. ಸಮಾವೇಶದ ಬದಲು ಬರೀ ರೋಡ್ ಶೋ ನಡೆಸಲಾಗುತ್ತದೆ. ಸಮಾವೇಶಕ್ಕೆ ಬಂಗ್ರ ಕೂಳೂರಿನ ಗೋಲ್ಡ್ ಪಿಂಚ್ ಸಿಟಿಯಲ್ಲಿ ಇಂದು ಚಪ್ಪರ ಮುಹೂರ್ತವೂ ನಡೆದಿತ್ತು. ಜರ್ಮನ್ ಪೆಂಡಾಲ್ ಹಾಕಲು ಸಿದ್ಧತೆಯೂ ನಡೆದಿತ್ತು. ಆದರೆ, ಕೆಲವೊಂದು ಕಾರಣಗಳಿಂದ ಸಮಾವೇಶ ರದ್ದುಗೊಂಡಿದೆ. ಇದೀಗ ಸಮಾವೇಶದ ಬದಲು ರೋಡ್ ಶೋ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ. ಏಪ್ರಿಲ್ 14ರಂದು ಸಂಜೆ ವೇಳೆಗೆ ಮೋದಿ ರೋಡ್ ಶೋ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಇನ್ನಷ್ಟೇ ರೋಡ್ ಶೋ ರೂಟ್ ಮ್ಯಾಪ್ ಸಿದ್ಧಪಡಿಸಬೇಕಿದೆ.

Read More

ಕಾಸರಗೋಡು : ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿ ತಾಯಿ ಆತ್ಮಹತ್ಯೆಗೆ ಶರಣಾದ ಘಟನೆ ಕಾಸರಗೋಡಿನ ಚಿಮೇನಿ ಚೆಂಬ್ರಕಾನದಲ್ಲಿ ನಡೆದಿದೆ. ರಂಜಿತ್ ಅವರ ಪತ್ನಿ ಸಜೀನಾ (34), ಮಕ್ಕಳಾದ ಗೌತಮ್( 9), ಮತ್ತು ತೇಜಸ್ (6) ಮೃತ ದುರ್ದೈವಿಗಳಾಗಿದ್ದಾರೆ. ಇವರು ಚೆಂಬ್ರಕಾನ್‌ ನಿವಾಸಿಗಳೆಂದು ತಿಳಿದುಬಂದಿದೆ. ಪ್ರಿಲ್ 9ರ ಮಂಗಳವಾರ ಮಧ್ಯಾಹ್ನ ಈ ಘಟನೆ ಬೆಳಕಿಗೆ ಬಂದಿದ್ದು ಮಕ್ಕಳು ವಿಷ ಸೇವಿಸಿ ಮೃತಪಟ್ಟಿದ್ದು, ತಾಯಿ ಸಜೀನಾ ನೇಣು ಬಿಗಿದುಕೊಂಡು ಕೈಯ ನರವನ್ನು ಕತ್ತರಿಸಿಕೊಂಡು ಸಾವನ್ನಪ್ಪಿದ್ದಾರೆ. ಸಜೀನಾ ಪೆರಿಂಗೋ ವಯಕ್ಕರ ಪಂಚಾಯತ್ ಕಚೇರಿಯಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.ಮಾಹಿತಿ ಪಡೆದ ಚಿಮೇನಿ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. ಈ ಕೃತ್ಯಕ್ಕೆ ಕಾರಣ ತಿಳಿದು ಬಂದಿಲ್ಲ.

Read More

ಬಂಟ್ವಾಳ : ಮನೆಯೊಳಗೆ ‌ನುಗ್ಗಿ ವ್ಯಕ್ತಿಯೋರ್ವನಿಗೆ ಚೂರಿ ಇರಿದು ಪರಾರಿಯಾಗಿದ್ದ ಆರೋಪಿಯನ್ನು ಬಂಟ್ವಾಳ ‌ಗ್ರಾಮಾಂತರ ಪೋಲೀಸ್ ಬಂಧಿಸಿ ನ್ಯಾಯಲಯಕ್ಕೆ ಹಾಜರುಪಡಿಸಿದ್ದು,ನ್ಯಾಯಾಲಯ ಈತನಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಅಬ್ದುಲ್ ರಹಿಮಾನ್ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ.ಈತನನ್ನು ಪರಂಗಿಪೇಟೆಯಲ್ಲಿ ಬಂಧಿಸಲಾಗಿದೆ.

Read More

ರಂಜಾನ್ (ಈದ್-ಉಲ್-ಫಿತರ್) ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಇಂದು ರಾಜ್ಯಾದ್ಯಂತ ಸಾರ್ವತ್ರಿಕ ರಜೆ ಘೋಷಿಸಿದೆ. ನಾಳೆ ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಆದರೆ, ಕೇರಳದಲ್ಲಿ ಏಪ್ರಿಲ್ 9 ರಂದೇ ಚಂದ್ರ ದರ್ಶನವಾಗಿದ್ದರಿಂದ ಕರಾವಳಿ ಪ್ರದೇಶದಲ್ಲಿ ಮುಸ್ಲಿಮರು ಇಂದೇ ರಂಜಾನ್ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲಾದ್ಯಂತ ದಿನಾಂಕ: 11.04.2024 ರ ಗುರುವಾರದಂದು ರಜೆ ರದ್ದುಗೊಳಿಸಿ ಇಂದು ಸಾರ್ವತ್ರಿಕ ರಜೆಯನ್ನು ಘೋಷಿಸಿ ಆದೇಶಿಸಲಾಗಿದೆ.

Read More

ಮಂಗಳೂರು: ನಾಲ್ಕು ವರ್ಷದ ಹಿಂದೆ ಕಾವೂರಿನ ಬಾಡಿಗೆ ಮನೆಯಲ್ಲಿ ಪತ್ನಿಯನ್ನು ಹತ್ಯೆಗೈದ ಆರೋಪಿ ಪತಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಮೂಲತಃ ಹಾಸನ ಅರಕಲಗೂಡಿನ, ಕಾವೂರಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಗಣೇಶ್ ಕುಮಾರ್ (46) ಶಿಕ್ಷೆಗೊಳಗಾದ ಆರೋಪಿ. ಈತ ತನ್ನ ಪತ್ನಿಗೆ ದಿನನಿತ್ಯ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದ ಎಂಬ ಆರೋಪವಿತ್ತು. 2020ರ ಜು.1ರಂದು ಸಂಜೆ ಸಾಮಾನು ತರಲಿಕ್ಕಿದೆ ಎಂದು ಹೇಳಿ ಪತ್ನಿಯನ್ನು ಬೈಕ್‌ನಲ್ಲಿ ಕರೆದುಕೊಂಡು ಹೋಗಿದ್ದ. ರಾತ್ರಿ 7ರಿಂದ 7:20ರ ಮಧ್ಯೆ ಅಂತೋನಿಕಟ್ಟೆ ಎಂಬಲ್ಲಿ ಪತ್ನಿಯ ಕುತ್ತಿಗೆ ಹಿಸುಕಿ ಕಪ್ಪು ಕಲ್ಲಿನ ಕೋರೆಯ ಮೇಲಿನಿಂದ ದೂಡಿ ಹಾಕಿ ಹತ್ಯೆ ಮಾಡಿದ್ದಮತ್ತು ಪತ್ನಿಯ ತಾಯಿಗೆ ಜೀವಬೆದರಿಕೆ ಹಾಕಿದ್ದ ಎಂದು ದೂರು ದಾಖಲಾಗಿತ್ತು. ಪ್ರಕರಣದ ಬಗ್ಗೆ ಕಾವೂರು ಠಾಣೆಯ ಇನ್ಸ್ಪೆಕ್ಟರ್ ರಾಘವ ಎಸ್. ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಾಂತ ರಾಜು ಎಸ್.ವಿ. ವಿಚಾರಣೆ ನಡೆಸಿ ಆರೋಪಿಯ ಮೇಲಿನ…

Read More

ದಕ್ಷಿಣಕನ್ನಡದಲ್ಲಿ ಬಿಸಿಲಿನ ಧಗೆ ಹೆಚ್ಚಾಗಿದ್ದು, ಪ್ರಾಣಿ ಪಕ್ಷಿಗಳಿಗೆ ನೀರಿನ ತೊಂದರೆಯಾಗುತ್ತಿದೆ. ಈ ಹಿನ್ನಲೆ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಅವರು ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಯ ಕಟ್ಟಡಗಳ ಮೇಲೆ ನೆರಳಿನ ಆಶ್ರಯ ಇರುವಲ್ಲಿ ಮಡಕೆ, ಪಾತ್ರೆ, ಅಥವಾ ಟಬ್‌ಗಳಲ್ಲಿ ಸಾಕಷ್ಟು ನೀರು ತುಂಬಿಸಿಡುವ ಮೂಲಕ ಹಕ್ಕಿಗಳಿಗೆ ನೀರುಣಿಸಬೇಕು ಎಂದು ಸುತ್ತೋಲೆ ಹೊರಡಿಸಿದ್ದಾರೆ. ಬೇಸಿಗೆಯಲ್ಲಿ ಮಳೆ ಕೊರತೆಯಿಂದಾಗಿ ಬರ ಪರಿಸ್ಥಿತಿ ಉಂಟಾಗಿದೆ. ಒಂದು ವಾರದಿಂದ ಈಚೆಗೆ ಜಿಲ್ಲೆಯಲ್ಲೂ ಅಧಿಕ ಉಷ್ಣಾಂಶ ದಾಖಲಾಗುತ್ತಿದೆ. ಬಿಸಿಲಿನ ತೀವ್ರತೆಗೆ ಜನ ಸಾಮಾನ್ಯರಿಗೆ ಮಾತ್ರವಲ್ಲದೆ ಹಕ್ಕಿಗಳಿಗೆ ಕೂಡಾ ಕುಡಿಯುವ ನೀರಿನ ಅಭಾವ ಉಂಟಾಗಿ, ತೊಂದರೆಗಳಾಗುವ ಸಾಧ್ಯತೆ ಇದೆ. ಬೇಸಿಗೆಯಲ್ಲಿ ಉಷ್ಣಾಂಶ ಹೆಚ್ಚಾದಾಗ ಪಕ್ಷಿಗಳಿಗೆ ಹೆಚ್ಚು ನೀರಿನ ಅಗತ್ಯವಿದೆ. ಬಿಸಿಲಿನ ಶಾಖದ ಹೊಡೆತದಿಂದ ಹಕ್ಕಿಗಳನ್ನು ರಕ್ಷಿಸಲು, ಅವುಗಳಿಗೆ ಕುಡಿಯುವ ನೀರು ಒದಗಿಸುವುದು ಅತ್ಯವಶ್ಯಕ ಎಂದು ಅವರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ. ಹಕ್ಕಿಗಳಿಗೆ ಮಡಕೆ, ಪಾತ್ರೆ, ಟಬ್‌ಗಳಲ್ಲಿ ಇಡುವ ನೀರನ್ನು ಆಗಾಗ ಬದಲಾಯಿಸುವ ಮೂಲಕ ಸೊಳ್ಳೆಗಳು ನಿಲ್ಲದಂತೆ ಮುಂಜಾಗ್ರತೆ ವಹಿಸಬೇಕು. ಈ…

Read More