ಮಂಗಳೂರು: ಸುಲಿಗೆ ಪ್ರಕರಣದಲ್ಲಿ ಮೂರು ವರ್ಷ ಶಿಕ್ಷೆ ಪ್ರಕಟವಾದ ಬಳಿಕ ತಲೆಮರಿಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ತೊಕ್ಕೊಟ್ಟು ಚಂಬುಗುಡ್ಡೆ, ಪೆರ್ಮನ್ನೂರು ನಿವಾಸಿ ನವೀನ್ ಸಿಕ್ವೇರಾ ( 52) ಎಂದು ತಿಳಿದುಬಂದಿದೆ. ಈತನ ಮೇಲೆ 2011 ಹಾಗೂ 2012ರಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಠಾಣಾ ಅಕ್ರ ನಂಬರ್ 195/2011 ಕಲಂ 392 ಐಪಿಸಿ ರಂತೆ ಪ್ರಕರಣ ದಾಖಲಾಗಿದ್ದು ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 2015 ರಲ್ಲಿ ಮೂರು ವರ್ಷಗಳ ಕಠಿಣ ಕಾರವಾಸ ಶಿಕ್ಷೆ ಹಾಗೂ ರೂಪಾಯಿ 5000 ಜುಲ್ಮಾನೆ ವಿಧಿಸಿ ತೀರ್ಪು ನೀಡಿತ್ತು.ಆರೋಪಿಯು ಮಾನ್ಯ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮಾನ್ಯ ಉಚ್ಚ ನ್ಯಾಯಾಲಯಕ್ಕೆ ಕ್ರಿಮಿನಲ್ ರಿಟ್ ಪೆಟಿಷನ್ ಅರ್ಜಿ ಸಲ್ಲಿಸಿದ್ದು ಅರ್ಜಿ ಪರಿಶೀಲಿಸಿದ ಮಾನ್ಯ ಉಚ್ಚ ನ್ಯಾಯಾಲಯವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಒಂದು ವರ್ಷ ಸಾಧಾ ಕಾರವಾಸ ಶಿಕ್ಷೆ ಹಾಗೂ ರೂಪಾಯಿ 15000 ದಂಡ ವಿಧಿಸಿ ಈ ಶಿಕ್ಷೆಯನ್ನು 2022ರ ಒಳಗೆ ಅನುಭವಿಸುವಂತೆ…
Author: main-admin
ಪುತ್ತೂರು : ಗ್ಯಾಸ್ ಬಲೂನ್ ವಿದ್ಯುತ್ ತಂತಿಗೆ ತಗುಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಾರೊಂದು ಸುಟ್ಟು ಭಸ್ಮವಾದ ಘಟನೆ ಶ್ರೀ ಪೂಮಾಣಿ-ಕಿನ್ನಿಮಾನಿ ಬಳಿಯ ಪಡುಮಲೆ ಹಾಗೂ ಬಡಗನ್ನೂರು ಗ್ರಾಮ ಪಂಚಾಯತ್‌ನ ಮೈಂದಿನಡ್ಕ ವ್ಯಾಘ್ರ ಚಾಮುಂಡಿ ದೈವಸ್ಥಾನದ ಬಳಿಯ ಪಡುಮಲೆಯಲ್ಲಿ ಭಾನುವಾರ ನಡೆದಿದೆ. ದೈವಸ್ಥಾನ ಜಾತ್ರಾ ಮಹೋತ್ಸವ ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ದೇವಾಲಯದ ಆವರಣದಲ್ಲಿರುವ ವಿದ್ಯುತ್ ಕಂಬದ ಬಳಿ ಕಾರು ಪಾರ್ಕಿಂಗ್ ಮಾಡಲಾಗಿತ್ತು. ಆ ಸಮಯದಲ್ಲಿ, ಹತ್ತಿರದ ಜಾತ್ರೆಯಿಂದ ಬಂದ ಗ್ಯಾಸ್ ಬಲೂನ್ ಗಾಳಿಯ ರಭಸಕ್ಕೆ ಹಾರಿ ವಿದ್ಯುತ್ ತಂತಿಗೆ ತಗುಲಿತು ಎಂದು ವರದಿಯಾಗಿದೆ. ಬಲೂನ್ ವಿದ್ಯುತ್ ತಂತಿಗೆ ತಗುಲಿದ ತಕ್ಷಣ, ಶಾರ್ಟ್ ಸರ್ಕ್ಯೂಟ್ ಸಂಭವಿಸಿ, ಕಿಡಿಗಳು ಹಾರಿ, ಸ್ವಲ್ಪ ದೂರದಲ್ಲಿ ನಿಲ್ಲಿಸಿದ್ದ ಕಾರಿಗೆ ತಗುಲಿದೆ. ಕೆಲವೇ ಕ್ಷಣಗಳಲ್ಲಿ, ಕಾರು ಬೆಂಕಿಗಾಹುತಿಯಾಗಿದೆ. ಜ್ವಾಲೆಯ ಮಧ್ಯೆ, ಕಾರು ಇದ್ದಕ್ಕಿದ್ದಂತೆ ಮುಂದೆ ಸಾಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಈ ಸಮಯದಲ್ಲಿ, ಕಿಡಿಗಳು ಕಾರಿಗೆ ತಗುಲಿ ಹೊತ್ತಿ ಉರಿದಿದೆ. ಸ್ಥಳೀಯ ನಿವಾಸಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ…
ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಮಾರಧಾರ ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ರವಿವಾರ ಮಧ್ಯಾಹ್ನ ಸಂಭವಿಸಿದೆ . ಮೃತಪಟ್ಟವರನ್ನು ಸುಳ್ಯ ತಾಲೂಕಿನ ಕೊಲ್ಲಮೊಗ್ರು ನಿವಾಸಿಗಳಾದ ಹರಿಪ್ರಸಾದ್ (40) ಮತ್ತು ಸುಜೀತ್ ಗೋಳಿಯಾಡಿ (26) ಎಂದು ಗುರುತಿಸಲಾಗಿದೆ. ಇಬ್ಬರೂ ಅವಿವಾಹಿತರಾಗಿದ್ದರು ಎಂದು ತಿಳಿದುಬಂದಿದೆ. ಹರಿಪ್ರಸಾದ್ ಅವರು ಸುಬ್ರಹ್ಮಣ್ಯದಲ್ಲಿ ‘ಅನುಗ್ರಹ ಎಂಟರ್‌ಪ್ರೈಸಸ್’ ಎಂಬ ಹಾರ್ಡ್‌ವೇರ್ ಅಂಗಡಿಯ ಮಾಲೀಕರಾಗಿದ್ದರು, ಸುಜೀತ್ ಅದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ರವಿವಾರ ಮಧ್ಯಾಹ್ನ ಹರಿಪ್ರಸಾದ್ ಮತ್ತು ಸುಜೀತ್ ಅವರು ತಮ್ಮ ಪರಿಚಿತರಾದ ಸುಮಾರು 10 ಜನರ ತಂಡದೊಂದಿಗೆ ಕಾಲೋನಿ ಕೊನೆಯಲ್ಲಿರುವ ಕುಮಾರಧಾರ ನದಿಯ ಬಳಿ ವನಭೋಜನಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಕುಲ್ಕುಂದ ಬಳಿ ನದಿಯಲ್ಲಿ ಸ್ನಾನ ಮಾಡಲು ನೀರಿಗಿಳಿದಾಗ ಇಬ್ಬರೂ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾರೆ. ಜೊತೆಯಲ್ಲಿದ್ದವರು ತಕ್ಷಣವೇ ಗಮನಿಸಿದರೂ ಫಲಕಾರಿಯಾಗಲಿಲ್ಲ ಎಂದು ಹೇಳಲಾಗುತ್ತಿದೆ. ಬಳಿಕ ನೀರಿನಲ್ಲಿ ಮುಳುಗಿದ್ದ ಇಬ್ಬರ ಮೃತದೇಹಗಳನ್ನು ಮೇಲೆತ್ತಲಾಗಿದೆ. ಈ ಕುರಿತು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು…
ಮಂಗಳೂರು: ವಿದ್ಯಾರ್ಥಿಗಳಿಗೆ ನಿಷೇಧಿತ ಮಾದಕವಸ್ತು ಮಾರಾಟ ಮಾಡುತ್ತಿದ್ದ ಆರೋಪದಡಿ ಕದ್ರಿ ಪೊಲೀಸ್ ಠಾಣೆಯ ಅಧಿಕಾರಿಗಳು ಯುವಕನೊಬ್ಬನನ್ನು ಬಂಧಿಸಿ ಎಂಡಿಎಮ್ಎ (MDMA) ಮಾದಕವಸ್ತು ಹಾಗೂ ಬೈಕ್ ವಶಪಡಿಸಿಕೊಂಡಿರುವ ಘಟನೆ ಜನವರಿ 17, 2026ರಂದು ನಡೆದಿದೆ. ಬಂಧಿತ ಆರೋಪಿಯನ್ನು ಜೂಡ್ ಮಾಥ್ಯೂ (20) ಎಂದು ಗುರುತಿಸಲಾಗಿದ್ದು, ಆತನು ಮನೋಜ್ ಜೊಸೆಫ್ ಅವರ ಪುತ್ರ. ಆರೋಪಿಯು ಕೇರಳ ರಾಜ್ಯದ ಎರ್ನಾಕುಲಂ ಜಿಲ್ಲೆಯ ಮುತೊಲಪುರಂ ನಿವಾಸಿ, ಚುನಯಮಕ್ಕಿಲ್ ಹೌಸ್ ವಾಸಿಯಾಗಿದ್ದಾನೆ. ಮಂಗಳೂರು ಪೂರ್ವ ಪೊಲೀಸ್ ಠಾಣಾಧಿಕಾರಿಗಳಿಗೆ ಲಭಿಸಿದ ಖಚಿತ ಮಾಹಿತಿಯಂತೆ, ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಪದವು ಗ್ರಾಮದ ಕೈಲಾಸ ಕಾಲೋನಿ ಸಮೀಪ, ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂದಿರದ ಹಿಂದಿರುವ ಖಾಲಿ ಜಾಗದಲ್ಲಿ ಯುವಕನೊಬ್ಬ ಬೈಕ್ನಲ್ಲಿ ಎಂಡಿಎಮ್ಎ ಮಾದಕವಸ್ತುವನ್ನು ಹೊಂದಿದ್ದು ಅಕ್ರಮವಾಗಿ ಮಾರಾಟ ಮಾಡುತ್ತಿದ್ದನು. ಈ ಮಾಹಿತಿ ಆಧರಿಸಿ ಪೊಲೀಸ್ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ದಾಳಿಯ ವೇಳೆ ಆರೋಪಿಯಿಂದ 5.20 ಗ್ರಾಂ ತೂಕದ ಎಂಡಿಎಮ್ಎ ಮಾದಕವಸ್ತು ಹಾಗೂ ಕೃತ್ಯಕ್ಕೆ…
ಬೆಂಗಳೂರು : ರಾಜ್ಯದಲ್ಲಿ ಕೆಲವು ಪೊಲೀಸ ಠಾಣೆಗಳು ಉತ್ತಮ ಕೆಲಸ ಮಾಡುತ್ತಿವೆ. ಆದರೆ 88 ಪ್ರಕರಣಗಳಲ್ಲಿ ಪೊಲೀಸರೇ ಶಾಮೀಲಾಗಿದ್ದಾರೆ ಎಂದು ಪೊಲೀಸ್ ಹಿರಿಯ ಅಧಿಕಾರಿಗಳ ಜೊತೆಗೆ ವಾರ್ಷಿಕ ಸಭೆಯ ಬಳಿಕ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು. ಇನ್ನೂ ಕೆಲವು ಠಾಣೆಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. 88 ಪ್ರಕರಣಗಳಲ್ಲಿ ಪೊಲೀಸರೇ ಶಾಮೀಲು ಆಗಿದ್ದು ಇದು ಸರ್ಕಾರಕ್ಕೆ ಮಾತ್ರವಲ್ಲ ಪೊಲೀಸ್ ಇಲಾಖೆಗೂ ಕೆಟ್ಟ ಹೆಸರಾಗಿದೆ ರಾಯಚೂರಿನ ಕವಿತಾಳ ಠಾಣೆ ದೇಶದಲ್ಲಿಯೇ ಮೂರನೇ ಸ್ಥಾನ ಪಡೆದುಕೊಂಡಿದೆ. ಪೊಲೀಸ ಅಧಿಕಾರಿಗಳಿಗೆ ಗೊತ್ತಾಗದೆ ಕ್ರೈಂ ನಡೆಯಲು ಸಾಧ್ಯವಿಲ್ಲ. ಪೊಲೀಸರು ಬಲಾಡ್ಯರ ಕೈಗೊಂಬೆಯಂತೆ ಕೆಲಸ ಮಾಡಬಾರದು ನಮ್ಮಲ್ಲಿ ಕಳ್ಳತನ ಸುಳ್ಳಿಗೆ ದರೋಡೆ ಪ್ರಕರಣ ಕಡಿಮೆ ಆಗ್ತಾ ಇದೆ ಆದರೆ ಸೈಬರ್ ಕ್ರೈಂ ಮತ್ತು ಡ್ರಗ್ಸ್ ವೆಡ್ಲಿಂಗ್ ಜಾಸ್ತಿ ಆಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು.
ಮಂಗಳೂರು: ಬೆಂಗಳೂರಿನಲ್ಲಿ ಬಂದೀಖಾನೆ ಡಿಜಿಪಿಯಾಗಿ ಅಲೋಕ್ ಕುಮಾರ್ ಅವರು ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಬಂದಿಖಾನೆ ಭದ್ರತೆಯನ್ನು ಹೆಚ್ಚುಗೊಳಿಸಲಾಗಿದೆ. ಮಂಗಳೂರಿನ ಬಂದೀಖಾನೆಗೂ ಭೇಟಿ ನೀಡಿ ಅವರು ಪರಿಶೀಲನೆ ನಡೆಸಿ ಎಚ್ಚರಿಕೆ ನೀಡಿ ತೆರಳಿದ್ದರು. ಜನವರಿ 14ರಂದು ತಡರಾತ್ರಿ 10.55ರಿಂದ 11.50ರ ನಡುವೆ ಜೈಲು ಅಧೀಕ್ಷಕ ಶರಣಬಸಪ್ಪ ಅವರು ಜೈಲಿನ ಅಧಿಕಾರಿ ಮತ್ತು ಸಿಬಂದಿಯೊಂದಿಗೆ ಕಾರಾಗೃಹದ ಒಳಗಡೆ ತಪಾಸಣೆ ನಡೆಸಿರುವ ವೇಳೆ ‘ಎ’ ವಿಭಾಗದ 3ನೇ ಕೊಠಡಿಯಲ್ಲಿ ಸಿಮ್ ಸಹಿತ ವೀವೋ ಮೊಬೈಲ್ ಫೋನ್, ಕಪ್ಪು ಬಣ್ಣದ ಎಚ್ ಡಿಎಂ ಕೀ ಪ್ಯಾಡ್ ಮೊಬೈಲ್ ಮತ್ತು ಸಿಮ್, ಮೊಬೈಲ್ ಚಾರ್ಜರ್ ಅಡಾಪ್ಟರ್, 2 ಚಾರ್ಜರ್ ಕೇಬಲ್ ಪತ್ತೆಯಾಗಿದೆ. ‘ಬಿ’ ವಿಭಾಗದ 5ನೇ ಕೊಠಡಿಯಲ್ಲಿ ಕಂದು ಬಣ್ಣದ ನೋಕಿಯಾ ಕೀ ಪ್ಯಾಡ್ ಮೊಬೈಲ್ ಸಿಕ್ಕಿದೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ, ಬರ್ಕೆ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಉಳ್ಳಾಲ: ಸಾರ್ವಜನಿಕ ಸ್ಥಳದಲ್ಲಿ ಮಾದಕವಸ್ತು ಮಾರಾಟ ಮಾಡುತ್ತಿದ್ದ ಆರೋಪದಡಿ ಉಳ್ಳಾಲ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡವು ಯುವಕನೊಬ್ಬನನ್ನು ಬಂಧಿಸಿ ನಿಷೇಧಿತ ಮಾದಕವಸ್ತು ವಶಪಡಿಸಿಕೊಂಡಿರುವ ಘಟನೆ ಜನವರಿ 16, 2026ರಂದು ನಡೆದಿದೆ. ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ, ಉಳ್ಳಾಲ ತಾಲೂಕು ಮುನ್ನೂರು ಗ್ರಾಮದ ರಾಣಿಪುರ ಮೈದಾನದ ಬಳಿ ಸಾರ್ವಜನಿಕ ಸ್ಥಳದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಂದಾವರ–ಸಜಿಪ–ಮುನ್ನೂರು ನಿವಾಸಿ ಇಮ್ಮಿಯಾಜ್ @ ಮೊಹಮ್ಮದ್ ಇಮ್ಮಿಯಾಜ್ ಎಂಬಾತನು ಎಂಡಿಎಮ್‌ಎ ಮಾದಕವಸ್ತುವನ್ನು ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ತನ್ನ ಗಿರಾಕಿಗಳಿಗೆ ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಿದ್ದನು. ಈ ಮಾಹಿತಿ ಆಧರಿಸಿ ಪಂಚರ ಸಮ್ಮುಖದಲ್ಲಿ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ದಾಳಿಯ ವೇಳೆ ಆರೋಪಿಯಿಂದ ಸುಮಾರು ರೂ.65,000 ಮೌಲ್ಯದ 13 ಗ್ರಾಂ ತೂಕದ ಎಂಡಿಎಮ್ಎ ಮಾದಕವಸ್ತು, ರೂ.2,000 ನಗದು, ಒಂದು ವಿವೋ ಮೊಬೈಲ್ ಫೋನ್ ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಎನ್‌ಡಿಪಿಎಸ್ ಕಾಯ್ದೆ–1985ರ ಸೆಕ್ಷನ್‌ಗಳು 8(c), 22(a), 22(b) ಹಾಗೂ…
ಮಂಗಳೂರು : ನಗರದಲ್ಲಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾದಕ ವಸ್ತುವಾದ ಹೈಡ್ರೋವೀಡ್ ಗಾಂಜಾ, ಚರಸ್ ಹಾಗೂ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಪೆಡ್ಲೆರ್ ಗಳನ್ನೂ ಬಂಧಿಸಿ ಈಗಾಗಲೇ ಹೆಡೆಮುರಿಕಟ್ಟಿದ್ದಾರೆ.ನಗರ ಪೊಲೀಸ್ ಆಯುಕ್ತರ ಕಾರ್ಯಾಚರಣೆಗೆ ಎಲ್ಲೆಡೆ ಪ್ರಶಂಶೆ ವ್ಯಕ್ತವಾಗಿದೆ. ಆದರೆ ಇದೀಗ ಮಾದಕ ವಸ್ತುಗಳನ್ನು ಸೇವಿಸುತ್ತಿರುವ ವಿವಿಧ ಕಾಲೇಜುಗಳಲ್ಲಿ ಕಲಿಯುತ್ತಿರುವ ಕೇರಳದ ವಿದ್ಯಾರ್ಥಿಗಳ ಮೇಲೆ ಅಚ್ಚರಿಯ ಮಾದಕವಸ್ತು ಪರೀಕ್ಷೆಯನ್ನು ನಡೆಸಲಾಯಿತು. ಕಾಲೇಜು ಬಸ್‌ಗಳನ್ನು ನಿಲ್ಲಿಸಿ ವಿದ್ಯಾರ್ಥಿಗಳನ್ನು ಪರೀಕ್ಷಿಸುವ ಮೂಲಕ ಕಾರ್ಯಾಚರಣೆಯನ್ನು ನಡೆಸಲಾಯಿತು. ತಪಾಸಣೆಯ ಸಮಯದಲ್ಲಿ ಸುಮಾರು 200 ವಿದ್ಯಾರ್ಥಿಗಳನ್ನು ಪರೀಕ್ಷಿಸಲಾಯಿತು. ಫಲಿತಾಂಶಗಳು ಹೆಚ್ಚು ಉತ್ತೇಜನಕಾರಿಯಾಗಿದ್ದು, ಹಿಂದಿನ ಪ್ರಕರಣಗಳಿಗೆ ಹೋಲಿಸಿದರೆ ಸ್ಪಷ್ಟ ಸುಧಾರಣೆಯನ್ನು ಸೂಚಿಸುತ್ತವೆ, ಆದರೂ ಇನ್ನೂ ಹೆಚ್ಚಿನ ಸುಧಾರಣೆಗೆ ಅವಕಾಶವಿದೆ ನಗರ ಪೊಲೀಸ್ ಆಯುಕ್ತರು ಸುಧೀರ್ ಕುಮಾರ್ ರೆಡ್ಡಿ ಯವರು ತಿಳಿಸಿದ್ದಾರೆ. ಕಾರ್ಯಾಚರಣೆಯನ್ನು ACP CEN ಮತ್ತು ACP ಸೌತ್ ಅವರ ಮೇಲ್ವಿಚಾರಣೆಯಲ್ಲಿ ನಡೆಸಲಾಗಿದ್ದು .ಇಂತಹ ಅನಿರೀಕ್ಷಿತ ತಪಾಸಣೆಗಳನ್ನು ನಿಯಮಿತವಾಗಿ ಮುಂದುವರಿಸಲಾಗುತ್ತದೆ. ಈ ತಪಾಸಣೆ ಮಾದಕ ವ್ಯಸನದ ವಿರುದ್ಧ ಬಲವಾದ ನಿರೋಧಕವಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಯಾವುದೇ…
ಉಡುಪಿ: ಜಿಲ್ಲೆಯಲ್ಲಿ ಜ.14ರಂದು ಕಲ್ಲು-ಮಣ್ಣು-ಜಲ್ಲಿ-ಮರಳುಗಳನ್ನು ಸಾಗಿಸುವ ವಾಹನಗಳ ಜಾಗೃತಿ ಮೂಡಿಸುವ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. ಈ ವೇಳೆ 832 ವಾಹನಗಳನ್ನು ಪರಿಶೀಲಿಸಲಾಗಿದ್ದು, 182 ವಾಹನಗಳಿಗೆ ನೋಟಿಸ್ ನೀಡಲಾಗಿದೆ. ಅಧಿಕ ಭಾರ ಹಾಗೂ ಇತರೆ ಅಪರಾಧಗಳಿಗಾಗಿ 66 ವಾಹನಗಳ ಮೇಲೆ ಸ್ಥಳದಲ್ಲಿ ದಂಡ ಹಾಕಿ 22,500ರೂ. ಹಣ ವಸೂಲಿ ಮಾಡಲಾಗಿದೆ. ಬ್ರಹ್ಮಾವರ ಠಾಣಾ ವ್ಯಾಪ್ತಿಯಲ್ಲಿ ಒಂದು ವಾಹನದ ಮೇಲೆ ಪ್ರಕರಣ ದಾಖಲು ಮಾಡಲಾಗಿದ್ದು, 27 ವಾಹನಗಳನ್ನು ಗಣಿ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ. ಕಳೆದ ಒಂದು ವಾರದಿಂದ(ಜ.8ರಿಂದ ಜ.14ರವರೆಗೆ) ವಾಹನಗಳಿಗೆ ವೇಗ ನಿಯಂತ್ರಕ ಅಳವಡಿಸುವ ಕುರಿತು ಮಾಹಿತಿ ನೀಡುವ ಉದ್ದೇಶದಿಂದ ಕರಪತ್ರ ಹಂಚುವ ಮೂಲಕ ಮಾಹಿತಿಯನ್ನು ನೀಡಲಾಗುತ್ತಿತ್ತು. ಈ ವೇಳೆ ಒಟ್ಟು 1240 ಕರಪತ್ರಗಳನ್ನು ಹಂಚಲಾಗಿದ್ದು, ಈಗಾಗಲೇ 163 ವಾಹನಗಳಿಗೆ ವೇಗ ನಿಯಂತ್ರಕ ಅಳವಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಕತರ್ನಾಕ್ ಕಳ್ಳಿಯರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕಳ್ಳತನ ಮಾಡುವ ವೇಳೆ ಹುಡುಗರ ರೀತಿ ಬಟ್ಟೆ ಧರಿಸಿ ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಹುಡುಗಿಯರನ್ನು ಈಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹೌದು ಜ.13 ರಂದು ಸಂಪಿಗೇಹಳ್ಳಿಯ ಸಂಗಮೇಶ್ ಅವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದಾಗ ಪೊಲೀಸರು ಸಿಸಿಟಿವಿ ಪರಿಶೀಲಿಸಿದಾಗ ಇಬ್ಬರು ಹುಡುಗರು ನಡೆದುಕೊಂಡು ಹೋಗುವುದು ಪತ್ತೆಯಾಗಿತ್ತು. ಸಿಸಿಟಿವಿ ಬೆನ್ನತ್ತಿ ಆರೋಪಿಗಳನ್ನು ವಶಕ್ಕೆ ಪಡೆದ ವೇಳೆ ಅದು ಹುಡುಗರಲ್ಲ, ಹುಡುಗಿಯರು ಎನ್ನುವುದು ಪತ್ತೆಯಾಗಿದೆ. ಕಳ್ಳತನ ಎಸಗಿದ ಶಾಲು ಮತ್ತು ನೀಲು ಅವರನ್ನು ಬಂಧಿಸಿದ್ದಾರೆ. ಇಬ್ಬರು ಆರೋಪಿಗಳು ಟ್ಯಾನರಿ ರಸ್ತೆಯ ನಿವಾಸಿಗಳಾಗಿದ್ದು ಹುಡುಗರ ರೀತಿ ಪ್ಯಾಂಟ್ ಶರ್ಟ್, ಟೋಪಿ ಹಾಕಿಕೊಂಡು ಬೈಕಿನಲ್ಲಿ ಓಡಾಡುತ್ತಿದ್ದರು. ನಿರ್ಜನ ಪ್ರದೇಶದ ಮನೆಗಳಲ್ಲಿ ಹಾಡುಹಗಲೇ ಕಳ್ಳತನ ಮಾಡುತ್ತಿದ್ದರು. ಸದ್ಯ ಇಬ್ಬರನ್ನು ಬಂಧಿಸಿ ಪೊಲೀಸರು ಮತ್ತಷ್ಟು ವಿಚಾರಣೆ ನಡೆಸುತ್ತಿದ್ದಾರೆ.










