Author: main-admin

ಮಂಗಳೂರು: ಪಾಂಡೇಶ್ವರ ಮಹಿಳಾ ಠಾಣೆಯ ASI ರಾಜೇಶ್ ಹೆಗ್ಢೆಯವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕಾಸರಗೋಡಿನ ಚಿತ್ತಾರಿ ನಿವಾಸಿಯಾಗಿದ್ದ ಅವರು ಉರ್ವಸ್ಟೋರ್ ಬಳಿ ಮನೆಮಾಡಿ ನೆಲೆಸಿದ್ದರು,1993 ಬ್ಯಾಚ್ ನಲ್ಲಿ ಪೋಲಿಸ್ ಇಲಾಖೆಗೆ ಸೆರ್ಪಡೆಗೊಂಡ ಅವರು ವಿಟ್ಲ ಠಾಣೆಯಲ್ಲಿ ಮೊದಲ ಕರ್ತವ್ಯವನ್ನು ನಿರ್ವಹಿಸಿದ್ದರು. ಜನಸ್ನೇಹಿ ಪೋಲಿಸರಾಗಿದ್ದ ಅವರು 32 ವರ್ಷಗಳಿಂದ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು, ಅವರು ಮಡದಿ ,ಮಗ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Read More

ಬಜ್ಪೆ: ಹಿಂದೂ ಜಾಗರಣ ವೇದಿಕೆಯ ಮುಖಂಡ ಹಾಗೂ ಮುಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್‌ರವರ ಆಪ್ತ ಸಮಿತ್ ರಾಜ್ ಅಲಿಯಾಸ್ ಸಮಿತ್ ರಾಜ್ ಧರೆಗುಡ್ಡೆ ವಿರುದ್ಧ ಯುವತಿಯೋರ್ವಳಿಗೆ ಲೈಂಗಿಕ ದೌರ್ಜನ್ಯ ಎಸಗಿ, ಕೊಲೆ ಬೆದರಿಕೆ ಹಾಕಿರುವ ಗಂಭೀರ ಆರೋಪದ ಮೇಲೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಶನಿವಾರ (ಸೆ. 27) ಪ್ರಕರಣ ದಾಖಲಾಗಿದೆ. ಏನಿದು ಆರೋಪ?ಸಂತ್ರಸ್ತ ಯುವತಿ ನೀಡಿರುವ ದೂರಿನ ಪ್ರಕಾರ, ಆರೋಪಿ ಸಮಿತ್ ರಾಜ್ 2023ರಲ್ಲಿ ಆಕೆಯ ಕುಟುಂಬದ ಕಷ್ಟಕ್ಕೆ ನೆರವಾಗುವ ನೆಪದಲ್ಲಿ ಸಂಪರ್ಕ ಬೆಳೆಸಿದ್ದಾನೆ. ನಂತರ ಪ್ರೀತಿ ಮಾಡುವ ನೆಪದಲ್ಲಿ ಆಕೆಗೆ ನಿರಂತರವಾಗಿ ಕಿರುಕುಳ ನೀಡಿದ್ದಾನೆ. ದೂರಿನಲ್ಲಿ ತಿಳಿಸಿರುವಂತೆ, 2023ರ ಮಾರ್ಚ್ 23ರಂದು ಸಮಿತ್ ರಾಜ್ ಯುವತಿಯನ್ನು ಕಾರಿನಲ್ಲಿ ಕರೆದೊಯ್ದು, ಬಜ್ಪೆ ವಿಮಾನ ನಿಲ್ದಾಣ ರಸ್ತೆಯ ನಿರ್ಜನ ಪ್ರದೇಶದಲ್ಲಿ ಬಲವಂತವಾಗಿ ಬಟ್ಟೆ ಬಿಚ್ಚಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ನಗ್ನ ಫೋಟೋಗಳಿಗೆ ಒತ್ತಾಯ:ಇದಾದ ಬಳಿಕವೂ ಆಕೆ ಒಪ್ಪದಿದ್ದಾಗ, ಅವಳ ಖಾಸಗಿ ಫೋಟೋಗಳನ್ನು…

Read More

ಉಡುಪಿ : ಎಕೆಎಂಎಸ್ ಬಸ್ ಮಾಲಕ ಸೈಫುದ್ದೀನ್ ಕೊಲೆ ಪ್ರಕರಣದ ಮೂವರು ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ. ನಂತರ ಪೊಲೀಸರು ಮೂವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಎಕೆಎಂಎಸ್ ಬಸ್ ಚಾಲಕ ಅಬ್ದುಲ್ ಶುಕೂರು, ಫೈಝಲ್ ಹಾಗೂ ಶರೀಫ್ ಶರಣಾದ ಆರೋಪಿಗಳು ಎಂದು ಗುರುತಿಸಲಾಗಿದೆ. ಈ ಮೂವರು ಆರೋಪಿಗಳು ಕೂಡಾ ಸೈಫುದ್ದೀನ್ ನ ಸಹಚರರು. ಜೊತೆಗಿದ್ದವರಿಗೇ ಸುಪಾರಿ ನೀಡಿ ಕೊಲೆ ಮಾಡಿಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಮಲ್ಪೆ ಠಾಣಾ ಪೊಲೀಸರು ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.ಅವಿನಾಶ್ ಕರ್ಕೇರ ಎಂಬವ ಈ ಪ್ರಕರಣದ ಭಾಗಿಯಾಗಿದ್ದ ಎನ್ನಲಾಗಿದೆ. ಸೆ. 27ರ ಬೆಳಗ್ಗೆ 10 ರಿಂದ 11 ಗಂಟೆ ಸುಮಾರಿಗೆ ಕೊಡವೂರಿನ ಮನೆಯೊಂದರಲ್ಲಿ ಸೈಫುದ್ದೀನ್‌ನನ್ನು ಮೂವರು ಸೇರಿ ಮಾರಕಾಸ್ತ್ರ ಗಳಿಂದ ದಾಳಿ ನಡೆಸಿ ಕೊಲೆಗೈದಿದ್ದರು. ಆರೋಪಿಗಳು ಪೊಲೀಸ್ ಠಾಣೆಗೆ ಹೋದ ನಂತರ ಸೈಪುದ್ದೀನ್ ಕೊಲೆ ವಿಚಾರ ಬೆಳಕಿಗೆ ಬಂದಿದೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿ ಶರಣಾಗಿರುವ ಮೂವರು ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದ್ದು, ಯಾವ ಕಾರಣಕ್ಕಾಗಿ ಕೊಲೆ ಮಾಡಿದ್ದಾರೆ ಎಂಬುದರ ಕುರಿತು…

Read More

ಮಂಗಳೂರು: ಮಂಗಳೂರು ದಕ್ಷಿಣ ಠಾಣಾ ಪೊಲೀಸ್‌ಗಳು ಶನಿವಾರ (ಸೆಪ್ಟೆಂಬರ್ 26) ಸಂಜೆ ದೊಡ್ಡ ಮಟ್ಟದ ಮಾದಕ ವಸ್ತು ದಾಳಿ ನಡೆಸಿ 12.2 ಕೆ.ಜಿ ಗಾಂಜಾ ವಶಪಡಿಸಿಕೊಂಡಿದ್ದು, 11 ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಸಂಜೆ 7.45ರ ಸುಮಾರಿಗೆ ದಕ್ಷಿಣ ಠಾಣಾ ಅಪರಾಧ ಪತ್ತೆ ಸಿಬ್ಬಂದಿಗಳಿಗೆ ಕೇರಳ ಮೂಲದ ಕೆಲವರು ಅತ್ತಾವರ ಕಾಪ್ರಿಗುಡ್ಡೆಯ ಕಿಂಗ್ಸ್ ಕೋರ್ಟ್ ಅಪಾರ್ಟ್‌ಮೆಂಟ್‌ನ ಪ್ಲಾಟ್ ನಂ. G1ರಲ್ಲಿ ವಾಣಿಜ್ಯ ಪ್ರಮಾಣದ ಗಾಂಜಾ ಸಂಗ್ರಹಿಸಿ ಮಾರಾಟಕ್ಕೆ ಯತ್ನಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ದೊರೆತಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ಉಪನಿರೀಕ್ಷಕ ಶೀತಲ್ ಅಲಗೂರು ಅವರ ನೇತೃತ್ವದಲ್ಲಿ ತಂಡ ಕಾರ್ಯಾಚರಣೆ ನಡೆಸಿ ಅದೈತ್ ಶ್ರೀಕಾಂತ್, ಮುಹಮ್ಮದ್ ಅಫ್ರಿನ್, ಮುಹಮ್ಮದ್ ಸ್ಕಾನೀದ್, ನಿಬಿನ್ ಟಿ ಕುರಿಯನ್, ಮುಹಮ್ಮದ್ ಕೆ.ಕೆ., ಮುಹಮ್ಮದ್ ಹನಾನ್, ಮುಹಮ್ಮದ್ ಶಾಮಿಲ್, ಅರುಣ್ ತೋಮಸ್, ಮುಹಮ್ಮದ್ ನಿಹಾಲ್ ಸಿ., ಮುಹಮ್ಮದ್ ಜಾಸೀಲ್ ವಿ. ಹಾಗೂ ಸಿದಾನ್ ಪಿ. ಸೇರಿದಂತೆ 11 ಜನರನ್ನು ಬಂಧಿಸಲಾಯಿತು. ಬಂಧಿತರಾದ ಎಲ್ಲರೂ ಮಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ದ್ವಿತೀಯ ವರ್ಷದ ಬಿಬಿಎ ವ್ಯಾಸಂಗ…

Read More

ಉಡುಪಿ: ಎಕೆಎಂಎಸ್ ಬಸ್ ಮಾಲಕ ಸೈಪು ಯಾನೇ ಸೈಫುದ್ದೀನ್ ಆತ್ರಾಡಿಯನ್ನು ಗುಂಡಿಟ್ಟು ಕೊಲೆ ಮಾಡಿದ ಘಟನೆ ಶನಿವಾರ ಮಲ್ಪೆ ಸಮೀಪದ ಕೊಡವೂರು ಬಳಿ ನಡೆದಿದೆ. ಮಣಿಪಾಲದಲ್ಲಿ ಸಾರಿಗೆ ವ್ಯವಹಾರದಲ್ಲೂ ತೊಡಗಿಸಿಕೊಂಡಿದ್ದ ಸೈಫುದ್ದೀನ್, ಅಪರಿಚಿತ ದಾಳಿಕೋರರು ಗುಂಡು ಹಾರಿಸಿದಾಗ ದಾಳಿಗೆ ಗುರಿಯಾದರು ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ, ಗುಂಡೇಟಿನ ಬಳಿಕ ಆರೋಪಿಗಳು ಅವರನ್ನು ಮತ್ತಷ್ಟು ಹಲ್ಲೆಗೊಳಪಡಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಭೇಟಿ ನೀಡಿದ್ದು ಮಾಹಿತಿ ಪಡೆದಿದ್ದಾರೆ. ಪ್ರಕರಣದ ಸಂಬಂಧ ಮಲ್ಪೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Read More

ಉಡುಪಿ: ಮಹಿಳೆಯೊಬ್ಬರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಗಳು ಐಮೊಬೈಲ್ ಆ್ಯಪ್ ಮೂಲಕ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡನಿಂದ ಒಟ್ಟು 4,31,697 – ರೂ. ಹಣವನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಮಣಿಪಾಲದ ಬೇಬಿ ಎಸ್. (55) ಇವರಿಗೆ ಗುರುವಾರ ಸಾಯಂಕಾಲ ಐಸಿಐಸಿಐ ಕ್ರೆಡಿಟ್ ಕಾರ್ಡ್ ಎಂಬ ಹೆಸರಿನಿಂದ ಕರೆ ಬಂದಿದ್ದು, ಕರೆಯನ್ನು ಸ್ವೀಕರಿಸಿದ ಸ್ವಲ್ಪ ಹೊತ್ತಿನ ಬಳಿಕ ಸ್ವಯಂಚಾಲಿತವಾಗಿ ಮೊಬೈಲ್ನಲ್ಲಿ ಅಪರಿಚಿತ ಆ್ಯಪ್ ಇನ್ಸ್ಟಾಲ್ ಆಗಿದೆ. ನಂತರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಸ್ವಲ್ಪ ಸಮಯದ ಬಳಿಕ ಮಹಿಳೆಯ ಬ್ಯಾಂಕ್ ಖಾತೆ ಕ್ರೆಡಿಟ್ ಕಾರ್ಡನಿಂದ 294800 ಮತ್ತು 129900 ರೂ. ಹಾಗೂ ಡೆಬಿಟ್ ಕಾರ್ಡನಿಂದ 2000 -ರೂ,, 999 ರೂ, 1999 ರೂ., 1999 -ರೂ ಹಣ ಕಡಿತಗೊಂಡಿದೆ. ತಕ್ಷಣ ಬ್ಯಾಂಕ್ಗೆ ಕರೆ ಮಾಡಿ ಖಾತೆಯನ್ನು ಸ್ಥಗಿತಗೊಳಿಸಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Read More

ಮಂಗಳೂರು: ಬರ್ಕೆ ಪೊಲೀಸ್ ಠಾಣೆ ಮತ್ತು ಮಂಗಳೂರು ಪೂರ್ವ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು ಮಂಗಳೂರಿನ ಅಬ್ತಾಸ್ ಹಾಜಿ ಕಾಂಪೌಂಡ್‌ನ ನಿವಾಸಿ, ಕಳೆದ ಐದು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗುವುದನ್ನು ತಪ್ಪಿಸಿಕೊಂಡಿದ್ದ ಶೇಖ್ ಶಹಬಾಜ್ (31) ಮತ್ತು ಕಸಬಾ ಬೆಂಗ್ರೆ ನಿವಾಸಿ, ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಮೊಹಮ್ಮದ್ ನಿಜಾಮುದ್ದೀನ್ ಅಲಿಯಾಸ್ ಬ್ರೋ ನಿಜಾಮ್ (30) ಎಂದು ಗುರುತಿಸಲಾಗಿದೆ. ಶಹಬಾಜ್‌ನನ್ನು ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಇಂದುಪುರ ತಾಲೂಕಿನ 2 ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಸುರುಗೂರು ಪ್ರದೇಶದಿಂದ ಸೆಪ್ಟೆಂಬರ್ 24ರ ರಾತ್ರಿ ಬಂಧಿಸಲಾಗಿದೆ. ಬರ್ಕೆ ಠಾಣೆಯ ವಾರಂಟ್ ಸಿಬ್ಬಂದಿ ಚೇತನ್ ಬಿ.ಆರ್. ಮತ್ತು ಮೋಹನ್ ಅವರು ಇಂದುಪುರ 2 ಟೌನ್ ಠಾಣೆಯ ಇನ್ಸ್ಪೆಕ್ಟರ್ ಅಬ್ದುಲ್ ಕರೀಂ ಮತ್ತು ಅಪರಾಧ ವಿಭಾಗದ ಸಿಬ್ಬಂದಿ ಸಹಾಯದಿಂದ ಈ ಕಾರ್ಯಾಚರಣೆ ನಡೆಸಿದ್ದಾರೆ. ನ್ಯಾಯಾಲಯಕ್ಕೆ ಹಾಜರಾಗದ ಕಾರಣಕ್ಕಾಗಿ ಆತನ ವಿರುದ್ಧ ಬರ್ಕೆ ಠಾಣೆಯಲ್ಲಿ ಮತ್ತೊಂದು ಪ್ರಕರಣವನ್ನು ಸಹ…

Read More

ಸಪ್ಟೆಂಬರ್ 21ರಂದು ಬೆಂದೂರ್ ಚರ್ಚ್ ಸಭಾಂಗಣದಲ್ಲಿ ಕಾಸ್ಕ್ ಸಂಸ್ಥೆಯ ವಾರ್ಷಿಕ ಮಹಾಸಭೆಯು ನಡೆಯಿತು. ಮಹಾಸಭೆಯ ನಂತರ ಸದಸ್ಯರು ಹಾಗೂ ಅವರ ಕುಟುಂಬ ಸದಸ್ಯರ ಪುನರ್ಮಿಲನ ಸಮಾರಂಭವು ನೆರವೇರಿತು. ಫ್ಲೋರಾ ಕ್ಯಾಸ್ಟೆಲಿನೊ ಸಂಚಾಲನೆಯಲ್ಲಿ ಕೊಂಕಣಿ ಸಂಸ್ಕೃತಿ ಮತ್ತು ಪರಂಪರೆಯ ಅನೇಕ ಕಾರ್ಯಕ್ರಮಗಳು ನೆರವೇರಿದವು. ರೆಮೋನಾ ಇವೆಟ್ ಪಿರೇರಾ ಭರತನಾಟ್ಯವನ್ನು ಪ್ರದರ್ಶಿಸಿದರು. ಇತ್ತೀಚೆಗೆ ನಡೆದ 120 ಗಂಟೆಗಳ ಪ್ರದರ್ಶನ ಮತ್ತು ವಿಶ್ವ ದಾಖಲೆಗಾಗಿ ಅವರನ್ನು ಅಭಿನಂದಿಸಲಾಯಿತು. ಅವರ ಅಸಾಧಾರಣ ಸಾಧನೆಗಾಗಿ ಪ್ರತಿಷ್ಠಿತ ‘ಕಾಸ್ಕ್ ಮೊತಿಯಾಂ’ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.ಸಾನ್ಸಿಯಾ ಅವರ ಕೊಂಕಣಿ ಪರಂಪರೆಯ ನುಡಿನಮನ, ಪ್ರಜ್ವಲ್ ಮತ್ತು ಶವಿಲ್ ಅವರ ‘ಗುಮಟ್’ ವಾದನ, ಮೆಲ್ವಿಟಾ ಹಾಗೂ ತಂಡದಿಂದ ದೆಖ್ಣಿ ನಾಚ್, ರೋಮಿತ್ ಹಾಗೂ ತಂಡದಿಂದ ತೊಣಿಯೊ ನಾಚ್ ನಂತಹ ಜಾನಪದ ನೃತ್ಯಗಳು ಪ್ರದರ್ಶಿಸಲ್ಪಟ್ಟವು. ಫ್ರ್ಯಾಂಕ್ಲಿನ್ ಅವರ ‘ ಮಾಂಡೊ’ ಗಾಯನವು ಉತ್ಸವಕ್ಕೆ ಶಾಸ್ತ್ರೀಯ ಗೋವಾ ಸೊಬಗನ್ನು ನೀಡಿತು. ಈ ಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿ ಪ್ರತಿಮಾ ಅವರನ್ನು ಗೌರವಿಸಲಾಯಿತು. ಜಾನೆಟ್ ಡಿಸೋಜಾ ನಡೆಸಿ ಕೊಟ್ಟ ಹೌಸಿ…

Read More

ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಬಂಧನದಲ್ಲಿದ್ದ ಯುವಕನೊಬ್ಬ ರಾಸಾಯನಿಕ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಪೊಲೀಸ್ ಮೂಲಗಳ ಪ್ರಕಾರ, ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅಪರಾಧ ಕ್ರಮಾಂಕ 43/2025 ಪ್ರಕರಣದಲ್ಲಿ 2ನೇ ಆರೋಪಿ ರಕ್ಷಿತ್ ಶೆಟ್ಟಿ (22) ಅವರನ್ನು ಸೆಪ್ಟೆಂಬರ್ 22ರಂದು ಉಡುಪಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (FTSC-1) ತನಿಖಾ ಉದ್ದೇಶಕ್ಕಾಗಿ ಪೊಲೀಸ್ ಅಭಿರಕ್ಷೆಗೆ ಒಪ್ಪಿಸಿತ್ತು. ಮಂಗಳವಾರ (ಸೆ. 23) ಬೆಳಗ್ಗೆ ಸುಮಾರು 7:30ರ ಹೊತ್ತಿಗೆ, ಆರೋಪಿ ಶೌಚಾಲಯಕ್ಕೆ ಹೋಗಲು ಗಾರ್ಡ್ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಗಳಿಗೆ ತಿಳಿಸಿದ್ದಾನೆ. ಸಿಬ್ಬಂದಿ ಆರೋಪಿ ಜೊತೆ ಶೌಚಾಲಯಕ್ಕೆ ತೆರಳಿದಾಗ, ಅವರ ಕಣ್ಣು ತಪ್ಪಿಸಿ ಬದಿಯಲ್ಲಿ ಶೌಚಾಲಯ ಸ್ವಚ್ಛತೆಗೆ ಇಡಲಾಗಿದ್ದ HARPIC ರಾಸಾಯನಿಕ ದ್ರವವನ್ನು ಸೇವಿಸಿದ್ದಾನೆಂದು ತಿಳಿದುಬಂದಿದೆ. ಘಟನೆಯ ನಂತರ ತಕ್ಷಣವೇ ಪೊಲೀಸರು ಆರೋಪಿ ಮೇಲೆ ಚಿಕಿತ್ಸೆ ನೀಡಿದ್ದು, ಈ ಆತ್ಮಹತ್ಯಾ ಯತ್ನವು ತನಿಖಾ ಪ್ರಕ್ರಿಯೆಗೆ ಅಡ್ಡಿಯಾಗುವ ಉದ್ದೇಶದಿಂದ ನಡೆದಿತ್ತೆಂಬ ಅನುಮಾನ ವ್ಯಕ್ತವಾಗಿದೆ. ಈ ಕುರಿತು ಮಹಿಳಾ ಪೊಲೀಸ್ ಠಾಣೆಯ…

Read More

ಮಂಗಳೂರಿನ ಜೋಕಟ್ಟೆ ಕೆಂಜಾರು ಗ್ರಾಮದ ಕಾಪಿಕಾಡು ಗುಡ್ಡೆ ಮನೆಯ ಯುವತಿಯೊಬ್ಬಳು ನಾಪತ್ತೆಯಾಗಿರುವ ಬಗ್ಗೆ ಬಜಪೆ ಠಾಣೆಗೆ ದೂರು ನೀಡಲಾಗಿದೆ. ಕೆಂಜಾರು ಗ್ರಾಮದ ಕಾಪಿಕಾಡು ಗುಡ್ಡೆ ಮನೆಯ ನಿವಾಸಿ ಟೀನಾ (23) ನಾತ್ತೆಯಾಗಿರುವ ಯುವತಿ. ಈಕೆ ಯಾರೂ ಇಲ್ಲದ ವೇಳೆ ಮನೆಯಿಂದ ಹೊರಟು ಹೋಗಿದ್ದು, ಬಳಿಕ ಮನೆಗೆ ವಾಪಾಸಾಗದೇ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟೀನಾ ಅವರ ಬಗ್ಗೆ ಯಾವುದೇ ಮಾಹಿತಿ ದೊರೆತರೆ ತಕ್ಷಣ ಬಜಪೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಠಾಣಾಧಿಕಾರಿ ತಿಳಿಸಿದ್ದಾರೆ.

Read More