ಬೆಂಗಳೂರು: ಶಿಕ್ಷಕರನ್ನು ಸಮೀಕ್ಷೆಗೆ ಸಂಪೂರ್ಣವಾಗಿ ಬಳಸಿಕೊಳ್ಳಲು ಇಂದಿನ ಸಭೆಯಲ್ಲಿ ನಿರ್ಧರಿಸಲಾಗಿದೆ. ಹೀಗಾಗಿ ಶಾಲೆಗಳಿಗೆ ನೀಡಲಾಗಿದ್ದಂತ ದಸರಾ ರಜೆಯನ್ನು ಅಕ್ಟೋಬರ್.18ರವರೆಗೆ ದಸರಾ ರಜೆಯನ್ನು ವಿಸ್ತರಣೆ ಮಾಡಲು ಸಿಎಂ ಸಿದ್ಧರಾಮಯ್ಯ ನಿರ್ಧರಿಸಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು ಕೊಪ್ಪಳ ಜಿಲ್ಲೆಯಲ್ಲಿ ಜಾತಿಗಣತಿ ಸಮೀಕ್ಷೆ ಶೇ.90ರಷ್ಟು ಆಗಿದೆ. ದಕ್ಷಿಣ ಕನ್ನಡ, ಉಡುಪಿಯಲ್ಲಿ ಶೇ.68, 69ರಷ್ಟು ಆಗಿದೆ. ಇಡೀ ರಾಜ್ಯದಲ್ಲಿ ನಮ್ಮ ನಿರೀಕ್ಷೆ ಏನಿತ್ತೋ ಅದು ಸಾಧ್ಯವಾಗಿಲ್ಲ. ಇಂದು ಸಂಜೆ ಜಾತಿಗಣತಿ ಸಮೀಕ್ಷೆ ಎಷ್ಟು ಆಗಲಿದೆ ಎಂಬುದು ತಿಳಿಯಲಿದೆ. ನನಗೆ ಬಂದಿರುವಂತ ಮಾಹಿತಿಯಂತೆ ಎಲ್ಲಾ ಜಿಲ್ಲೆಯಲ್ಲಿ ಸಂಪೂರ್ಣ ಸಮೀಕ್ಷೆಯಾಗಿಲ್ಲ ಎಂದರು. ನಾಳೆಯಿಂದ ಅಕ್ಟೋಬರ್ 8, 9, 10 ಮೂರು ದಿನ ವರ್ಕಿಂಗ್ ಡೇಸ್ ಇದೆ. 13, 14, 15, 16, 17, 18ರವರೆಗೆ ರಾಜ್ಯದ ಎಲ್ಲಾ ಶಾಲೆಗಳಿಗೆ ಸಮೀಕ್ಷೆ ಹಿನ್ನಲೆಯಲ್ಲಿ ದಸರಾ ರಜೆಯನ್ನು ವಿಸ್ತರಿಸಲು ನಿರ್ಧರಿಸಲಾಗಿದೆ ಎಂದರು. ನಿನ್ನೆ ಶಿಕ್ಷಣ ಇಲಾಖೆಯಿಂದ ಒಂದು ಆದೇಶ ಮಾಡಲಾಗಿದೆ. ಹಿಂದುಳಿದ ಆಯೋಗದ ಜೊತೆಗೆ ಚರ್ಚಿಸಿ ಮಾಡಿರುವಂತ ಆದೇಶವಾಗಿದೆ. ಇಂದು ಈ…
Author: main-admin
ಬಂಟ್ವಾಳ ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಶಿವಕುಮಾರ್ ಅವರನ್ನು ಬೈಂದೂರು ಪೊಲೀಸ್ ಠಾಣೆಗೆ ವರ್ಗಾವಣೆಗೊಳಿಸಲಾಗಿದೆ. ಮೂಲತಃ ಸಾಗರ ತಾಲೂಕಿನ ನಿವಾಸಿಯಾಗಿರುವ ಶಿವಕುಮಾರ್ ಅವರು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಅನೇಕ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಈ ಹಿಂದೆ ಬೆಳ್ತಂಗಡಿಯಿ0ದ ವರ್ಗಾವಣೆಯಾಗಿ ಬಂದಿದ್ದ ಅವರು ಕಳೆದ ಎರಡು ವರ್ಷಗಳಿಂದ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದರು.
ಕಾಸರಗೋಡು: ಹಣದ ವಿಚಾರಕ್ಕೆ ಯುವಕನೋರ್ವನಿಗೆ ದುಷ್ಕರ್ಮಿಗಳು ಚಾಕು ಇರಿದ ಘಟನೆ ಕುಂಬಳೆಯ ಸೀತಂಗೋಳಿಯಲ್ಲಿ ರಸ್ತೆ ಮಧ್ಯೆ ನಡೆದಿದೆ. ಕುಂಬಳೆಯ ಸೀತಂಗೋಳಿಯಲ್ಲಿ ಭಾನುವಾರ ರಾತ್ರಿ 12 ಗಂಟೆ ಸುಮಾರಿಗೆ ಹಣದ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ಬದಿಯಡ್ಕ ನಿವಾಸಿ ಅನಿಲ್ ಕುಮಾರ್ ಅಲಿಯಾಸ್ ಕುಟ್ಟನ್ ಎಂಬಾತನ ಕುತ್ತಿಗೆಗೆ ಚಾಕು ಇರಿಯಲಾಗಿದೆ. ಇರಿತಕ್ಕೊಳಗಾದ ಅನಿಲ್ ಕುಮಾರ್ ಬದಿಯಡ್ಕದಲ್ಲಿ ಮೀನು ವ್ಯಾಪಾರ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲದೆ ಚಾಕನ್ನು ಕುತ್ತಿಗೆಯಲ್ಲೇ ಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಇರ್ತದಿಂದ ಗಂಭೀರ ಗಾಯಗೊಂಡ ಯುವಕನನ್ನ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕುಂಬಳೆ ಪೊಲೀಸರಿಂದ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು ಕೃತ್ಯಕ್ಕೆ ಬಳಸಿದ ಎರಡು ವಾಹನವನ್ನು ವಶಕ್ಕೆ ಪಡೆಯಲಾಗಿದೆ.
ಮಂಗಳೂರು: ಕಥೋಲಿಕ್ ಉದ್ಯಮಿ, ವೃತ್ತಿಪರ ಹಾಗೂ ಕೃಷಿ ಕ್ಷೇತ್ರದ ಸಾಧಕರಿಗೆ ನೀಡುವ ರಚನಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮಂಗಳೂರಿನ ಮಿಲಾಗ್ರಿಸ್ ಸಭಾಂಗಣದಲ್ಲಿ ಅಕ್ಟೋಬರ್ 5ರಂದು ನೆರವೇರಿತು. ಸಮಾರಂಭದಲ್ಲಿ ಐವರು ಸಾಧಕರಾದ ವೃತ್ತಿಪರ ಕ್ಷೇತ್ರದಲ್ಲಿ ಮಾಜಿ ಶಾಸಕ ಜೆ.ಆರ್. ಲೋಬೋ, ಉದ್ಯಮ ಕ್ಷೇತ್ರದಲ್ಲಿ ಬೆಂಗಳೂರಿನ ಆಸ್ಟಿನ್ ರೋಚ್, ಕೃಷಿ ಕ್ಷೇತ್ರದಲ್ಲಿ ಮಂಗಳೂರಿನ ಡಾ| ಗಾಡ್ವಿನ್ ರೊಡ್ರಿಗಸ್ ಬೆಳ್ವಾಯಿ, ಅನಿವಾಸಿ ಉದ್ಯಮಿ ದುಬೈಯ ಪ್ರತಾಪ್ ಮೆಂಡೋನ್ಸಾ, ಮಹಿಳಾ ಸಾಧಕಿ ಶೋಭಾ ಮೆಂಡೊನ್ಸಾ ಅವರಿಗೆ 2023-25ನೇ ಸಾಲಿನ ರಚನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ವೇಳೆ ಇಂಧನ ಸಚಿವ ಕೆ.ಜೆ. ಜಾರ್ಜ್ ಮಾತನಾಡಿ, “ಸಾಧನೆ ಮಾಡಬೇಕೆಂದು ಅನೇಕರು ಪ್ರಯತ್ನಿಸುತ್ತಾರೆ. ಎಲ್ಲರಿಗೂ ಕೈಗೂಡುವುದಿಲ್ಲ. ಆದರೆ, ಅವರನ್ನು ಗುರುತಿಸಿ ಗೌರವಿಸುವುದು ಮುಖ್ಯವಾಗಿದೆ. ರಚನಾ ಸಂಸ್ಥೆ ಸೂಕ್ತ ಸಾಧಕರನ್ನೇ ಆಯ್ದುಕೊಂಡು ಗೌರವಿಸಿದೆ. ಸೂಕ್ತ ವ್ಯಕ್ತಿಗಳಿಗೆ ಪ್ರಶಸ್ತಿ ನೀಡುವ ಮೂಲಕ ಪ್ರಶಸ್ತಿಗೆ ಮತ್ತಷ್ಟು ಗೌರವ ಹೆಚ್ಚಾಗುವ ಜೊತೆಗೆ ಪುರಸ್ಕೃತರ ಜವಾಬ್ದಾರಿ ಹೆಚ್ಚಿದೆ. ದೇಶಕ್ಕೆ ಕೊಂಕಣಿ ಕೆಥೋಲಿಕರ ಕೊಡುಗೆ ಅವಿಸ್ಮರಣೀಯ. ರಾಜಕೀಯದಲ್ಲೂ ಕೊಂಕಣಿ…
ಮಂಗಳೂರು: ಕರ್ನಾಟಕ ಸರ್ಕಾರದ ಇಂಧನ ಸಚಿವರಾದ ಕೆ ಜೆ ಜಾರ್ಜ್ ರವರು ಬೋಂದೆಲ್ ಸಂತ ಲಾರೆನ್ಸ್ ಪುಣ್ಯ ಕ್ಷೇತ್ರ ಕ್ಕೆ ಭೇಟಿ ನೀಡಿದರು. ವಂದನೀಯ ಧರ್ಮ ಗುರು ಪೀಟರ್ ಗೊನ್ಸಲ್ವಿಸ್ ಸ್ವಾಗತ ತಿಸಿ ಅವರಿಗೆ ವಿಶೇಷ ಪ್ರಾಥನೆಸಲ್ಲಿಸಲಾಯಿತು. ವಂದನೀಯ ಧರ್ಮ ಗುರು ಲಾರೆನ್ಸ್ ಕುತಿನ್ಹ ಪಾಲನ ಮಂಡಳಿ ಉಪದೇಕ್ಷ ಜಾನ್ ಡಿಸಿಲ್ವ ಮತ್ತು ಸದಸ್ಯರಾದ ರೂಡಿ ಪಿಂಟೋ ರವರು ಅವರಿಗೆ ಶಾಲೂ, ಹೂ ಗುಚ್ಚ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಶ್ರೀ ಐ ವನ್ ಡಿಸೋಜಾ, ಮಾಜಿ ಶಾಸಕರಾದ ಶ್ರೀ ಜೆ ಆರ್ ಲೋಬೊ, ಮಂಗಳೂರು ವಿದ್ಯುತ್ ನಿಗಮ ಮಂಡಳಿ ಅಧ್ಯಕ್ಷ ಹರೀಶ್ ಕುಮಾರ್ ರಚನಾ ಅಧ್ಯಕ್ಷ ಶ್ರೀ ಜಾನ್ ಮೊಂತೆರೋ ಮತ್ತು ಇನ್ನಿತರು ಉಪಸ್ಥಿತರಿದ್ದರು
ಮಂಗಳೂರು: ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ವೇಳೆ ಕಾರನ್ನು ನಿಲ್ಲಿಸದೇ ಮುಂದೆ ತೆರಳಿದ್ದ ಚಾಲಕನ ಮೇಲೆ ಕದ್ರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ನಂತೂರು ಜಂಕ್ಷನ್‌ನಲ್ಲಿ ಅಕ್ಟೋಬರ್ 2ರಂದು ರಾತ್ರಿ ಕದ್ರಿ ಸಂಚಾರ ಠಾಣೆ ಪೊಲೀಸರು ಗಸ್ತಿನಲ್ಲಿರುವಾಗ ಕಾರೊಂದು ಬಂದಿದ್ದು, ಚಾಲಕ ಮೇಲೆ ಅನುಮಾನ ಬಂದು ನಿಲ್ಲಿಸುವಂತೆ ಸೂಚನೆ ನೀಡಿದ್ದರು. ಆದರೆ ಚಾಲಕ ಶಿವಪ್ರಸನ್ನ ಎಂಬಾತ ಪೊಲೀಸರ ಸೂಚನೆ ಹೊರತಾಗಿಯೂ ಮುಂದಕ್ಕೆ ಚಲಾಯಿಸಿಕೊಂಡು ಹೋಗಿದ್ದನು. ಈ ವೇಳೆ ಪೊಲೀಸ್ ಕಾನ್‌ಸ್ಟೆಬಲ್ ಕಾರನ್ನು ತಡೆಯಲು ಯತ್ನಿಸಿದರು. ಕಾರಿನ ಹಿಂಭಾಗಕ್ಕೆ ಪೊಲೀಸ್ ಕಾನ್ಸ್ ಸ್ಟೆಬಲ್ ತನ್ನ ಮೊಬೈಲ್‌ನಿಂದ ಬಡಿದಿದ್ದು, ಇದರಿಂದ ಕಾರಿನ ಗಾಜು ಒಡೆದಿದೆ. ಚಾಲಕನನ್ನು ಪರೀಕ್ಷೆಗೆ ಒಳಪಡಿಸಿದಾಗ ಆತ ಮದ್ಯ ಸೇವನೆ ಮಾಡಿರುವುದು ದೃಢಪಟ್ಟಿದೆ. ಮುಂದಿನ ಕ್ರಮಕ್ಕಾಗಿ ಚಾಲಕನಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.ಅಲ್ಲದೆ ಚಾಲಕ ಶಿವ ಪ್ರಸನ್ನ ವಿನಾಯಕ ಬಾಳಿಗಾ ಕೊಲೆಪ್ರಕರಣದ ಆರೋಪಿ ಮತ್ತು ರೌಡಿ ಶೀಟರ್ ಆಗಿದ್ದಾನೆ ಎಂದು ತಿಳಿಸಿದ್ದಾರೆ
ಎಂ.ಸಿ.ಸಿ. ಬ್ಯಾಂಕಿನ 21ನೇ ಶಾಖೆ ಮತ್ತು 13ನೇ ಎಟಿಎಮ್ ಅನ್ನು ಉಡುಪಿಯ ಕಲ್ಯಾಣಪುರ-ಸಂತೆಕಟ್ಟೆಯಲ್ಲಿ ಭಾನುವಾರ, 5 ನೇ ಅಕ್ಟೋಬರ್ 2025ರಂದು ಜೆಎಸ್ ಸ್ಕೇರ್ನ ನೆಲಮಹಡಿಯಲ್ಲಿ ಉದ್ಘಾಟಿಸಲಾಯಿತು. ನೂತನ ಶಾಖೆಯನ್ನು ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಅನಿಲ್ ಲೋಬೋ ಉದ್ಘಾಟಿಸಿದರು. ಸಂತೆಕಟ್ಟೆಯ ಮೌಂಟ್ ರೋಸರಿ ಚರ್ಚ್ನ ಧರ್ಮಗುರು ರೆ.ಡಾ.ರೋಕ್ ಡಿಸೋಜ ನೂತನ ಶಾಖೆಯನ್ನು ಆಶೀರ್ವಚಿಸಿದರು. ಉಡುಪಿ ಧರ್ಮಪ್ರಾಂತ್ಯದ ಪಿಆರ್ಒ ಮತ್ತು ತೊಟ್ಟಂ ಚರ್ಚ್ನ ಧರ್ಮಗುರು ರೆ.ಫಾ.ಡೆನಿಸ್ ಡೆಸಾ ಅವರು ಎಟಿಎಂ ಅನ್ನು ಉದ್ಘಾಟಿಸಿದರು. ಕಲ್ಯಾಣಪುರ-ಸಂತೆಕಟ್ಟೆ ಕರಾವಳಿ ಸಹಕಾರ ಸಂಘದ ಅಧ್ಯಕ್ಷ ಉಮೇಶ್ ಶೆಟ್ಟಿ ಅವರು ಎಟಿಎಂನಿAದ ಮೊದಲ ಹಣ ಹಿಂಪಡೆದರು. ಸೇಫ್ ರೂಮ್ ಅನ್ನು ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಅತೀ ವಂ. ಮೊ| ಫರ್ಡಿನಾಂಡ್ ಗೊನ್ಸಾಲ್ವಿಸ್ ಮತ್ತು ಇ-ಸ್ಟಾಂಪಿAಗ್ ಸೌಲಭ್ಯವನ್ನು ಸುಬ್ರಹ್ಮಣ್ಯ ನಗರದ ಸೇಂಟ್ ಪಾಲ್ ಚರ್ಚ್ನ ಸಭಾಪಾಲಕರು ರೆವೆರೆಂಡ್ ಕಿಶೋರ್ ಕುಮಾರ್ ಉದ್ಘಾಟಿಸಿದರು. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಸಿ.ಸಿ. ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಅನಿಲ್ ಲೋಬೋ ವಹಿಸಿದ್ದರು.…
ಬೆಂಗಳೂರು : ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭರ್ಜರಿ ಸಿಹಿಸುದ್ದಿ ನೀಡಿದ್ದು, ಶೀಘ್ರವೇ ಪೊಲೀಸ್ ಹುದ್ದೆಗಳಿಗೆ ವಯೋಮಿತಿ ಸಡಿಲಿಕೆ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ವಯೋಮಿತಿ ಸಡಿಲಿಕೆ ಮಾಡುವ ಕುರಿತಂತೆ ಈಗಾಗಲೇ ಬೇರೆ ರಾಜ್ಯಗಳಿಂದ ಮಾಹಿತಿ ಸಂಗ್ರಹಿಸುತ್ತಿದ್ದೇವೆ, ಶೀಘ್ರವೇ ಪೊಲೀಸ್ ಹುದ್ದೆಗಳಿಗೆ ವಯೋಮಿತಿ ಸಡಿಲಿಕೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಈ ಮೂಲಕ ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದಾರೆ. ಇನ್ನೂ ರಾಜ್ಯದಲ್ಲಿ ಜಾತಿಗಣತಿ ಸಮೀಕ್ಷೆ ದಿನಾಂಕ ವಿಸ್ತರಣೆ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಮುಖ್ಯಮಂತ್ರಿಗಳು ಕೊಪ್ಪಳದಿಂದ ವಾಪಸ್ ಆದ ಬಳಿಕ ಅಧಿಕಾರಗಳೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ರಾಜ್ಯದಲ್ಲಿ ಸಮೀಕ್ಷೆ ಪ್ರಗತಿ ಶೇ. 70-80ರಷ್ಟಾಗಿದೆ. ತಾಂತ್ರಿಕ ಹಾಗೂ ಗಣತಿದಾರರ ಗೊಂದಲದಿಂದ ಸ್ವಲ್ಪ ವಿಳಂಬವಾಗುತ್ತಿದೆ ಎಂದು ತಿಳಿಸಿದ್ದಾರೆ.
ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಕುತ್ತಿಗೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನದ ಸರವನ್ನು ಅಪರಿಚಿತ ಬೈಕ್ ಸವಾರನೋರ್ವ ಕಸಿದು ಪರಾರಿಯಾಗಿರುವ ಘಟನೆ ದಾಸಕೋಡಿ ಎಂಬಲ್ಲಿ ನಡೆದಿದೆ. ಬಾಳ್ತಿಲ ಗ್ರಾಮದ ಚೆಂಡೆ ನಿವಾಸಿ ಸರಸ್ವತಿ ಎಂಬುವರ ಕುತ್ತಿಗೆಯಲ್ಲಿದ್ದ ಸುಮಾರು ಎರಡು ಪವನ್ ತೂಕದ, ಅಂದಾಜು 2ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನು ಕಳೆದುಕೊಂಡಿದ್ದಾರೆ. ವರದಿಗಳ ಪ್ರಕಾರ, ಸರಸ್ವತಿಯವರು ಕಲ್ಲಡ್ಕ ಪೇಟೆಗೆ ತೆರಳಿ ಬಸ್‌ನಲ್ಲಿ ಮನೆಗೆ ಹಿಂತಿರುಗುತ್ತಿದ್ದರು. ದಾಸಕೋಡಿ ಪೆಟ್ರೋಲ್ ಪಂಪ್ ಬಸ್ ನಿಲ್ದಾಣದಲ್ಲಿ ಇಳಿದ ನಂತರ, ಅವರು ಹೆದ್ದಾರಿಯಲ್ಲಿ ತಮ್ಮ ಮನೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ, ಅಪರಿಚಿತ ವ್ಯಕ್ತಿಯೊಬ್ಬ ಬೈಕ್‌ನಲ್ಲಿ ಹಿಂದಿನಿಂದ ಬಂದು, ಅವರ ಕುತ್ತಿಗೆಯಲ್ಲಿದ್ದ ಸರವನ್ನು ಎಳೆದು ಮಾಣಿ ಕಡೆಗೆ ಪರಾರಿಯಾಗಿದ್ದಾನೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾರ್ಕಳ : ಅಜೆಕಾರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ದನ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಕಾರ್ಕಳದ ಮೊಹಮ್ಮದ್ ಯೂನಿಸ್, ಮೂಡುಬಿದ್ರೆಯ ಮೊಹಮ್ಮದ್ ನಾಸೀರ್ ಹಾಗೂ ಮೊಹಮ್ಮದ್ ಇಕ್ಬಾಲ್ ಎಂದು ಗುರುತಿಸಲಾಗಿದೆ. ಸೆ.28ರ ರಾತ್ರಿ ಶಿರ್ಲಾಲು ಗ್ರಾಮದ ಜಯಶ್ರೀ ಎಂಬವರ ಮನೆಗೆ ಮೂವರು ಅಪರಿಚಿತರು ತಲವಾರುಗಳೊಂದಿಗೆ ನುಗ್ಗಿ, ಬೆದರಿಕೆ ಹಾಕಿ, ಕೊಟ್ಟಿಗೆಯಲ್ಲಿದ್ದ ಸುಮಾರು 35 ಸಾವಿರ ರೂಪಾಯಿ ಮೌಲ್ಯದ ಮೂರು ಹಸುಗಳನ್ನು ಕಳವು ಮಾಡಿ ಪರಾರಿಯಾಗಿದ್ದರು. ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಡಾ. ಹರ್ಷಾ ಪ್ರಿಯಂವದಾ ಅವರ ಮಾರ್ಗದರ್ಶನದಲ್ಲಿ, ಪಿ.ಎಸ್.ಐ ಮಹೇಶ್ ಟಿ.ಎಂ ಅವರ ನೇತೃತ್ವದ ತನಿಖಾ ತಂಡವು ಸೂಕ್ಷ್ಮ ತನಿಖೆ ನಡೆಸಿ, ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದೆ. ಆರೋಪಿಗಳಿಂದ ಎರಡು ತಲವಾರುಗಳು, ಮಾರುತಿ ಸ್ವಿಫ್ಟ್ ಕಾರು, ಮಹೀಂದ್ರಾ ಬೋಲೆರೋ ವಾಹನ ಹಾಗೂ ಐದು ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದು, ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ಸುಮಾರು 5…









